ಭಾರತ; ಕಳೆದ 24ಗಂಟೆಗಳಲ್ಲಿ 1.26 ಲಕ್ಷ ಕೋವಿಡ್ ಪ್ರಕರಣ ಪತ್ತೆ, ಸಾವಿನ ಸಂಖ್ಯೆ 1.67ಲಕ್ಷ
ಅತೀ ಹೆಚ್ಚು ಕೋವಿಡ್ ಪ್ರಕರಣ ಹೊಂದಿರುವ 3ನೇ ದೇಶ ಭಾರತ
Team Udayavani, Apr 8, 2021, 11:29 AM IST
ನವದೆಹಲಿ:ಭಾರತದಲ್ಲಿ ಕೋವಿಡ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಿದ್ದು, ಕಳೆದ 24ಗಂಟೆಯಲ್ಲಿ ದಾಖಲೆಯ 1,26,789 ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಸಂಖ್ಯೆ 1,29,28,574ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಸಿದೆ.
ಆರೋಗ್ಯ ಸಚಿವಾಲಯ ಗುರುವಾರ(ಏಪ್ರಿಲ್ 08) ಬಿಡುಗಡೆಗೊಳಿಸಿರುವ ಅಂಕಿಅಂಶದ ಪ್ರಕಾರ, ಕಳೆದ 24ಗಂಟೆಗಳಲ್ಲಿ ಕೋವಿಡ್ ನಿಂದ 685 ಮಂದಿ ಸಾವನ್ನಪ್ಪಿದ್ದು, 59,258 ಮಂದಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿರುವುದಾಗಿ ತಿಳಿಸಿದೆ.
ದೇಶದಲ್ಲಿ ಸಕ್ರಿಯ ಕೋವಿಡ್ ಸೋಂಕು ಪ್ರಕರಣ 9,10,319ಕ್ಕೆ ಏರಿಕೆಯಾಗಿದೆ. ಕೋವಿಡ್ ನಿಂದ ಸಾವನ್ನಪ್ಪಿದ್ದವರ ಸಂಖ್ಯೆ 1,66,862ಕ್ಕೆ ಏರಿಕೆಯಾಗಿದೆ. ಜಗತ್ತಿನಲ್ಲಿ ಅಮೆರಿಕ ಮತ್ತು ಬ್ರೆಜಿಲ್ ನಂತರ ಅತೀ ಹೆಚ್ಚು ಕೋವಿಡ್ ಪ್ರಕರಣ ಹೊಂದಿರುವ 3ನೇ ದೇಶ ಭಾರತವಾಗಿದೆ ಎಂದು ವರದಿ ಹೇಳಿದೆ.
ಮಹಾರಾಷ್ಟ್ರದಲ್ಲಿ ಕಳೆದ 24ಗಂಟೆಗಳಲ್ಲಿ 59,907 ಕೋವಿಡ್ ಪ್ರಕರಣ ಪತ್ತೆಯಾಗಿದೆ, 322 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ 3,173,261 ಕೋವಿಡ್ ಪ್ರಕರಣ, ಕೇರಳದಲ್ಲಿ 1,144,594 ಪ್ರಕರಣ, ಕರ್ನಾಟಕ 1,033,560, ಆಂಧ್ರಪ್ರದೇಶ 910,943 ಮತ್ತು ತಮಿಳುನಾಡಿನಲ್ಲಿ 907,124 ಕೋವಿಡ್ ಪ್ರಕರಣ ಪತ್ತೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.