ಹುಟ್ಟುಹಬ್ಬದ ದಿನದಂದೇ ಕೋವಿಡ್ 19 ಮಹಾಮಾರಿಗೆ ಡಿಎಂಕೆ ಶಾಸಕ ವಿಧಿವಶ
ಕೋವಿಡ್ 19 ಸೋಂಕಿನಿಂದ ಬಳಲುತ್ತಿದ್ದ ಅನ್ಭಳಗನ್ ಆರೋಗ್ಯ ಸ್ಥಿತಿ ಮಂಗಳವಾರ ರಾತ್ರಿ ಗಂಭೀರವಾಗಿತ್ತು.
Team Udayavani, Jun 10, 2020, 9:32 AM IST
ಚೆನ್ನೈ:ದೇಶಾದ್ಯಂತ ಕೋವಿಡ್ ಮಹಾಮಾರಿ ಕ್ಷಿಪ್ರವಾಗಿ ಹರಡುತ್ತಿರುವ ನಡುವೆಯೇ ತಮಿಳುನಾಡಿನ ಡಿಎಂಕೆ ಶಾಸಕ ಜೆ.ಅನ್ಭಳಗನ್ (62ವರ್ಷ) ಚೆನ್ನೈನ ಆಸ್ಪತ್ರೆಯಲ್ಲಿ ಕೋವಿಡ್ 19 ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ಅಲ್ಲದೇ ಅನ್ಭಳಗನ್ ತಮ್ಮ 62ನೇ ಹುಟ್ಟುಹಬ್ಬದ(ಜೂನ್ 10) ದಿನದಂದೇ ವಿಧಿವಶರಾಗಿದ್ದಾರೆ.
ಶಾಸಕ ಅನ್ಭಳಗನ್ ಅವರನ್ನು ಕೋರಂಪೇಟ್ ನಲ್ಲಿರುವ ಡಾ.ರೇಲಾ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಸೆಂಟರ್ ಗೆ ಜೂನ್ 2ರಂದು ದಾಖಲಿಸಲಾಗಿತ್ತು. ಆದರೆ ಕೋವಿಡ್ 19 ಸೋಂಕಿನಿಂದ ಬಳಲುತ್ತಿದ್ದ ಅನ್ಭಳಗನ್ ಆರೋಗ್ಯ ಸ್ಥಿತಿ ಮಂಗಳವಾರ ರಾತ್ರಿ ಗಂಭೀರವಾಗಿತ್ತು. ಆದರೆ ಅವರನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಿಲ್ಲ ಎಂದು ಹಿರಿಯ ವೈದ್ಯರೊಬ್ಬರು ಬುಧವಾರ ತಿಳಿಸಿದ್ದಾರೆ.
ತಮಿಳುನಾಡಿನ ಚೇಪಕ್ ಕ್ಷೇತ್ರವನ್ನು ಅನ್ಭಳಗನ್ ಅವರು ಪ್ರತಿನಿಧಿಸುತ್ತಿದ್ದರು. ಅನ್ಭಳಗನ್ ಅವರು 2001, 2011 ಮತ್ತು 2016ರಲ್ಲಿ ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2001ರಲ್ಲಿ ಟಿ ನಗರ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ನಂತರ 2011ರಲ್ಲಿ ಚೇಪಕ್ ನಲ್ಲಿ ಸ್ಪರ್ಧಿಸಿದ್ದರು. 2006ರಲ್ಲಿ ಸೋಲನ್ನನುಭವಿಸಿದ ನಂತರ ಚೇಪಕ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
ಡಿಎಂಕೆ ಪಕ್ಷದ ನಿಷ್ಠಾವಂತರಾಗಿದ್ದ ಅನ್ಭಳಗನ್ ಅವರು ಪ್ರಭಾವಶಾಲಿಯಾಗಿದ್ದರು. ನೇರ ನಡೆನುಡಿಯ ಅನ್ಭಳಗನ್ ಅವರು ಡಿಎಂಕೆ ಚೆನ್ನೈ ವೆಸ್ಟ್ ಡಿಸ್ಟ್ರಿಕ್ಟ್ ಕಾರ್ಯದರ್ಶಿಯಾಗಿದ್ದರು. ಕೆಲವು ಸಮಯ ಸಿನಿಮಾ ವಿತರಕರಾಗಿದ್ದರು. ಅನ್ಭಳಗನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಪಳನಿಸ್ವಾಮಿ ಕಂಬನಿ ಮಿಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.