ಲಾಕ್‌ಡೌನ್ ಆರ್ಥಿಕತೆಗೆ ಒಳ್ಳೆಯದು
Team Udayavani, Jun 5, 2020, 2:26 PM IST
ಸಾಂದರ್ಭಿಕ ಚಿತ್ರ
ಬೀಜಿಂಗ್ : ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆ ಸರ್ವನಾಶವಾಗಿದೆ ಎಂದು ನೀವು ಭಾವಿಸಿದ್ದರೆ ನಿಮ್ಮ ಎಣಿಕೆ ತಪ್ಪು. ಲಾಕ್‌ಡೌನ್‌ನಿಂದ ಆರ್ಥಿಕತೆಗೆ ಒಳ್ಳೆಯದಾಗುತ್ತದೆ ಎನ್ನುತ್ತಿದೆ ಒಂದು ಅಧ್ಯಯನ.
ಕೋವಿಡ್ ವೈರಸ್ ಹರಡಲು ತೊಡಗಿದಾಗ ಚೀನದ ವುಹಾನ್‌ನಲ್ಲಿ ವಿಧಿಸಿದಂಥ ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದ ಆರಂಭದಲ್ಲಿ ಆರ್ಥಿಕತೆಗೆ ಹಿನ್ನಡೆಯಾಗಿರುವಂತೆ ಕಂಡರೂ ದೀರ್ಘಾವಧಿಯಲ್ಲಿ ಇದರಿಂದ ಹಲವು ಲಾಭಗಳೂ ಇವೆ ಎನ್ನುವುದನ್ನು ಈ ಅಧ್ಯಯನದಿಂದ ಕಂಡುಕೊಳ್ಳಲಾಗಿದೆ. ಚೀನದ ಕಟ್ಟುನಿಟ್ಟಿನ ಲಾಕ್‌ಡೌನ್ ಅಮೆರಿಕ ಹಾಗೂ ಔರೋಪ್ಯ ದೇಶಗಳು ಜಾರಿಗೊಳಿಸಿದ ಸಾಧಾರಣ ಕಟ್ಟುನಿಟ್ಟಿನ ಲಾಕ್‌ಡೌನ್‌ಗಳನ್ನು ಹೋಲಿಕೆ ಮಾಡಿ ಈ ಅಧ್ಯಯನ ನಡೆಸಲಾಗಿದೆ.
ಕಿರು ಅವಧಿಯ ಕಟ್ಟುನಿಟ್ಟಿನ ಲಾಕ್‌ಡೌನ್‌ನಿಂದ ವ್ಯಾಪಾರ ವಹಿವಾಟುಗಳಿಗೆ ದೊಡ್ಡ ಮಟ್ಟದ ಹೊಡೆತ ಬಿದ್ದಿಲ್ಲ. ಬದಲಾಗಿ ಇದರಿಂದ ಸರಕು ಮುಗಿದಿದ್ದು, ಮಾರುಕಟ್ಟೆ ಸ್ವತ್ಛವಾದದ್ದು ಸೇರಿದಂತೆ ಹಲವು ರೀತಿಯ ಪ್ರಯೋಜನಗಳಾಗಿವೆ. ಪೂರೈಕೆ ಮತ್ತು ಬೇಡಿಕೆ ನಡುವಿನ ವ್ಯತ್ಯಾಸವನ್ನು ತಿಳಿಯಲು ಲಾಕ್‌ಡೌನ್ ನೆರವಾಗಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.
ಆದರೆ ಕೋವಿಡ್ ಹಾವಳಿ ಮತ್ತೆ ಸುರುವಾಗಿ ಎರಡನೇ ಸಲ ಲಾಕ್‌ಡೌನ್ ಜಾರಿಗೊಳಿಸಿದರೆ ಮಾತ್ರ ಆರ್ಥಿಕತೆಗೆ ದೊಡ್ಡ ಮಟ್ಟದ ಹೊಡೆತ ಬೀಳಬಹುದು. ಲಾಕ್‌ಡೌನ್‌ನಿಂದಾಗಿರುವ ನಷ್ಟವನ್ನು ನಿಖರವಾಗಿ ಲೆಕ್ಕ ಹಾಕುವುದು ಈ ಸಂದರ್ಭದಲ್ಲಿ ಅಸಾಧ್ಯ. ಆದರೆ ಬರೀ ನಷ್ಟ ಮಾತ್ರ ಆಗಿದೆ ಎಂದರೆ ತಪ್ಪಾಗುತ್ತದೆ. ಅದರಿಂದಾಗುವ ಲಾಭವನ್ನು ಪರಿಗಣಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.