ಇಟಲಿಯಲ್ಲೂ ಮೇ 3ರ ವರೆಗೆ ಲಾಕ್‌ಡೌನ್
ಎ. 14ರಿಂದ ಕೆಲವು ಉದ್ಯಮಗಳಿಗೆ ನಿಯಮ ಸಡಿಲಿಕೆ
Team Udayavani, Apr 16, 2020, 4:32 PM IST
ಸಾಂದರ್ಭಿಕ ಚಿತ್ರ
ರೋಮ್: ಕೋವಿಡ್ 19 ಸೋಂಕು ಹರಡುವಿಕೆಯನ್ನು ತಡೆಗ1ಟ್ಟಲು ಮೇ 3 ರ ವರೆಗೆ ಸಂಪೂರ್ಣ ಲಾಕ್‌ಡೌನ್ ವಿಸ್ತರಣೆಯಾಗಲಿದೆ ಎಂದು ಪ್ರಧಾನಿ ಗೈಸೆಪೆ ಕಾಂಟೆ ಶುಕ್ರವಾರ ಹೇಳಿದ್ದಾರೆ. ಇಟಲಿಯಲ್ಲಿ ಲಾಕ್‌ಡೌನ್ ನಿಯಮಗಳನ್ನು ಜಾರಿಗೆ ತಂದು ಒಂದು ತಿಂಗಳು ಕಳೆದಿದೆ. ಈ ಮಧ್ಯೆ ಕೋವಿಡ್-19 ಸೋಂಕಿನಿಂದ ಸಾಕಷ್ಟು ಸಾವು ನೋವುಗಳಾಗಿವೆ. ಆರ್ಥಿಕತೆಯೂ ಸಮಸ್ಯೆಗೀಡಾಗಿದೆ. ಫೆಬ್ರ ವರಿ 20ರಂದು ಇಟಲಿಯ ಉತ್ತರ ಭಾಗದ ಪಟ್ಟಣವೊಂದರಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ಆ ಬಳಿಕ ಸೋಂಕು ಕಾಳ್ಗಿಚ್ಚಿನಂತೆ ವ್ಯಾಪಿಸಿಕೊಂಡಿತು. ಆ ಬಳಿಕ ನಿರ್ಮಾಣವಾದ ಸ್ಥಿತಿಗೆ ಇಡೀ ಇಟಲಿ ತತ್ತರಿಸಿತು.
ತಗ್ಗಿದ ಸೋಂಕು ಪ್ರಮಾಣ
ಎಪ್ರಿಲ್ ಪ್ರಾರಂಭವಾದಾಗಿನಿಂದ ಸೋಂಕಿನ ಪ್ರಮಾಣವು ಗಮನಾರ್ಹವೆನ್ನುವಂತೆ ನಿಧಾನವಾಗಿದೆ. ವಾರದ ಹಿಂದೆ 4068 ಜನರು ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಆ ಸಂಖ್ಯೆ 3497 ಕ್ಕೆ ಇಳಿದಿದೆ. ಇದರೊಂದಿಗೆ ಸಾವಿನ ಪ್ರಮಾಣವೂ ಗಮನಾರ್ಹವಾಗಿ ಇಳಿಕೆಯಾಗಿದೆ.
ಲಾಕ್‌ಡೌನ್ ನಿಯಮ ಸಡಿಲ
ಮೇ 3ರ ವರೆಗೆ ಲಾಕ್ ಡೌನ್ ನಿಯಮಗಳು ಜಾರಿಯಲ್ಲಿದ್ದರೂ ಎ. 14ರ ಅನಂತರ ಕೆಲವು ನಿರ್ದಿಷ್ಟ ಉದ್ಯಮಗಳಿಗೆ ನಿಯಮ ಸಡಿಲಿಕೆ ಮಾಡಲಾಗಿದೆ. ಮರದ ಕಂಪೆನಿಗಳು, ಪುಸ್ತಕ ಮಳಿಗೆಗಳು ಮತ್ತು ಮಕ್ಕಳ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳಂತಹ ವ್ಯವಹಾರಗಳು ಆರಂಭಿಸಬಹುದೆಂದು ಕಾಂಟೆ ತಿಳಿಸಿದ್ದರು. ಪ್ರಸ್ತುತ ಸೋಂಕು ಮರುಕಳಿಕೆಯ ಬಗ್ಗೆಯೇ ಹೆಚ್ಚು ಆತಂಕ ಇಟಲಿಯನ್ನೂ ಕಾಡತೊಡಗಿದೆ. ಯಾಕೆಂದರೆ ಚೀನದಲ್ಲೂ ಇಂಥ ಪ್ರಕರಣಗಳು ಹೆಚ್ಚುತ್ತಿವೆ.
ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗದ ಹರಡುವಿಕೆ ಇನ್ನಷ್ಟು ಏರುತ್ತಲೇ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ಮಂಡಳಿ ಸದಸ್ಯ ಮತ್ತು ಇಟಾಲಿಯನ್ ಆರೋಗ್ಯ ಸಚಿವಾಲಯದ ಸಲಹೆಗಾರ ವಾಲ್ಟರ್ ರಿಕಿ ಯಾರ್ಡಿ ಆಲ್ ಜಜೀರಾ ಮಾಧ್ಯಮಕ್ಕೆ ತಿಳಿಸಿದ್ದಾರೆ. ಹುಬೈ ಪ್ರಾಂತ್ಯದಲ್ಲಿ ಹೊಸ ಸೋಂಕುಗಳ ಬೆಳವಣಿಗೆ ಶೇ.0.1ರಷ್ಟು ಇಳಿಮುಖವಾದಾಗ ಚೀನಾ ಸಹ ಕೆಲವು ಕಠಿನ ಕ್ರಮಗಳನ್ನು ಸಡಿಲಗೊಳಿಸಲು ಆರಂಭಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.