![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 24, 2020, 11:57 AM IST
ಪ್ಯಾರಿಸ್: ಲಾಕ್‌ಡೌನ್ ಸಡಿಲಿಕೆಯಾಗುತ್ತಿದ್ದಂತೆ ಸ್ಪೇನ್‌ನಲ್ಲಿ ಸ್ಟಾರ್ ಹೊಟೇಲ್‌ಗಳು ಆರಂಭಗೊಂಡಿವೆ.
ಬೀಜಿಂಗ್: ಕೋವಿಡ್ ವೈರಸ್ ಚೀನದಲ್ಲಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದರೂ ಅಲ್ಲಿನವರು ವನ್ಯ ಪ್ರಾಣಿಗಳು ಸೇರಿದಂತೆ ಇತರ ಪ್ರಾಣಿಗಳ ಮಾಂಸವನ್ನು ತಿನ್ನುವುದನ್ನು ಬಿಟ್ಟಿಲ್ಲ. ದಕ್ಷಿಣ ಚೀನದಲ್ಲೀಗ ನಾಯಿ ಮಾಂಸ ಜಾತ್ರೆ ನಡೆಯುತ್ತಿದ್ದು ಕೋವಿಡ್‌ಗೆ ಕ್ಯಾರೇ ಅಂದಿಲ್ಲ. ಕೋವಿಡ್ ಹಬ್ಬುತ್ತಿರುವುದರಿಂದ ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ವನ್ಯಪ್ರಾಣಿಗಳು ಸೇರಿದಂತೆ ನಾಯಿ ಇತ್ಯಾದಿ ಪ್ರಾಣಿಗಳ ಮಾಂಸವನ್ನು ತಿನ್ನದೇ ಇರುವಂತೆ ಜನರಿಗೆ ಸಲಹೆ ನೀಡಿದ್ದಾರೆ. ಆದರೆ ಯುಲಿನ್ ಸಿಟಿಯಲ್ಲಿ ನಡೆಯುವ ಪ್ರಸಿದ್ಧ ನಾಯಿ ಮಾಂಸ ಜಾತ್ರೆ ನಡೆದಿದೆ.
ಇನ್ನು ಈ ಜಾತ್ರೆ ವರ್ಷವೂ ಪ್ರಾಣಿ ಹಕ್ಕು ಕಾರ್ಯಕರ್ತರ ಪ್ರತಿಭಟನೆ, ನಾಯಿಗಳ ಸಂರಕ್ಷಣೆಗೆ ಸಾಕ್ಷಿಯಾಗುತ್ತದೆ. ಚೀನದ ಹಲವು ಪ್ರಾಂತ್ಯಗಳಲ್ಲಿ ನಾಯಿ ಮಾಂಸ ತಿನ್ನುವುದು ಒಳ್ಳೆಯದು ಎಂಬ ಭಾವನೆ ಜನರಲ್ಲಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಹಲವಾರು ಮಂದಿ ಶ್ರೀಮಂತರು ನಾಯಿ ಸಾಕುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡ ಬಳಿಕ ನಾಯಿಗಳ ಹತ್ಯೆ ತುಸು ಇಳಿಕೆಯಾಗಿದೆ.
ಇದರೊಂದಿಗೆ ಎಪ್ರಿಲ್‌ನಲ್ಲಿ ಶೆನ್‌ಝೆನ್ ಮತ್ತು ಝಹಾಯಿ ಪ್ರಾಂತ್ಯದಲ್ಲಿ ವನ್ಯಪ್ರಾಣಿ ಮಾಂಸಗಳೊಂದಿಗೆ ನಾಯಿ ಮಾಂಸ ತಿನ್ನುವುದನ್ನೂ ನಿಷೇಧಿಸಲಾಗಿತ್ತು.
ನಾಯಿ ಮಾಂಸ ತಿನ್ನುವುದನ್ನು ಕಡಿಮೆ ಮಾಡುವಂತೆ ಮಾಡುವ ನಿಟ್ಟಿನಲ್ಲಿ ಕಳೆದ ತಿಂಗಳು ಕೃಷಿ ಇಲಾಖೆ ಅವುಗಳನ್ನು ತಿನ್ನುವ ಮಾಂಸದ ಸಾಲಿನಿಂದ ಕೈಬಿಟ್ಟಿದ್ದು ನಾಯಿಗಳು ಮನುಷ್ಯನಿಗೆ ಸಾಕು ಪ್ರಾಣಿಯಾಗಬಲ್ಲ ಪ್ರಾಣಿಗಳು ಎಂದು ಹೇಳಿತ್ತು. ಚೀನಾದ ನಾಯಿ ಮಾಂಸ ಜಾತ್ರೆಗೆ ದೇಶಾಂದ್ಯಂತ ವಿವಿಧ ಟ್ರಕ್‌ಗಳಲ್ಲಿ ನಾಯಿಗಳನ್ನು ಹೇರಿಕೊಂಡು ಬರಲಾಗುತ್ತದೆ. ಗ್ರಾಹಕರು ವಿವಿಧ ನಾಯಿಗಳನ್ನು ಆರಿಸಿ, ಮಾಂಸಗಳನ್ನು ತೆಗೆದುಕೊಂಡು ಹೋಗುತ್ತಾರೆ. ಈ ನಾಯಿ ಮಾಂಸ ಜಾತ್ರೆಗೆ ಸಾವಿರಾರು ಮಂದಿ ಆಗಮಿಸುತ್ತಾರೆ.
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
You seem to have an Ad Blocker on.
To continue reading, please turn it off or whitelist Udayavani.