ಬ್ರೆಜಿಲ್ ನಲ್ಲಿ Covid19 ವೈರಸ್ ಮರಣ ಮೃದಂಗ: ಜಗತ್ತಿನಲ್ಲಿ ಅತೀ ಹೆಚ್ಚು ಸಾವು ಕಂಡ 2ನೇ ದೇಶ
ಲ್ಯಾಟೀನ್ ಅಮೆರಿಕಾದಲ್ಲಿ ಒಂದೇ ದಿನದಲ್ಲಿ ಒಂದು ಸಾವಿರ ಮಂದಿ ಸಾವನ್ನಪ್ಪಿದ್ದಾರೆ.
Team Udayavani, Jun 22, 2020, 11:18 AM IST
ಬ್ರೆಸಿಲಿಯಾ:ಕೋವಿಡ್ 19 ವೈರಸ್ ಅಟ್ಟಹಾಸ ಜಗತ್ತಿನಾದ್ಯಂತ ಮುಂದುವರಿದಿದ್ದು ಬ್ರೆಜಿಲ್ ನಲ್ಲಿ ಕೋವಿಡ್ 19ಗೆ ಸಾವನ್ನಪ್ಪಿದವರ ಸಂಖ್ಯೆ 50ಸಾವಿರಕ್ಕೆ ಏರಿದ್ದು, ಜಗತ್ತಿನಲ್ಲಿ ಕೋವಿಡ್ ಸೋಂಕಿನಿಂದ ಅತೀ ಹೆಚ್ಚು ಮಂದಿ ಸಾವನ್ನಪ್ಪಿರುವ ದೇಶಗಳ ಪೈಕಿ ಬ್ರೆಜಿಲ್ ಎರಡನೇ ಸ್ಥಾನಕ್ಕೆ ಜಿಗಿದಂತಾಗಿದೆ.
ಬ್ರೆಜಿಲ್ ನಲ್ಲಿ ಹತ್ತು ಲಕ್ಷಕ್ಕೂ ಅಧಿಕ ಕೋವಿಡ್ 19 ವೈರಸ್ ಪ್ರಕರಣ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ರಾಜಕೀಯ ಅಸ್ಥಿರತೆ ಹಾಗೂ ಆರ್ಥಿಕ ಅಸಮತೋಲನ ಹೆಚ್ಚಳವಾಗತೊಡಗಿದೆ ಎಂದು ವರದಿ ವಿವರಿಸಿದೆ.ದೇಶದಲ್ಲಿ ಒಟ್ಟು 10,85,038 ಕೋವಿಡ್ 19 ಪ್ರಕರಣ ದೃಢಪಟ್ಟಿದೆ. ಈವರೆಗೆ 50,617 ಮಂದಿ ಸಾವನ್ನಪ್ಪಿದ್ದು, 5,50,000 ಜನರು ಗುಣಮುಖರಾಗಿದ್ದಾರೆ ಎಂದು ಬ್ರೆಜಿಲ್ ಆರೋಗ್ಯ ಸಚಿವಾಲಯ ತಿಳಿಸಿದೆ.
ತಜ್ಞರ ಪ್ರಕಾರ, ಕ್ಷಿಪ್ರವಾಗಿ ಹರಡುತ್ತಿರುವ ವೈರಸ್ ಸೋಂಕಿನ ಪರೀಕ್ಷೆಯಲ್ಲಿನ ಅನನುಕೂಲತೆಯಿಂದಾಗಿ ಸೋಂಕು ಪೀಡಿತರ ನಿಜವಾದ ಸಂಖ್ಯೆ ನಿಖರವಾಗಿ ಲಭ್ಯವಾಗುತ್ತಿಲ್ಲ. ಲ್ಯಾಟೀನ್ ಅಮೆರಿಕಾದಲ್ಲಿ ಒಂದೇ ದಿನದಲ್ಲಿ ಒಂದು ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಇದನ್ನು ಸಾಮಾನ್ಯವಾಗಿ ಜ್ವರ ಸಂಬಂಧಿ ಪ್ರಕರಣ ಎಂದು ದಾಖಲಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಕೋವಿಡ್ ನಿಂದ ಅತೀ ಹೆಚ್ಚು ಮಂದಿ ಸಾವನ್ನಪ್ಪಿರುವ ದೇಶ ಅಮೆರಿಕ ಮೊದಲ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.