ಇಲ್ಲಿ ಪ್ರಧಾನಿಯೇ ಸೋಂಕಿತರ ವೈದ್ಯ ; ಶಾಪವೂ ವರವಾಯಿತು ಇವರಿಗೆ


Team Udayavani, Apr 15, 2020, 11:55 PM IST

ಇಲ್ಲಿ ಪ್ರಧಾನಿಯೇ ಸೋಂಕಿತರ ವೈದ್ಯ ; ಶಾಪವೂ ವರವಾಯಿತು ಇವರಿಗೆ

ಐರ್‌ಲ್ಯಾಂಡ್‌: ಪ್ರತಿ ಸಂಕಷ್ಟದಲ್ಲೂ ಅಗೋಚರವಾದ ವರವೊಂದು ಇರುತ್ತದೆ ಎನ್ನುತ್ತಾರೆ. ಇಲ್ಲಿನ ಪ್ರಧಾನಿ ಪ್ರಧಾನಿ ಲಿಯೊ ವರಾಡ್ಕರ್‌ ವಿಚಾರದಲ್ಲಿ ಇದು ನಿಜ. ವರಾಡ್ಕರ್‌ ವೃತ್ತಿಯಿಂದ ವೈದ್ಯ. ಈ ಸಂಕಷ್ಟದ ಸಮಯದಲ್ಲಿ ಅವರು ತನ್ನ ವೃತ್ತಿಗೆ ಮರಳಿರುವುದು ಈಗ ಸರ್ವತ್ರ ಪ್ರಶಂಸೆಗೆ ಪಾತ್ರವಾಗಿ ರುವುದು ಮಾತ್ರವಲ್ಲದೆ ವರಾಡ್ಕರ್‌ ಅವರ ಕಳೆಗುಂದಿದ್ದ ರಾಜಕೀಯ ವರ್ಚಸ್ಸಿಗೂ ಹೊಸ ಕಳೆಯನ್ನು ನೀಡಿದೆ.

ಕೋವಿಡ್‌-19 ಹರಡುವುದನ್ನು ತಡೆಯಲು ಇಲ್ಲಿಯೂ ಲಾಕ್‌ ಡೌನ್‌ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ವರಾಡ್ಕರ್‌ ಸ್ವತಃ ಸೋಂಕಿತರ ಚಿಕಿತ್ಸೆಗೆ ಇಳಿದು, ವೈದ್ಯಕೀಯ ಸಮುದಾಯದ ಮುಂಚೂಣಿಯಲ್ಲಿ ನಿಂತಿದ್ದಾರೆ. ಇದರಿಂದ ವೈದ್ಯಕೀಯ ಸಮುದಾಯಕ್ಕೂ ನೈತಿಕ ಬೆಂಬಲ ಸಿಕ್ಕಂತಾಗಿದೆ.

ಕಳೆಗುಂದಿದ್ದ ರಾಜಕೀಯ ವರ್ಚಸ್ಸು
ಎರಡು ತಿಂಗಳ ಹಿಂದೆಯಷ್ಟೇ ವರಾಡ್ಕರ್‌ಗೆ ವಿಫ‌ಲ ಪ್ರಧಾನಿ ಎಂಬ ಹಣೆಪಟ್ಟಿ ಇತ್ತು. ವಸತಿ ಸಮಸ್ಯೆಯನ್ನು ಬಗೆಹರಿಸಲು ವಿಫ‌ಲರಾದರೆಂಬ ಟೀಕೆಗೆ ಗುರಿಯಾಗಿದ್ದರು. ಫೆಬ್ರವರಿಯಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಅವರ ಪಕ್ಷ ತೃತೀಯ ಸ್ಥಾನಕ್ಕೆ ಕುಸಿದಿದೆ. ಆದರೂ ಅವರು ಉಸ್ತುವಾರಿ ಪ್ರಧಾನಿಯಾಗಿ ಈಗಲೂ ಅಧಿಕಾರದಲ್ಲಿದ್ದಾರೆ.

ದೇಶದಲ್ಲಿ ಕೋವಿಡ್‌-19 ಹಾವಳಿ ತೀವ್ರಗೊಳ್ಳುತ್ತಿರುವಂತೆಯೇ ಡಾ| ವರಾಡ್ಕರ್‌ ತನ್ನ ವೈದ್ಯಕೀಯ ಸೇವೆಯನ್ನು ಮರು ನೋಂದಣಿ ಮಾಡಿ ರಂಗಕ್ಕಿಳಿದರು. ವಾರದಲ್ಲಿ ಅರ್ಧ ದಿನ ಸೋಂಕು ಇದೆ ಎಂಬ ಶಂಕೆಯಿಂದ ಕರೆ ಮಾಡುವ ಜನರಿಗೆ ಸಲಹೆ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಉಳಿದ ಸಮಯ ಆಸ್ಪತ್ರೆಗಳಿಗೆ, ಪ್ರಯೋಗಾಲಯಗಳಿಗೆ ಭೇಟಿ ನೀಡುವುದು, ಸೋಂಕು ತೀವ್ರವಾಗಿರುವ ಪ್ರದೇಶಗಳನ್ನು ನಿರಂತರವಾಗಿ ಪರಾಮರ್ಶಿಸುವ ಕಾರ್ಯಗಳಲ್ಲಿ ನಿರತರಾಗಿದ್ದಾರೆ.

ಆರಂಭದಲ್ಲಿ ಡಾ| ವರಾಡ್ಕರ್‌ ಅವರ ಈ ಕ್ರಮ ಲಜ್ಜೆಗೇಡಿ ಪ್ರಚಾರದ ಗಿಮಿಕ್‌ ಎಂಬ ಟೀಕೆಗಳು ವ್ಯಕ್ತವಾಗಿದ್ದವು. ಆದರೆ ಕ್ರಮೇಣ ಓರ್ವ ವೈದ್ಯನ ಕರ್ತವ್ಯ ಪ್ರಜ್ಞೆಯನ್ನು ಜನರು ಅವರ ನಡೆಯಲ್ಲಿ ಗುರುತಿಸಿದ್ದಾರೆ. ಹೀಗಾಗಿ ಅವರು ಮತ್ತೂಮ್ಮೆ ಐರ್‌ಲ್ಯಾಂಡಿನ‌ ಕಣ್ಮಣಿಯಾಗಿ ಮಿಂಚುತ್ತಿದ್ದಾರೆ.

ಐರ್‌ಲ್ಯಾಂಡಿನಲ್ಲಿ ಇಷ್ಟರ ತನಕ 270ಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ ಹಾಗೂ ಸುಮಾರು 6,500 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸೋಂಕಿನ ವಿರುದ್ಧ ಹಗಲಿರುಳು ಹೋರಾಡುತ್ತಿರುವ ವೈದ್ಯಕೀಯ ಸಮುದಾಯಕ್ಕೆ ಸ್ವತಃ ಪ್ರಧಾನಿಯೇ ಮುಂಚೂಣಿಯಲ್ಲಿ ನಿಂತು ತಮ್ಮನ್ನು ಮುನ್ನಡೆಸುತ್ತಿರುವುದು ಭಾರೀ ಸ್ಫೂರ್ತಿ ನೀಡಿದೆ.

ಭಾರತ ಮೂಲದವರು
ಡಾ| ಲಿಯೊ ವರಾಡ್ಕರ್‌ ಭಾರತೀಯ ಮೂಲದವರು. ಅವರ ತಂದೆ ಅಶೋಕ್‌ ವರಾಡ್ಕರ್‌ ಮೂಲ ಮನೆ ಮಹಾರಾಷ್ಟ್ರದ ರತ್ನಗಿರಿ ಸಮೀಪ ಇದೆ. ಅಶೋಕ್‌ ವರಾಡ್ಕರ್‌ ಮುಂಬಯಿಯಲ್ಲಿ ವೈದ್ಯರಾಗಿದ್ದರು. 1960ರಲ್ಲಿ ಬ್ರಿಟನ್‌ಗೆ ವಲಸೆ ಹೋಗಿ ಅಲ್ಲಿಯೇ ನೆಲೆಯಾದರು. ಅಲ್ಲಿನ ನರ್ಸ್‌ ಮರಿಯಂ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಡಾ| ಲಿಯೊ ವರಾಡ್ಕರ್‌ ಡಬ್ಲಿನ್‌ನಲ್ಲಿ ಜನಿಸಿದರು.

ಪ್ರಶಂಸೆಗಳ ಸುರಿಮಳೆ
ಯಾವ ಜನರು ಡಾ| ವರಾಡ್ಕರ್‌ ಅವರನ್ನು ವಿಫ‌ಲ ನಾಯಕ ಎಂದು ಜರೆದಿದ್ದಾರೋ ಅವರೇ ಈಗ ಸೋಂಕಿನ ವಿರುದ್ಧ ಕೈಗೊಂಡಿರುವ ಕ್ರಮಗಳನ್ನು ನೋಡಿ ಸಮರ್ಥ ನಾಯಕ ಎಂದು ಪ್ರಶಂಸಿಸುತ್ತಿದ್ದಾರೆ. ಸೋಂಕು ತೀವ್ರಗೊಳ್ಳುವ ಮುನ್ಸೂಚನೆ ಸಿಕ್ಕಿದ ಕೂಡಲೇ ವರಾಡ್ಕರ್‌ ಜನಪ್ರಿಯ ಪ್ಯಾಟಿಕ್ಸ್‌ ಡೇ ಉತ್ಸವವನ್ನು ನಿರ್ದಾಕ್ಷಿಣ್ಯವಾಗಿ ರದ್ದುಗೊಳಿಸಿದರು.

ಪ್ರಾಥಮಿಕ ಹಂತದಲ್ಲೇ ಜನರನ್ನು ಕೋವಿಡ್‌ ಪರೀಕ್ಷೆಗೊಳಪಡಿಸಿದರು. ಹೊಟೇಲ್‌, ಪಬ್‌ ಮತ್ತು ಶಾಲೆಗಳನ್ನು ಮುಚ್ಚಿಸಿದರು. ಚುನಾವಣೆ ಬಳಿಕ ವರಾಡ್ಕರ್‌ ರಾಜಕೀಯ ನಾಯಕರ ಶ್ರೇಯಾಂಕದಲ್ಲಿ ಆರು ಅಥವಾ ಏಳನೇ ಸ್ಥಾನಕ್ಕೆ ಜಾರಿದ್ದರು. ಆದರೆ ಈಗ ಮರಳಿ ಅಗ್ರಸ್ಥಾನಕ್ಕೇರಿದ್ದಾರೆ. ಈಗ ಡಾ|ವರಾಡ್ಕರ್‌ ಐರ್‌ಲ್ಯಾಂಡಿನ ಜನಪ್ರಿಯ ನಾಯಕನಾಗಿ ಮಿಂಚುತ್ತಿದ್ದಾರೆ.

ನಾವು ಕೋವಿಡ್‌ ಹರಡುವುದನ್ನು ತಡೆಯಬೇಕಿದೆ. ಜತೆಗೆ ಕೋವಿಡ್‌ ಕುರಿತಾದ ಭಯ ಹರಡುವುದನ್ನೂ ತಡೆಯಬೇಕು. ಭೀತಿಯೂ ಒಂದು ವೈರಸ್‌ ಇದು ಡಾ| ವರಾಡ್ಕರ್‌ ದೇಶದ ಜನರಿಗೆ ನೀಡಿದ ಅಭಯ. ವರಾಡ್ಕರ್‌ರ ಸಹೋದರಿಯರು ಮತ್ತು ಅವರ ಪತಿಯಂದಿರೂ ವೈದ್ಯಕೀಯ ಕ್ಷೇತ್ರದಲ್ಲಿದ್ದಾರೆ.

ಈ ಸಂಕಷ್ಟದ ಸಮಯದಲ್ಲಿ ಜನಸೇವೆ ಮಾಡುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಸೂಪರ್‌ಹೀರೊಗಳು ಟೋಪಿ ಧರಿಸಿರಲೇಬೇಕೆಂದಿಲ್ಲ. ಅವರು ಮಾಸ್ಕ್ ಮತ್ತು ಗೌನ್‌ (ವೈದ್ಯಕೀಯ) ಧರಿಸಿರಬಹುದು.

– ಡಾ| ವರಾಡ್ಕರ್‌

ಟಾಪ್ ನ್ಯೂಸ್

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

om-prakash

Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-gdp

GDP ಕುಸಿತ: ಆರ್ಥಿಕ ಹಿಂಜರಿತದತ್ತ ನ್ಯೂಜಿಲ್ಯಾಂಡ್‌

14-

Afghanistan: 2 ಅಪಘಾತ: 50 ಸಾವು, 76 ಮಂದಿಗೆ ಗಾಯ

11-missile

Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

8

Kaup town: ಟ್ರಾಫಿಕ್‌ ಒತ್ತಡ, ಪಾರ್ಕಿಂಗ್‌ ಕಿರಿಕಿರಿ

Belagavi: C.T. Ravi arrest case shifted to Bengaluru

Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.