ಸ್ವೀಡನ್: ಅವ್ಯವಹಾರ ತನಿಖೆಗೆ ಅಧಿಕಾರಿ
ಕೋವಿಡ್ ಪರಿಹಾರಕ್ಕೆ ಖರ್ಚು ಮಾಡುವ ಹಣ ಭ್ರಷ್ಟರ ಜೇಬಿಗೆ ಹೋಗಬಾರದು
Team Udayavani, May 8, 2020, 5:05 PM IST
ಜರ್ಮನ್‌ನಲ್ಲಿ ಲಾಕ್‌ಡೌನ್ ಸಡಿಸಲಾಗಿದ್ದು ಜನರು ಪಾರ್ಕ್ ಮತ್ತು ಓಪನ್ ಏರಿಯಾ ಡಿನ್ನರ್‌ಗಳಲ್ಲಿ ಭಾಗಿಯಾಗಿರುವುದು.
ಮಣಿಪಾಲ: ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಹಣಗಳು ಪೋಲು ಆಗಬಾರದು ಎಂಬ ಕಾರಣಕ್ಕೆ ಸ್ವೀಡಿಷ್ ಸರಕಾರ ತನಿಖಾಧಿಕಾರಿಯನ್ನು ನೇಮಿಸಲು ಮುಂದಾಗಿದೆ. ಕೊರೊನಾ ಪರಿಹಾರಕ್ಕೆ ಮೀಸಲಾದ ಹಣ ಯಾವುದೇ ಕಾರಣಕ್ಕೆ ದುಂದು ವೆಚ್ಚವಾಗಬಾರದು ಎಂಬ ಕಾರಣಕ್ಕಾಗಿ ಈ ಕ್ರಮ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಹೆಚ್ಚಿನ ಜನರು ಸಹಾಯ ಮಾಡಲು ಮುಂದಾಗುತ್ತಾರೆ. ಬಡವರಿಗೆ ಮತ್ತು ಸಮಸ್ಯೆಯಲ್ಲಿ ಸಿಲುಕಿ ಹಾಕಿಕೊಂಡವರಿಗೆ ನೆರವಾಗಲು ಮುಂದಾಗುತ್ತಾರೆ. ಆದರೆ ಎಲ್ಲರೂ ಅಲ್ಲ. ಕೆಲವರು ಈ ಸಂದರ್ಭಗಳನ್ನು ದುರ್ಬಳಕೆ ಮಾಡಿಕೊಳ್ಳುವ ಅಪಾಯ ಇದೆ. ಸರಕಾರ ಖರ್ಚು ಮಾಡುವ ಹಣವು ಬಿಕ್ಕಟ್ಟಿನ ನಿರ್ವಹಣೆಗೆ ಹೋಗಬೇಕೇ ಹೊರತು ಭ್ರಷ್ಟರ ಜೇಬಿಗೆ ಬೀಳಬಾರದು ಎಂಬುದು ಸರಕಾರದ ಲೆಕ್ಕಾಚಾರ. ಹಾಗಾಗಿ ವಿಶೇಷ ತನಿಖಾಧಿಕಾರಿಯನ್ನು ನೇಮಿಸಲು ಮುಂದಾಗಿದೆ.
ಈ ತನಿಖಾಧಿಕಾರಿಗೆ ಆ್ಯಂಟಿ ಫ್ರಾಡ್ ಜನರಲ್’ ಎಂದು ಹೆಸರಿಡಲಾಗಿದೆ. ಸರಕಾರ ನೀಡುವ ನೆರವಿನ ಪ್ಯಾಕೇಜ್‌ಗಳು ಸರಿಯಾಗಿ ಬಳಕೆಯಾಗುತ್ತಿವೆಯೇ? ಎಂಬುದನ್ನು ಪರಿಶೀಲಿಸುವುದು ಮತ್ತು ಯಾವುದೇ ಅಕ್ರಮಗಳು ಅಥವಾ ಅನುಮಾನಾಸ್ಪದ ಚಟುವಟಿಕೆಗಳನ್ನು ನಿಯಂತ್ರಿಸುವುದು ಇವರ ಕೆಲಸವಾಗಿದೆ. ಈ ವರೆಗೆ ಸ್ವೀಡನ್‌ನಲ್ಲಿ ಒಟ್ಟು 24, 623 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, ಅವರಲ್ಲಿ 4,074 ಮಂದಿ ಚೇತರಿಕೆಗೊಂಡಿದ್ದಾರೆ. ಒಟ್ಟು 3,040 ಬಂದಿ ಪ್ರಾಣ ತೆತ್ತಿದ್ದಾರೆ. ಆರಂಭದಲ್ಲಿ ವೈರಸ್ ತಡೆಗೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇದ್ದ ಸ್ವೀಡನ್ ಬಳಿಕ ಎಚ್ಚೆತ್ತುಕೊಂಡಿತ್ತು. ಲಾಕ್‌ಡೌನ್ ಮಾಡದಿದ್ದರೂ ಕೆಲವು ನಿರ್ಬಂಧಗಳನ್ನು ಜಾರಿಗೆ ತಂದಿತ್ತು.
ಕೆಲವೊಂದು ಮಾರ್ಗಸೂಚಿಗಳನ್ನು ಜಾರಿ ಮಾಡಿದ್ದು 50ಕ್ಕಿಂತ ಹೆಚ್ಚು ಜನರು ಒಟ್ಟು ಸೇರುವುದು, ಅನಗತ್ಯ ಪ್ರಯಾಣ ಮಾಡುವುದಕ್ಕೆ ನಿರ್ಬಂಧ ಹೇರಿದೆ. ಬಾರ್, ಹೊಟೇಲುಗಳು ಈ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಆದೇಶಿಸಿತ್ತು. ರೈಲುಗಳ ಸಂಚಾರ ಕಡಿಮೆ, ಮನೆಯಿಂದಲೇ ಕೆಲಸ, ಸೋಂಕಿತರು ಅಥವಾ ಶಂಕಿತರನ್ನು ಭೇಟಿ ಮಾಡಬಾರದು, ಸ್ಥಳೀಯ ಸಾರಿಗೆಯ ಸಂಚಾರದಲ್ಲಿ ಸಾಮಾಜಿಕ ಅಂತರ ಪಾಲಿಸಬೇಕು ಎಂದು ಸೂಚನೆ ನೀಡಿದೆ. ಶಾಲೆ ಕಾಲೇಜುಗಳನ್ನು ಮುಚ್ಚಲಾಗಿದ್ದು ನಗರಪಾಲಿಕೆ ಮತ್ತು ಸ್ಥಳೀಯಾಡಳಿತಗಳು ಅಗತ್ಯವಿದ್ದಲ್ಲಿ ಸ್ಥಳೀಯವಾಗಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ವಿಶೇಷಾಧಿಕಾರ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.