ಗಲ್ಫ್ ವಾಸಿ ಭಾರತೀಯರ ಕರೆತರಲು ನೌಕಾಪಡೆ ಸಜ್ಜು

ಐಎನ್‌ಎಸ್‌ ಜಲಾಶ್ವ ಸಹಿತ 3 ಹಡಗುಗಳ ಮೂಲಕ ಲಕ್ಷಕ್ಕೂ ಅಧಿಕ ಮಂದಿ ವಾಪಸ್‌

Team Udayavani, Apr 30, 2020, 6:12 AM IST

ಗಲ್ಫ್ ವಾಸಿ ಭಾರತೀಯರ ಕರೆತರಲು ನೌಕಾಪಡೆ ಸಜ್ಜು

ಭಾರತೀಯ ನೌಕಾದಳದ ಎರಡನೇ ದೈತ್ಯ ಹಡಗು ಐಎನ್‌ಎಸ್‌ ಜಲಾಶ್ವ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಹೊಸದಿಲ್ಲಿ: ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಸಹಸ್ರಾರು ಭಾರತೀಯ ವಲಸೆ ಕಾರ್ಮಿಕರನ್ನು ತಾಯ್ನಾಡಿಗೆ ಕರೆತರಲು ನೌಕಾಪಡೆ, ವಾಯುಪಡೆಗಳು ಸಜ್ಜಾಗಿವೆ.

ನೌಕಾಪಡೆಯು ಕನಿಷ್ಠ ಮೂರು ಹಡಗುಗಳನ್ನು ಇದಕ್ಕಾಗಿ ಸಿದ್ಧಪಡಿಸುತ್ತಿದ್ದು, ವೈದ್ಯಕೀಯ ಸೌಲಭ್ಯಗಳ ಜತೆಗೆ ಸಾಮಾಜಿಕ ಅಂತರದಲ್ಲಿ ಆಸನ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಿದೆ.

ಡಜನ್‌ಗಟ್ಟಲೆ ಯುದ್ಧ ಟ್ಯಾಂಕ್‌ಗಳನ್ನು ಸಾಗಿಸಬಲ್ಲ, ಭಾರತೀಯ ನೌಕಾದಳದ ಎರಡನೇ ದೈತ್ಯ ಹಡಗು ಐಎನ್‌ಎಸ್‌ ಜಲಾಶ್ವ ಈ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಇದಕ್ಕೆ ನಿಯೋಜಿಸಲ್ಪಟ್ಟ ಪ್ರತೀ ಹಡಗಿನಲ್ಲೂ ವೈದ್ಯಕೀಯ ತಂಡಗಳು ಇರಲಿವೆ. ಭಾರತ ಹಿಂದೆಂದೂ ಕೈಗೊಂಡಿರದಂಥ ಬಹುದೊಡ್ಡ ಸ್ಥಳಾಂತರ ಪ್ರಕ್ರಿಯೆ ಇದಾಗಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಮಂದಿಯನ್ನು ಕರೆತರಲಾಗುತ್ತದೆ.

ವ್ಯವಸ್ಥೆ ಹೇಗಿದೆ?
ಪ್ರತೀ ಹಡಗಿನಲ್ಲಿ ಸಾಮಾಜಿಕ ಅಂತರ ನೀಡಿ, ತಲಾ 500 ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಲ್ಭಾಗದ ಡೆಕ್‌ಗಳಲ್ಲಿ, ತೆರೆದ ಸ್ಥಳಗಳಲ್ಲಿ ಪುರುಷರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದರೆ, ಮಹಿಳೆಯರು, ಮಕ್ಕಳು, ವೃದ್ಧರಿಗೆ ಕೆಳಗಿನ ಡೆಕ್‌ಗಳಲ್ಲಿ ವಸತಿ ವ್ಯವಸ್ಥೆ ಇರುತ್ತದೆ. ಆಹಾರ, ಔಷಧ ಸಂಗ್ರಹ ಕಾರ್ಯ ಭರದಿಂದ ಸಾಗಿದೆ. ಕೊಚ್ಚಿ, ವಿಶಾಖಪಟ್ಟಣ, ಕಾರವಾರದಿಂದ ಈ ಹಡಗುಗಳು ಹೊರಡಲಿವೆ.

ಸ್ಥಳಾಂತರಕ್ಕೂ ಮುನ್ನ ಆರೋಗ್ಯ ಪರೀಕ್ಷೆ ನಡೆಸಲಾಗುತ್ತದೆ. ಕೋವಿಡ್ ನೆಗೆಟಿವ್‌ ಇದ್ದವರನ್ನು ವಿಮಾನಗಳಲ್ಲೂ ಕರೆತರಲಾಗುತ್ತದೆ. ಏರ್‌ ಇಂಡಿಯಾ, ಏರ್‌ಫೋರ್ಸ್‌ನ ವಿಮಾನಗಳು ಈ ಕಾರ್ಯಾಚರಣೆಗೆ ಸಜ್ಜಾಗುತ್ತಿವೆ.

ತಾಯ್ನಾಡಿಗೆ ಬಂದ ಪ್ರತಿಯೊಬ್ಬರನ್ನೂ ಮತ್ತೆ ಆರೋಗ್ಯ ಪರೀಕ್ಷೆಗೊಳಪಡಿಸಿ, 14 ದಿನಗಳ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ. ಇಂಥವರಿಗೆ ಕ್ವಾರಂಟೈನ್‌ ವ್ಯವಸ್ಥೆ ಕಲ್ಪಿಸಲು ಕೇರಳ ಈಗಾಗಲೇ ಮುಂದೆ ಬಂದಿದೆ. ಕರಾವಳಿ ತೀರಗಳನ್ನು ಹೊಂದಿರುವ ಇತರ ರಾಜ್ಯಗಳನ್ನೂ ಇದಕ್ಕಾಗಿ ಕೇಂದ್ರ ಸರಕಾರ ಒಪ್ಪಿಸುವ ಸಾಧ್ಯತೆ ಇದೆ.

ಕಾರ್ಮಿಕರಿಗೆ ಮೊದಲ ಆದ್ಯತೆ
ಯುಎಇ, ಸೌದಿ ಅರೇಬಿಯಾ, ಕುವೈಟ್‌, ಒಮಾನ್‌, ಕತಾರ್‌, ಬಹ್ರೈನ್‌ಗಳಲ್ಲಿ ನೆಲೆಸಿರುವ ಶೇ.70 ಭಾರತೀಯರು ತಾಯ್ನಾಡಿಗೆ ಮರಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅಲ್ಲಿನ ರಾಯಭಾರಿ ಕಚೇರಿಗಳನ್ನು ಸಂಪರ್ಕಿಸಿ ಸ್ಥಳಾಂತರಿಸಬೇಕಾದವರ ವಿವರಗಳನ್ನು ಒಟ್ಟುಗೂಡಿಸುವ ಪ್ರಕ್ರಿಯೆ ಆರಂಭಗೊಂಡಿದೆ.

ಮೂಲಗಳ ಪ್ರಕಾರ, ವಲಸೆ ಕಾರ್ಮಿಕರಿಗೆ ಮೊದಲ ಆದ್ಯತೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಕೆಲಸದ ಅವಧಿಯ ವೀಸಾ ಮುಗಿದಿರುವ, ಇನ್ನೇನು ಮುಗಿಯಲಿರುವ, ಹಸಿವಿನಿಂದ ಕಂಗೆಟ್ಟಿರುವ ವಲಸೆ ಕಾರ್ಮಿಕರನ್ನು ಮೊದಲ ಹಂತದಲ್ಲಿಯೇ ಕರೆತರಲಾಗುತ್ತದೆ.

ಟಾಪ್ ನ್ಯೂಸ್

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

ಜ.14: ಶಬರಿಮಲೆಯಲ್ಲಿ ಮಕರ ಸಂಕ್ರಮಣ ಪೂಜೆ

kejriwal-2

Distribution of money ಆರೋಪ: ಬಿಜೆಪಿ ಅಭ್ಯರ್ಥಿ ಸ್ಪರ್ಧೆ ನಿರ್ಬಂಧಕ್ಕೆ ಕೇಜ್ರಿ ಮನವಿ

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು

Vitla ಬೋಳಂತೂರು ಮನೆ ದರೋಡೆ ಪ್ರಕರಣ: ತನಿಖೆ ಚುರುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

modi (4)

ಇಲಾಖಾ ಮುಖ್ಯಸ್ಥರಿಗೆ “ಮನ್‌ ಕೀ ಬಾತ್‌’ ಕೇಳುವುದು ಕಡ್ಡಾಯ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

robbers

Pakistan; ಡಕಾಯಿತರಿಂದ 3 ಹಿಂದೂ ಯುವಕರ ಅಪಹರಣ

indian-flag

Republic Day: ವಿವಿಧ ಕ್ಷೇತ್ರದ 10,000 ಸಾಧಕರಿಗೆ ಆಹ್ವಾನ

naksal (2)

ಸುಕ್ಮಾ ಎನ್‌ಕೌಂಟರ್‌: ಮೂವರು ನಕ್ಸಲರ ಹ*ತ್ಯೆ

ISRO 2

ಉಪಗ್ರಹ ಜೋಡಣೆ: ತಾಂತ್ರಿಕ ಸಮಸ್ಯೆ ನಿವಾರಿಸಿದ ಇಸ್ರೋ

PM Mod

ಜ. 13ಕ್ಕೆ ಪ್ರಧಾನಿಯಿಂದ ಕಾಶ್ಮೀರದ ಜೆಡ್‌ ಮೋರ್‌ ಸುರಂಗ ಉದ್ಘಾಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.