ಮೃಗಾಲಯಗಳಲ್ಲಿ ಲಾಕ್‌ಡೌನ್‌ ತೆರವು

ಪ್ರವಾಸಿಗರ ಪ್ರಮುಖ ಆಕರ್ಷಣೆ ಕೇಂದ್ರವಾಗಿರುವ ಮೃಗಾಲಯ

Team Udayavani, Jun 1, 2020, 3:05 PM IST

ಮೃಗಾಲಯಗಳಲ್ಲಿ ಲಾಕ್‌ಡೌನ್‌ ತೆರವು

ಸಾಂದರ್ಭಿಕ ಚಿತ್ರ

ಬ್ರಸೆಲ್ಸ್‌ : ಲಾಕ್‌ಡೌನ್‌ ಅನ್ನು ಎಷ್ಟು ಬೇಗ ಮತ್ತು ಯಾವ ರೀತಿ ಸಡಿಲಿಸಿ ಜನಜೀವನವನ್ನು ಸಹಜ ಸ್ಥಿತಿಗೆ ತರಬಹುದು ಎನ್ನುವುದೇ ಈಗ ಎಲ್ಲ ಸರಕಾರಗಳ ಚಿಂತೆ. ಪ್ರವಾಸೋದ್ಯಮವನ್ನು ಅವಲಂಬಿಸಿರುವ ಯುರೋಪಿನ ದೇಶಗಳಂತೂ ಲಾಕ್‌ಡೌನ್‌ ಸಡಿಲಿಕೆಗೆ ತುದಿಗಾಲಲ್ಲಿ ನಿಂತಿವೆ. ಡೆನ್ಮಾರ್ಕ್‌, ಜರ್ಮನಿ, ಫ್ರಾನ್ಸ್‌, ಇಟಲಿ, ಜೆಕ್‌ ರಿಪಬ್ಲಿಕ್‌, ಸ್ಪೈನ್‌ ಮತ್ತಿತರ ದೇಶಗಳು ಪ್ರವಾಸಿಗಳಿಗೆ ನಿಧಾನಕ್ಕೆ ತೆರೆದುಕೊಳ್ಳುತ್ತಿವೆ.

ಈ ಎಲ್ಲ ದೇಶಗಳಲ್ಲಿರುವ ಒಂದು ಸಮಾನ ಅಂಶವೆಂದರೆ ಎಲ್ಲೆಡೆ ಮೃಗಾಲಯಗಳನ್ನು ತ್ವರಿತವಾಗಿ ತೆರೆಯಲಾಗಿದೆ. ಮೃಗಾಲಯಗಳು ಪ್ರಮುಖ ಪ್ರವಾಸಿ ಆಕರ್ಷಣೆ ಕೇಂದ್ರಗಳು ಎನ್ನುವುದು ಒಂದು ಕಾರಣವಾದರೆ ಪ್ರವಾಸಿಗರಿಲ್ಲದೆ ಈ ಮೃಗಾಲಯಗಳನ್ನು ನಿರ್ವಹಿಸುವುದು ಸರಕಾರಗಳಿಗೆ ಕಷ್ಟವಾಗುತ್ತಿದೆ. ಹೀಗಾಗಿ ಮೃಗಾಲಯಗಳನ್ನು ಮೊದಲ ಆದ್ಯತೆಯಲ್ಲಿ ಪ್ರಾರಂಭಿಸಲಾಗಿದೆ.

ಉಳಿದ ಪ್ರವಾಸಿ ತಾಣಗಳನ್ನು ಮುಚ್ಚಿದಾಗ ಹೆಚ್ಚೆಂದರೆ ಸಿಬಂದಿಗಳ ವೇತನ, ವಿದ್ಯುತ್‌ ಬಿಲ್‌…ಈ ರೀತಿಯ ಖರ್ಚುಗಳ ಹೊರೆ ಮಾತ್ರ ಇತ್ತು. ಆದರೆ ಮೃಗಾಲಯಗಳಲ್ಲಿರುವ ಅಷ್ಟೂ ಮೃಗಗಳ ಹೊಟ್ಟೆತುಂಬಿಸಬೇಕು, ಅವುಗಳ ವೈದ್ಯಕೀಯ ಶುಶ್ರೂಷೆ, ಇನ್ನುಳಿದ ನಿರ್ವಹಣೆಗಳೆಲ್ಲ ಭಾರೀ ಖರ್ಚಿನ ಬಾಬತ್ತುಗಳು. ಇದನ್ನು ಭರಿಸಲಾಗದೆ ಸರಕಾರಗಳು ಕಂಗಾಲಾಗಿದ್ದವು. ಹೀಗಾಗಿ ಮೃಗಾಲಯಗಳನ್ನು ತ್ವರಿತವಾಗಿ ತೆರೆಯಲಾಗಿದೆ. ಬೆಲ್ಜಿಯಂನ ಪಾರ್ಕ್‌ ಪೈರಿ ಡಯಾಜ ಈ ಪೈಕಿ ಒಂದು ಮೃಗಾಲಯ. ಬೆಳಗ್ಗೆ ಆನೆಗಳೆಲ್ಲ ಸಾಲಾಗಿ ನಿಂತು ಒಂದು ಸುತ್ತು ವಾಕಿಂಗ್‌ ಮಾಡುವುದು ಬಳಿಕ ಮಾವುತರ ಆದೇಶದಂತೆ ಕಾಡಿನೊಳಗೆ ಹೋಗುವುದು ಇಲ್ಲಿ ವರ್ಷಗಳಿಂದ ನಡೆದುಕೊಂಡು ಬಂದ ಪರಂಪರೆ. ಇದನ್ನು ನೋಡಲೆಂದೇ ಪ್ರವಾಸಿಗರು ಬೆಳಗ್ಗಿನ ಹೊತ್ತು ಧಾವಿಸುತ್ತಿದ್ದರು. ಮಾ.13ರಂದು ಲಾಕ್‌ಡೌನ್‌ ಜಾರಿಯಾದ ಬಳಿಕವೂ ಜನರಿಲ್ಲದೆಯೇ ಈ ಪರಂಪರೆಯನ್ನು ಪಾಲಿಸಲಾಗಿತ್ತು. ಆದರೆ ಪ್ರಮುಖ ಆದಾಯ ಮೂಲವಿಲ್ಲದೆ ಪ್ರಾಣಿಗಳು ಹೊಟ್ಟೆಗೆ ಸಾಕಷ್ಟು ಆಹಾರ ಒದಗಿಸುವುದು ಕಷ್ಟವಾಗಿತ್ತು.

ಮಾಮೂಲಿಯಾಗಿ ದಿನಕ್ಕೆ 30,000 ಪ್ರವಾಸಿಗರ ಸಾಮರ್ಥ್ಯವಿದೆ ಈ ಮೃಗಾಲಯಕ್ಕೆ. ಆದರೆ ಈಗ ಸಾಮಾಜಿಕ ಅಂತರ ಪಾಲಿಸಬೇಕಿರುವುದರಿಂದ 5,000 ಪ್ರವಾಸಿಗರನ್ನು ಮಾತ್ರ ಬಿಡಲಾಗುತ್ತದೆ. ಅವರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು ಮತ್ತು ಏಕಮುಖ ಪಾದಚಾರಿ ದಾರಿಗಳಲ್ಲೇ ಓಡಾಡಬೇಕು.

ಪ್ರವಾಸಿಗರಿಲ್ಲದಿದ್ದರೆ ಮೃಗಾಲಯಗಳನ್ನು ನಿಭಾಯಿಸಿಕೊಂಡು ಹೋಗುವುದು ಕಷ್ಟ. ಪ್ರಾಣಿಗಳಿಗೆ ಅರೆ ಹೊಟ್ಟೆ ಉಂಡು ಅಭ್ಯಾಸವಿರುವುದಿಲ್ಲ. ಲಾಕ್‌ಡೌನ್‌ ಸಂದರ್ಭದಲ್ಲಿ ಅವುಗಳ ಪಾಲನೆ ಬಹಳ ಕಷ್ಟವಾಯಿತು ಎನ್ನುತ್ತಾರೆ ಪೈರಿ ಡಯಾಜ ಮೃಗಾಲಯದ ವಕ್ತಾರ ಮ್ಯಾಥ್ಯೂ ಗಾಡ್‌ಫ್ರಾಯ್‌.

ಪ್ರವಾಸಿಗರಿಲ್ಲದೆ ಪ್ರಾಣಿಗಳಿಗೂ ಒಂಟಿತನ ಕಾಡಲಾರಂಭಿಸಿತ್ತು. ಕೆಲವು ಪ್ರಾಣಿಗಳ ಸ್ವಭಾವ ಬದಲಾದದ್ದನ್ನು ನಾವು ಗಮನಿಸಿದ್ದೇವೆ. ಲಾಕ್‌ಡೌನ್‌ ದಿನಗಳಲ್ಲಿ 1.10 ಲಕ್ಷ ಡಾಲರ್‌ನಷ್ಟು ವರಮಾನ ನಿತ್ಯ ನಷ್ಟವಾಗುತ್ತಿತ್ತು ಎಂದು ತಿಳಿಸಿದ್ದಾರೆ ಮ್ಯಾಥ್ಯೂ ಗಾಡ್‌ಫ್ರಾಯ್‌.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.