![Arrest](https://www.udayavani.com/wp-content/uploads/2025/02/Arrest-6-415x249.jpg)
![Arrest](https://www.udayavani.com/wp-content/uploads/2025/02/Arrest-6-415x249.jpg)
Team Udayavani, Apr 13, 2021, 12:48 PM IST
ನವದೆಹಲಿ:ಭಾರತದಲ್ಲಿ ರಷ್ಯಾದ ಸ್ಫುಟ್ನಿಕ್-5 ಲಸಿಕೆ ಬಳಕೆಗೆ ಡಿಜಿಸಿಐ ಅನುಮತಿ ನೀಡಿದ್ದು, ವಾರ್ಷಿಕವಾಗಿ ಐದು ಪ್ರಯೋಗಾಲಯಗಳಲ್ಲಿ 850 ಮಿಲಿಯನ್ ಡೋಸ್ ಗಳನ್ನು ಉತ್ಪಾದಿಸಲಾಗುತ್ತದೆ. ಏತನ್ಮಧ್ಯೆ ಸದ್ಯ ತಯಾರಿಕೆಯಲ್ಲಿರುವ ಸ್ಫುಟ್ನಿಕ್-5 ಲಸಿಕೆ ಏಪ್ರಿಲ್ ಅಂತ್ಯದೊಳಗೆ ಲಭ್ಯವಾಗಲಿದೆ ಎಂದು ವರದಿ ತಿಳಿಸಿದೆ.
ಭಾರತದ ಡಿಸಿಜಿಐ(ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ರಷ್ಯಾದ ಸ್ಫುಟ್ನಿಕ್-5 ಲಸಿಕೆ ಬಳಸಲು ಅನುಮತಿ ನೀಡಿದೆ. ಹಲವಾರು ರಾಜ್ಯಗಳಲ್ಲಿ ಕೋವಿಡ್ ಲಸಿಕೆ ಕೊರತೆಯ ಹಿನ್ನೆಲೆಯಲ್ಲಿ ರಷ್ಯಾದ ಸ್ಫುಟ್ನಿಕ್-5 ಲಸಿಕೆ ಬಳಕೆಗೆ ಡಿಸಿಜಿಐ ಅನುಮತಿ ನೀಡಿರುವುದಾಗಿ ವರದಿ ಹೇಳಿದೆ.
ಭಾರತದ ರೆಡ್ಡೀಸ್ ಪ್ರಯೋಗಾಲಯದಲ್ಲಿ ಸ್ಫುಟ್ನಿಕ್-5 ಲಸಿಕೆ ಉತ್ಪಾದಿಸಲಾಗುತ್ತಿದ್ದು, ಇದು ಶೇ.91.6ರಷ್ಟು ಪರಿಣಾಮಕಾರಿಯಾಗಿದೆ ಎಂದು ತಿಳಿಸಿದೆ. ಈಗಾಗಲೇ ರೆಡ್ಡೀಸ್ ಪ್ರಯೋಗಾಲಯ ಸ್ಫುಟ್ನಿಕ್-5 ಲಸಿಕೆಯ ಪ್ರಯೋಗ ಜನರ ಮೇಳೆ ನಡೆಸಿದ್ದು, ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡುವಂತೆ ಮನವಿ ಮಾಡಿತ್ತು.
ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ರಷ್ಯಾದ ಸ್ಫುಟ್ನಿಕ್-5 ಲಸಿಕೆ ಬಳಕೆಗೆ ಅನುಮತಿ ನೀಡಿರುವುದಾಗಿ ರಷ್ಯಾದ ಆರ್ ಡಿಐಎಫ್(ರಷ್ಯನ್ ಡೈರೆಕ್ಟ್ ಇನ್ವೆಸ್ಟ್ ಮೆಂಟ್ ಫಂಡ್) ಪ್ರಕಟಣೆಯಲ್ಲಿ ತಿಳಿಸಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.