ಮನೌಸ್ ಶವ ಪೆಟ್ಟಿಗೆಗೂ ಸಂಕಷ್ಟ
Team Udayavani, May 3, 2020, 11:01 AM IST
ಜೇಮ್‌ಶೆಹರ್: ಇರಾನ್‌ನ ಉತ್ತರ ಭಾಗದ ಜೆಮ್‌ಶೆಹರ್‌ನಲ್ಲಿ ಕೋವಿಡ್ -19 ಗೆ ಬಲಿಯಾದವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದವರು ರಕ್ಷಣಾ ಕವಚ ಧರಿಸಿದ್ದರು.
ಮನೌಸ್: ಬ್ರೆಜಿಲ್‌ನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು , ದೇಶದ ಪ್ರಮುಖ ನಗರ ಅಮೆಜಾನ್‌ನ ರಾಜಧಾನಿ ಮನೌಸ್‌ನ ಸ್ಥಿತಿ ಚಿಂತಾಜನಕವಾಗಿದೆ. ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ನಗರದಲ್ಲಿಯೂ ದಿನಕಳೆದಂತೆ ಏರುತ್ತಿದ್ದು, ಅಂತ್ಯ ಸಂಸ್ಕಾರ ವಿಧಿ ವಿಧಾನಗಳನ್ನು ನೆರವೇರಿಸಲು ಸ್ಥಳದ ಅಭಾವ ಕಾಡುತ್ತಿದೆ. ಜತೆಗೆ ಶವ ಪೆಟ್ಟಿಗೆಯ ಕೊರತೆಯೂ ಕಾಡತೊಡಗಿದೆ.
ಒಮ್ಮೆಲೇ ದುಪ್ಪಟ್ಟು
ಈ ಹಿಂದೆ ದಿನಕ್ಕೆ ಸರಾಸರಿ 20 ರಿಂದ 35 ಸಾವು ಪ್ರಕರಣಗಳನ್ನು ದಾಖಲಿಸುತ್ತಿದ್ದ ನಗರದಲ್ಲಿ ಒಂದು ವಾರದಿಂದ ದಿನಕ್ಕೆ ಕನಿಷ್ಠ 130 ಮರಣ ಪ್ರಕರಣಗಳು ದಾಖಲಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಬ್ರೆಜಿಲ್ ಆರೋಗ್ಯ ಸಚಿವಾಲಯದ ವರದಿ ಪ್ರಕಾರ ಎಪ್ರಿಲ್ 30ರ ಹೊತ್ತಿಗೆ ಅಮೆಜಾನ್ ರಾಜ್ಯದ್ಲಲಿ 5,200 ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 425 ಮಂದಿ ಅಸುನೀಗಿದ್ದಾರೆ.
ಶವಪೆಟ್ಟಿಗೆ ಆಮದು
ಮನೌಸ್‌ನಲ್ಲಿ ಶವಪೆಟ್ಟಿಗೆಗಳ ಸಂಗ್ರಹ ಇಲ್ಲದ ಕಾರಣ 2,700 ಕಿ.ಮೀ. ದೂರ ಇರುವ ಸಾವೋ ಪೌಲೋನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಮನೌಸ್ ಹಾಗೂ ಸಾವೋ ಪೌಲೋ ಸಂಪರ್ಕಿಸಲು ರಸ್ತೆಗಳೂ ಸರಿಯಾಗಿಲ್ಲದ ಕಾರಣ ಶವಪೆಟ್ಟಿಗೆಗಳನ್ನು ಏರ್‌ಲಿಫ್ಟ್ ಮಾಡಲಾಗುತ್ತಿದೆ. ಸುಮಾರು 20ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಈ ನಗರ ಅಮೆಜಾನ್ ಅರಣ್ಯ ಪ್ರದೇಶದಿಂದ ಸುತ್ತವರೆದಿದೆ. ಅಲ್ಲಿನ ಸಮದಾಯಗಳಿಗೂ ಮನೌಸ್‌ನ ಆರೋಗ್ಯ ವ್ಯವಸ್ಥೆಯೇ ಆಧಾರ. ಪರಿಣಾಮ ಮುಂದಿನ ದಿನಗಳಲ್ಲಿ ಸೋಂಕು ಪ್ರಸರಣ ಮತ್ತಷ್ಟು ಹೆಚ್ಚುವ ಭೀತಿ ಆವರಿಸಿದೆ. ಇದರ ಮಧ್ಯೆಯೇ ಇಲ್ಲಿನ ಜನರು ಲಾಕ್‌ಡೌನ್ ನಿಯಮಗಳನ್ನು ತೆರವುಗೊಳಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಐಸೋಲೇಷನ್ ಪದ್ಧತಿಯೇ ಬೇಡ ಎಂದೂ ಆಗ್ರಹಿಸುತ್ತಿದ್ದಾರೆ. ಇದು ಸ್ಥಳೀಯ ಆಡಳಿತವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.