ದೇಶದಲ್ಲಿ 50 ಲಕ್ಷ ದಾಟಿದ ಸೊಂಕಿತರ ಸಂಖ್ಯೆ: ಒಂದೇ ದಿನದಲ್ಲಿ 1,290 ಜನರು ಬಲಿ
Team Udayavani, Sep 16, 2020, 10:13 AM IST
ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ತ್ವರಿತಗತಿಯಲ್ಲಿ ಏರಿಕೆ ಕಾಣುತ್ತಿದ್ದು, ಕಳೆದ 24 ಗಂಟೆಗಳಲ್ಲಿ 901,123 ಹೊಸ ಪ್ರಕರಣಗಳು ಪತ್ತೆಯಾಗಿದೆ. ಮಾತ್ರವಲ್ಲದೆ ಸೊಂಕಿನಿಂದು ಸುಮಾರು 1,290 ಜನರು ಪ್ರಾಣ ತ್ಯೆಜಿಸಿದ್ದಾರೆ.
ಭಾರತದಲ್ಲಿ ಇದೀಗ ಒಟ್ಟು ಸೋಂಕಿತರ ಸಂಖ್ಯೆ 50ಲಕ್ಷದ ಗಡಿ ದಾಟಿದ್ದು, ಅಂಕಿ ಅಂಶಗಳ ಪ್ರಕಾರ 50,202,360 ಜನರು ವೈರಾಣು ಪೀಡಿತರಾಗಿದ್ದಾರೆ. ಇದರಲ್ಲಿ ಸುಮಾರು 39,42,361 ಜನರು ಗುಣಮುಖರಾಗಿದ್ದು, 9,95,933 ಸಕ್ರೀಯ ಪ್ರಕರಣಗಳಿವೆ.
ದೇಶದಲ್ಲಿ 78.28% ಚೇತರಿಕೆ ಪ್ರಮಾಣವಿದ್ದು ಇದೊಂದು ಅಶಾದಾಯಕ ಬೆಳವಣಿಗೆಯಾಗಿದೆ. ಜಗತ್ತಿನ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೃತರ ಪ್ರಮಾಣ 1.64% ನಷ್ಟಿದೆ.
ಮಹಾರಾಷ್ಟ್ರದಲ್ಲಿ ಕೋವಿಡ್ ಆರ್ಭಟ ಮುಂದುವರೆದಿದೆ. ಈ ರಾಜ್ಯವೊಂದರಲ್ಲೆ ಸುಮಾರು 17 ಸಾವಿರ ಪ್ರಕರಣಗಳು ಪ್ರತಿದಿನ ಪತ್ತೆಯಾಗುತ್ತಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 10.7ಲಕ್ಷಕ್ಕೆ ತಲುಪಿದೆ. ಮಹಾರಾಷ್ಟ್ರ ಹೊರತುಪಡಿಸಿದರೆ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಉತ್ತರ ಪ್ರದೇಶದಲ್ಲಿ ಸೊಂಕಿತರ ಸಂಖ್ಯೆ ದ್ವಿಗುಣವಾಗುತ್ತಿದೆ.
ಈ ನಾಲ್ಕು ರಾಜ್ಯಗಳಲ್ಲಿ 60.3% ಸಕ್ರೀಯ ಪ್ರಕರಣಗಳಿವೆ. 37% ರಷ್ಟು ಮರಣ ಪ್ರಮಾಣ ಮಹಾರಾಷ್ಟ್ರವೊಂದರಲ್ಲೇ ದಾಖಲಾಗುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.