ಹಸಿವಿನಿಂದಲೇ ಹೆಚ್ಚು ಸಾವು!
ಕೋವಿಡ್ ಪರಿಣಾಮದಿಂದಾಗಿ 12.2 ಕೋಟಿ ಮಂದಿಗೆ ಬಡತನ, ಆಹಾರ ಅಲಭ್ಯತೆ, ಪೂರೈಕೆ ಸಮಸ್ಯೆ
Team Udayavani, Jul 10, 2020, 10:00 AM IST
ಸಾಂದರ್ಭಿಕ ಚಿತ್ರ
ಲಂಡನ್: ಯುನಿಸೆಫ್ ಸೇರಿದಂತೆ ವಿಶ್ವದ ವಿವಿಧ ಸಂಸ್ಥೆಗಳು ಕೋವಿಡ್‌ನಿಂದಾಗಿ ಮತ್ತಷ್ಟು ಜನ ಬಡತನ ರೇಖೆಗಿಂತ ಕೆಳಗೆ ಹೋಗುವ ಅಪಾಯವನ್ನು ವ್ಯಕ್ತಪಡಿಸಿರುವಂತೆಯೇ, ಕೋವಿಡ್‌ನಿಂದಲೂ ಹೆಚ್ಚು ಮಂದಿ ಹಸಿವಿನಿಂದಲೇ ಸಾಯಬಹುದು ವಿಶ್ವದಲ್ಲಿ ಬಡತನ ವಿರುದ್ಧ ಹೋರಾಡುತ್ತಿರುವ ಸರಕಾರೇತರ ಸಂಘಟನೆ ಆಕ್ಸ್‌ಫಾಮ್ ಹೇಳಿದೆ.
ಸುಮಾರು 12.2 ಕೋಟಿಗೂ ಹೆಚ್ಚು ಮಂದಿಯನ್ನು ಕೋವಿಡ್ ಬಡತನಕ್ಕೆ ದೂಡಬಹುದು. ಸಾಮೂಹಿಕ ನಿರುದ್ಯೋಗ, ನೆರವು ಸಿಗದೇ ಇರುವುದು, ಆಹಾರದ ಅಲಭ್ಯತೆ, ಆಹಾರ ಉತ್ಪಾದನೆಯಲ್ಲಿ ತೊಡಕುಗಳಿಂದ ಹೀಗಾಗಬಹುದು ಎಂದು ಹೇಳಿದೆ.
ಇದರೊಂದಿಗೆ ಕೋವಿಡ್‌ನಿಂದಲೂ ಹಸಿವಿನ ವೈರಸ್ ತೀವ್ರವಾಗುವ ಸಾಧ್ಯತೆ ಇದ್ದು ವಿಶ್ವಾದ್ಯಂತ ಇದು ದಿನವೊಂದಕ್ಕೆ 12 ಸಾವಿರ ಮಂದಿಯನ್ನು ಬಲಿಪಡೆಯುವ ಸಾಧ್ಯತೆಯೂ ಇದೆ. ಅಫ್ಘಾನಿಸ್ಥಾನ, ಸಿರಿಯಾ, ದಕ್ಷಿಣ ಸೂಡಾನ್‌ಗಳಲ್ಲಿ ಹಸಿವಿನ ಸಮಸ್ಯೆ ಹಿಂದೆದಿಗಿಂತಲೂ ಹೆಚ್ಚಾಗಿದೆ ಎಂದು ಅದು ಹೇಳಿದೆ.
ಎಪ್ರಿಲ್‌ನಲ್ಲಿ ಕೋವಿಡ್‌ನಿಂದಾಗಿ ವಿಶ್ವಾದ್ಯಂತ ಮೃತರ ಪ್ರಮಾಣ ದಿನವೊಂದಕ್ಕೆ 10 ಸಾವಿರಷ್ಟು ಆಗಿತ್ತು ಎಂದು ಅದು ಹೇಳಿದೆ.
ಉದಾಹರಣೆಗೆ ಅಫ್ಘಾನಿಸ್ಥಾನ ವೊಂದರಲ್ಲೇ ಆಹಾರದ ಕ್ಷಾಮ 2019ರಲ್ಲಿ 25 ಲಕ್ಷ ಮಂದಿಯನ್ನು ತಟ್ಟಿದ್ದು, 2020ರ ಮೇ ವೇಳೆಗೆ ಇದು 35 ಲಕ್ಷಕ್ಕೇರಿದೆ. ಲಾಕ್‌ಡೌನ್ ನಿಯಮಾವಳಿಗಳು ಇತ್ಯಾದಿಗಳಿಂದ ವಿವಿಧ ದೇಶಗಳ ಗಡಿಗಳು ಮುಚ್ಚಿದ್ದು ಅದರ ಪರಿಣಾಮ ದೇಶಗಳ ಮೇಲೆ ಆಗಿವೆ. ಅಫ್ಘಾನಿಸ್ಥಾನಕ್ಕೆ ಇರಾನ್ ಗಡಿ ಮುಚ್ಚಿದ್ದು ಪರಿಣಾಮ ಬೀರಿದೆ. ಇದರೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಾದ ಬ್ರಜಿಲ್, ಭಾರತ, ದಕ್ಷಿಣ ಆಫ್ರಿಕಾದಲ್ಲೂ ಹಸಿವಿನ ಪ್ರಮಾಣ ಹೆಚ್ಚುವ ಅಪಾಯವಿದೆ. ಹಸಿವಿನ ಸಮಸ್ಯೆಯನ್ನು ಪರಿಹರಿಸಲು ಇದೀಗ ವಿಶ್ವ ವಿನಿಯೋಗಿಸುತ್ತಿರುವ ನಿಧಿಯ 10 ಪಟ್ಟು ಹೆಚ್ಚು ನಿಧಿ ಅಗತ್ಯವಿದೆ ಎಂದು ಆಕ್ಸ್‌ಫಾಮ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.