![Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು](https://www.udayavani.com/wp-content/uploads/2024/12/vv-4-415x234.jpg)
ಅಮೆರಿಕದ ಹಾರ್ಟ್ ದ್ವೀಪದ ಸಾಮೂಹಿಕ ಸಮಾಧಿಯ ಕಥೆ
Team Udayavani, Apr 20, 2020, 5:45 PM IST
![ಅಮೆರಿಕದ ಹಾರ್ಟ್ ದ್ವೀಪದ ಸಾಮೂಹಿಕ ಸಮಾಧಿಯ ಕಥೆ](https://www.udayavani.com/wp-content/uploads/2020/04/hearts-island-620x348.jpg)
ನ್ಯೂಯಾರ್ಕ್: ಕೋವಿಡ್ 19 ವೈರಸ್ ಸಾಂಕ್ರಾಮಿಕ ಸಮಯದಲ್ಲಿ ನ್ಯೂಯಾರ್ಕ್ ಕುಟುಂಬಗಳ ಸಾಮೂಹಿಕ-ಸಮಾಧಿಗಳ ಸಂಖ್ಯೆ ಹೆಚ್ಚಾಗಿದೆ. ಬಹುತೇಕ ಮೃತಪಟ್ಟ ದೇಹಗಳನ್ನು ಅವರ ಕುಟುಂಬದವರಿಗೆ ನೋಡಲಾಗಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ದೇಹಗಳ ಗುರುತು ಹಚ್ಚಲಾಗದೇ ಅಂತ್ಯಕ್ರಿಯೆಯನ್ನು ನಡೆಸಲು ಸಾಧ್ಯವಾಗಿಲ್ಲ.
ಇತ್ತೀಚಿನ ವಾರಗಳಲ್ಲಿ ವಾರಕ್ಕೆ ಸರಾಸರಿ 25ರಿಂದ 120ಕ್ಕೆ ಏರಿದೆ. ಈ ವಾರ ಹಾರ್ಟ್ ದ್ವೀಪದಲ್ಲಿ 100 ಸಮಾಧಿಗಳು ನಡೆದಿವೆ. ನ್ಯೂಯಾರ್ಕ್‌ನಾದ್ಯಂತ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮೃತ ದೇಹಗಳನ್ನು ಹೂಳಲು ಜಾಗವಿಲ್ಲದಾಗಿದೆ. ಸಾಮೂಹಿಕ ಸಮಾಧಿಗಳಿಗೆ ಸಾರ್ವಜನಿಕ ಉದ್ಯಾನವನಗಳನ್ನು ಅಗೆಯಲಾಗುತ್ತಿದೆ. ಈ ಹಿಂದೆ ಜನರ ಪ್ರಾಣ ಕಿತ್ತುಕೊಂಡಿದ್ದ ಅನೇಕ ವೈರಸ್‌ಗಳ ಸಂದರ್ಭ ನ್ಯೂಯಾರ್ಕ್ ನಗರದ ಸುತ್ತಮುತ್ತಲಿನ ಪ್ರಮುಖ ಉದ್ಯಾನವನಗಳೀಗ ಸಾಮೂಹಿಕ ಸಮಾಧಿಗಳ ತಾಣಗಳಾಗಿ ಬದಲಾಗಿವೆ.
ಹಾರ್ಟ್ ದ್ವೀಪದ ಡ್ರೋನ್ ವೀಡಿಯೊಗಳು ಘಟನೆಗಳ ತೀವ್ರತೆಯನ್ನು ಪ್ರದರ್ಶಿಸಿವೆ. ಬಿಳಿ ಹಜ್ಮತ್ ಸೂಟ್‌ಗಳನ್ನು ಧರಿಸಿದ ಜನರು ಶವಪೆಟ್ಟಿಗೆಯನ್ನು ಎತ್ತುವ ಮತ್ತು ಎರಡು ಉದ್ದದ ಸಾಲುಗಳಲ್ಲಿ ಮೂರು ಶವಪೆಟ್ಟಿಗೆಯನ್ನು ಒಂದರ ಮೇಲೊಂದು ಜೋಡಿಸುವ ದೃಶ್ಯ ವೈರಲ್ ಆಗುತ್ತಿದೆ.
ಆಸ್ಪತ್ರೆಗಳ ಶವಾಗಾರಗಳಿಂದ ಟ್ರಕ್‌ಗಳಲ್ಲಿ ಶವಗಳನ್ನು ಸಂಗ್ರಹಿಸಿಡಲಾಗುತ್ತಿದೆ. ನಗರವೊಂದರಲ್ಲೇ ಸಾವಿನ ಸಂಖ್ಯೆ 10,000 ದಾಟಿದೆ. 15 ದಿನಗಳೊಳಗೆ ಸಂಬಂಧಿಕರಿಂದ ಗುರುತಿಸಲ್ಪಡದ ಶವಗಳನ್ನು ಹಾರ್ಟ್ ದ್ವೀಪದಲ್ಲಿ ಸಮಾಧಿ ಮಾಡಲಾಗುವುದು ಎಂದು ಸರಕಾರ ಘೋಷಿಸಿದೆ.
ಇಷ್ಟು ದಿನಗಳವರೆಗೆ ಆಸ್ಪತ್ರೆಯಲ್ಲಿಯೇ ಮೃತದೇಹಗಳನ್ನು ಭದ್ರವಾಗಿಡಲಾಗುತ್ತದೆ. ವೈದ್ಯಕೀಯ ಪರೀಕ್ಷಕರು ದೇಹಗಳನ್ನು ಹೆಚ್ಚು ಹೊತ್ತು ಇಟ್ಟುಕೊಂಡಿ¨ªಾರೆ.
ಸಾಮಾನ್ಯ ಸಂದರ್ಭಗಳಲ್ಲಿ ಹಾರ್ಟ್ ದ್ವೀಪವು ವರ್ಷಕ್ಕೆ ಸರಾಸರಿ 1,200 ಸಮಾಧಿಗಳನ್ನು ಮಾಡುತ್ತದೆ. ಆದರೆ ಈ ಹಿಂದೆ ಈ ದ್ವೀಪದಲ್ಲಿ ಸಾಂಕ್ರಾಮಿಕ ರೋಗದಿಂದ ಸಂಭವಿಸಿದ ಸಾವುಗಳ ಸಾಮೂಹಿಕ ಸಮಾಧಿಗೂ ಮತ್ತು ಈಗಿನ ಸಮಾಧಿಗಳಿಗೆ ಇರುವ ವ್ಯತ್ಯಾಸವೆಂದರೆ, ಈ ಬಾರಿ ಶವಪೆಟ್ಟಿಗೆಯ ಬದಿಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಹೆಸರುಗಳನ್ನು ಬರೆಯಲಾಗಿದೆ.
ಟಾಪ್ ನ್ಯೂಸ್
![Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು](https://www.udayavani.com/wp-content/uploads/2024/12/vv-4-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-lasike](https://www.udayavani.com/wp-content/uploads/2024/12/1-lasike-150x84.jpg)
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
![Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!](https://www.udayavani.com/wp-content/uploads/2024/12/ISRAEL-SYRIA--150x104.jpg)
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
![ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ](https://www.udayavani.com/wp-content/uploads/2024/12/us-1-150x100.jpg)
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
![Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ](https://www.udayavani.com/wp-content/uploads/2024/12/Moscow-150x96.jpg)
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
![Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ](https://www.udayavani.com/wp-content/uploads/2024/12/Flood-150x84.jpg)
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
![Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು](https://www.udayavani.com/wp-content/uploads/2024/12/vv-4-150x84.jpg)
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
![Gold-saffron](https://www.udayavani.com/wp-content/uploads/2024/12/Gold-saffron-150x90.jpg)
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
![Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು](https://www.udayavani.com/wp-content/uploads/2024/12/ashok-h-150x100.jpg)
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
![United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ](https://www.udayavani.com/wp-content/uploads/2024/12/sri-sri-ravi-shankar-150x87.jpg)
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
![KSA-Nia-Arrest](https://www.udayavani.com/wp-content/uploads/2024/12/KSA-Nia-Arrest-150x90.jpg)
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.