36 ಸಾವಿರ ಪ್ರಾಣಗಳಿಗೆ ಎರವಾದ ಲಾಕ್‌ಡೌನ್ ವಿಳಂಬ
ಸಾಮಾಜಿಕ ಸಂಪರ್ಕಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದರೆ ಶೇ. 83 ಸಾವುಗಳನ್ನು ತಪ್ಪಿಸಬಹುದಿತ್ತು
Team Udayavani, May 22, 2020, 10:41 AM IST
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್ : ಅಮೆರಿಕದಲ್ಲಿ ಲಾಕ್‌ಡೌನ್ ಒಂದು ವಾರ ಮೊದಲೇ ಘೋಷಣೆಯಾಗುತ್ತಿದ್ದರೆ 36,000 ಪ್ರಾಣಗಳನ್ನು ರಕ್ಷಿಸಬಹುದಿತ್ತು. ಲಾಕ್‌ಡೌನ್ ಪರಿಣಾಮಗಳ ಬಗ್ಗೆ ಕೊಲಂಬಿಯ ವಿವಿ ಅಧ್ಯಯನ ನಡೆಸಿದಾಗ ಈ ಅಂಶ ವ್ಯಕ್ತವಾಗಿದೆ. ವೈರಸ್ ಪ್ರಕರಣಗಳು ಅಲ್ಲೊಂದು ಇಲ್ಲೊಂದು ವರದಿಯಾಗುತ್ತಿರುವಂತೆಯೇ ಜನರು ಮನೆಯಲ್ಲಿರ ತೊಡಗಿದ್ದರು. ತೀರಾ ಅಗತ್ಯ ಕೆಲಸಗಳಿಗಾಗಿ ಮಾತ್ರ ಓಡಾಟವಿತ್ತು. ಮಾ.1ರಂದೇ ಸಾಮಾಜಿಕ ಸಂಪರ್ಕಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದರೆ ಶೇ. 83 ಸಾವುಗಳನ್ನು ತಪ್ಪಿಸಬಹುದಿತ್ತು ಎಂದು ಅಂದಾಜಿಸಿದ್ದಾರೆ.
ಲಾಕ್‌ಡೌನ್ ಘೋಷಿಸಲು ಮೀನಾಮೇಷ ಎಣಿಸಿದ್ದು ಭಾರೀ ಪ್ರಮಾಣದ ಸಾವುಗಳಿಗೆ ಕಾರಣವಾಯಿತು. ಆಡಳಿತದಲ್ಲಿರುವವರು ತುಸು ವಿವೇಚನೆ ತೋರಿಸುತ್ತಿದ್ದರೆ ವೈರಸ್ ಹಾವಳಿಯನ್ನು ಗಣನೀಯವಾಗಿ ನಿಯಂತ್ರಿಸಬಹುದಿತ್ತು. ಕನಿಷ್ಠ ಒಂದು ವಾರ ಮುಂಚಿತವಾಗಿ ಕಾರ್ಯಪ್ರವೃತ್ತರಾಗಿದ್ದರೂ ವೈರಸ್ ಪ್ರಸರಣಕ್ಕೆ ಲಗಾಮು ಹಾಕಬಹುದಿತ್ತು. ನ್ಯೂಯಾರ್ಕ್, ನ್ಯೂ ಓರ್ಲೆನ್ಸ್ ಮತ್ತಿತರ ಪ್ರಮುಖ ನಗರಗಳಲ್ಲಿ ವೈರಸ್ ತಾಂಡವ ತೀವ್ರಗೊಂಡದ್ದೇ ಎಪ್ರಿಲ್‌ನಲ್ಲಿ. ಅಷ್ಟರ ತನಕ ಆಳುವವರ ಕೈಯಲ್ಲಿ ಸಾಕಷ್ಟು ಕಾಲಾವಕಾಶ ಇತ್ತು ಎಂದು ವಿಶ್ಲೇಷಕರು ಬೆಟ್ಟು ಮಾಡಿದ್ದಾರೆ. ಒಂದು ಸಣ್ಣ ಆಲೋಚನೆ ಇಡೀ ಪರಿಸ್ಥಿತಿಯನ್ನು ಬದಲಾಯಿಸಬಹುದಿತ್ತು ಎನ್ನುತ್ತಾರೆ ಕೊಲಂಬಿಯದ ವೈರಾಣು ತಜ್ಞ ಜೆಫ್ರಿ ಶಮನ್.
ಮಾ.1ರಂದೇ ಲಾಕ್‌ಡೌನ್ ಘೋಷಣೆಯಾಗುತ್ತಿದ್ದರೆ ಅಮೆರಿಕದಲ್ಲಿ ಸಾವಿನ ಪ್ರಮಾಣವನ್ನು ಬಹಳಷ್ಟು ಕಡಿಮೆಗೊಳಿಸಬಹುದಿತ್ತು. ಕನಿಷ್ಠ ಸಾಮಾಜಿಕ ಸಂಪರ್ಕವನ್ನಾದರೂ ಕಡಿಮೆಗೊಳಿಸಬೇಕಿತ್ತು ಎನ್ನುವುದು ವಿಶ್ಲೇಷಕರ ಅಭಿಮತ. ಆದರೆ ಟ್ರಂಪ್ ಮಾ. 16ರಂದಷ್ಟೇ ಪ್ರಯಾಣವನ್ನು ಕಡಿಮೆಗೊಳಿಸಿ ಎಂದು ಹೇಳಿದರು. ನ್ಯೂಯಾರ್ಕ್‌ನಲ್ಲಿ ಮಾ. 15ರಂದು ಶಾಲೆಗಳನ್ನು ಮುಚ್ಚಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ
Meditation; ಜಾಗತಿಕ ಶಾಂತಿ, ಏಕತೆಗೆ ಧ್ಯಾನ ಮುಖ್ಯ ಸಾಧನ: ಶ್ರೀ ಶ್ರೀ ರವಿಶಂಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.