ಕೋವಿಡ್ ಮಹಾಮಾರಿಗೆ ಮದ್ದರೆಯಲು ಪ್ಲಾಸ್ಮಾ ಥೆರಪಿ ಸಂಶೋಧನೆಗೆ ಒಪ್ಪಿಗೆ
Team Udayavani, Apr 10, 2020, 7:17 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಕೋವಿಡ್ 19 ವೈರಸ್ ಸೋಂಕಿತರಿಗಾಗಿ ಬಳಸಲಾಗುವ ‘ಕನ್ವಲೆಸೆಂಟ್ ಪ್ಲಾಸ್ಮಾ ಥೆರಪಿ’ ಎಂಬ ಚಿಕಿತ್ಸಾ ಕ್ರಮದ ಬಗ್ಗೆ ಮತ್ತಷ್ಟು ಅಧ್ಯಯನ ಮತ್ತು ಸಂಶೋಧನೆ ನಡೆಸಲು ಕೇರಳ ಸರಕಾರದಿಂದ ರಚನೆಯಾಗಿದ್ದ ವೈದ್ಯರು ಹಾಗೂ ಸಂಶೋಧಕರ ತಂಡ ಮುಂದಾಗಿದೆ. ಇದಕ್ಕೆ, ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್ (ಐಸಿಎಂಆರ್) ಒಪ್ಪಿಗೆ ನೀಡಿದೆ.
ಏನಿದು ಚಿಕಿತ್ಸೆ?
ಕೋವಿಡ್ 19 ವೈರಸ್ ಸೋಂಕಿನಿಂದ ಪಾರಾಗಿರುವ ವ್ಯಕ್ತಿಗಳಲ್ಲಿನ ರಕ್ತವನ್ನು ಪಡೆದು ಅದರಲ್ಲಿನ ಪ್ಲಾಸ್ಮಾವನ್ನು ಬೇರ್ಪಡಿಸಿ, ಅದನ್ನು ನಾನಾ ಕ್ಲಿನಿಕಲ್ ಕ್ರಮಗಳ ಮೂಲಕ ಔಷಧಿಯನ್ನಾಗಿ ಬಳಸುವ ಒಂದು ಪದ್ಧತಿ ರೂಢಿಯಲ್ಲಿದೆ. ಈ ಪದ್ಧತಿಯನ್ನು 1918ರಲ್ಲಿ ಮೊದಲ ಬಾರಿಗೆ ಫ್ಲ್ಯೂ ಚಿಕಿತ್ಸೆಯಲ್ಲಿ ಬಳಸಲಾಗಿತ್ತು.
ಹೇಗೆ ಕೆಲಸ ಮಾಡುತ್ತೆ?
ಸೋಂಕಿನಿಂದ ಪಾರಾಗಿರುವ ವ್ಯಕ್ತಿಗಳಲ್ಲಿ ಅಗತ್ಯ ಪ್ರಮಾಣದ ಪ್ರತಿಜೀವಕಗಳು ಸೃಷ್ಟಿಯಾಗಿರುತ್ತವೆ. ಹಾಗಾಗಿ, ಅವರ ರಕ್ತದಲ್ಲಿನ ಪ್ಲಾಸ್ಮಾವನ್ನು ತೆಗೆದು, ಸೋಂಕಿತರಿಗೆ ನೀಡಿದಾಗ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಸೋಂಕಿನಿಂದ ಪಾರಾಗಲು ಸಾಧ್ಯವಾಗುತ್ತದೆ.
ಚಿಕಿತ್ಸೆ ಬಗ್ಗೆ ಆತಂಕವೇನು?
ವೈರಾಣು, ಬ್ಯಾಕ್ಟೀರಿಯಾ ತೀವ್ರ ಬಾಧಿತರಿಗೆ ಪರಿಣಾಮಕಾರಿ ಚಿಕಿತ್ಸೆ ಇದಾಗಿದ್ದರೂ, ರೋಗಿಗಳ ಮೇಲೆ ಅಡ್ಡಪರಿಣಾಮ ಬೀರುವ ಬಗ್ಗೆ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್ಡಿಎ) ಈ ಹಿಂದೆಯೇ ಎಚ್ಚರಿಸಿದೆ. ಹಾಗಾಗಿಯೇ, ಈ ಚಿಕಿತ್ಸೆ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಕೇರಳ ವೈದ್ಯರು, ತಜ್ಞರು ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament Winter Session: ಇಂದಿನಿಂದ ಸಂಸತ್ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Mann Ki Baat: ಮೈಸೂರಿನ ‘ಅರ್ಲಿ ಬರ್ಡ್’ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Bengaluru: ಮನೆಯ ಮುಂದೆ ಕುಳಿತು ಮೊಬೈಲ್ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!
Bengaluru: ಪಾರ್ಕ್ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು
Fraud: ಸೈಟ್ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ
Bengaluru: ಹೋಟೆಲ್ನ ಬಾತ್ರೂಮ್ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು
Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.