ಕೊರೋನಾ ಕಥೆ: ದುಡ್ಡಿಲ್ಲದ್ದಕ್ಕೆ 600 ಕಿ.ಮೀ. ನಡೆದೇ ಸಾಗಿದರು!
Team Udayavani, Apr 25, 2021, 9:25 AM IST
ದೂರದ ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಕಟ್ಟಡ ಕಾರ್ಮಿಕರಾದ ಪವನ್‌ಧೂರ್ವೆ, ಫಂಡೆ ಮಿಥುಸಿಂಗ್ ಲಾಲ್ ಅವರ ಕಥೆಯಿದು. ಬೆಂಗಳೂರಿನಲ್ಲಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ತಮ್ಮೂರಿಗೆ ತೆರಳಲು ನಿರ್ಧರಿಸಿದ ಈ ಇಬ್ಬರೂ ಕೈಯ್ಯಲ್ಲಿ ಕಾಸಿಲ್ಲದ ಕಾರಣ, ರೈಲು ಹಳಿಯ ಬದಿಯಲ್ಲಿ ನಡೆಯುತ್ತಾ ಬೆಂಗಳೂರಿನಿಂದ ಬೆಳಗಾವಿವರೆಗೆ ಸುಮಾರು 600 ಕಿ.ಮೀ.ವರೆಗೆ ಕ್ರಮಿಸಿದ್ದಾರೆ.
ಬೆಳಗಾವಿಯ ಗಾಂಧಿನಗರದ ರೈಲ್ವೇ ಕ್ರಾಸಿಂಗ್‌ನಲ್ಲಿನ ವಾಚ್‌ಮನ್ ಇವರಿಬ್ಬರನ್ನು ನಿಲ್ಲಿಸಿ ಕಾರಣ ಕೇಳಿದಾಗ ತಮ್ಮ ಮೇಸ್ತ್ರೀ ತೀರಿಕೊಂಡಿದ್ದು, ತಮಗೆ ಕೂಲಿಯನ್ನೂ ನೀಡಿಲ್ಲ. ಹಾಗಾಗಿ ರೈಲ್ವೇ ಟಿಕೆಟ್ ಕೊಳ್ಳಲೂ ಹಣವಿಲ್ಲದ್ದರಿಂದ ನಡೆದೇ ಊರು ಸೇರಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.
ಇದನ್ನೂ ಓದಿ:ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕರ್ ಸ್ಪೋಟ: 27 ಮಂದಿ ದುರ್ಮರಣ
ಆಗ ವಾಚ್‌ಮನ್ ಇವರಿಗೆ ಆಹಾರ, ನೀರು ಕೊಟ್ಟು, ಸ್ಥಳೀಯ ಸಮಾಜ ಸೇವಕ ರವಿ ನಿರ್ಮಾಳ್ಕರ್ ಎಂಬವರಿಗೆಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ರವಿಯವರ ತಂಡ ಆಗಮಿಸಿ, ಕಾರ್ಮಿಕರಿಗೆ ಊಟ, ಆಶ್ರಯ ನೀಡಿ, ರೈಲ್ವೇ ಟಿಕೆಟ್‌ಗಳನ್ನೂ ಕೊಂಡು ಕೊಟ್ಟಿದ್ದಾರೆ. ಅದರಿಂದ ಶುಕ್ರವಾರ ಸಂಜೆ ಗೋವಾ ಎಕ್ಸ್‌ಪ್ರೆಸ್‌ನಲ್ಲಿ ಇವರು ತಮ್ಮೂರಿಗೆ ಮರಳಿದ್ದಾರೆ.
ಇದನ್ನೂ ಓದಿ: 15 ದಿನ ಕರ್ಫ್ಯೂ ವಿಸ್ತರಣೆ? ವಾರಾಂತ್ಯ ಕರ್ಫ್ಯೂ ಯಶಸ್ವಿ ಬೆನ್ನಲ್ಲೇ ಚಿಂತನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.