ಮುಂಬೈನ ಶೇ. 57% ಕೊಳಗೇರಿ ನಿವಾಸಿಗಳಲ್ಲಿ ಕೋವಿಡ್ ಸೋಂಕು: ಮಹಿಳೆಯರಲ್ಲೇ ಹೆಚ್ಚು: ಸಮೀಕ್ಷೆ
Team Udayavani, Jul 29, 2020, 10:00 AM IST
ಮುಂಬೈ: ಸೆರೋಲಾಜಿಕಲ್ ಸಮೀಕ್ಷೆಯ ಪ್ರಕಾರ ಮುಂಬೈ ನಗರದ 57% ರಷ್ಟು ಕೊಳೆಗೇರಿ ನಿವಾಸಿಗಳು ಮತ್ತು 16 ಪ್ರತಿಶತದಷ್ಟು ವಸತಿ ಸಮುಚ್ಛಯಗಳಲ್ಲಿ ವಾಸಿಸುವವರು ಕೋವಿಡ್ ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಆದರೆ ರೋಗಲಕ್ಷಣವಿಲ್ಲದ ಕಾರಣ ಪರೀಕ್ಷಿಸಲಾಗಿಲ್ಲ ಎಂದು ತಿಳಿಸಲಾಗಿದೆ.
ಸಿರೊ-ಸಮೀಕ್ಷೆಯ ಪ್ರಕಾರ ಮಹಿಳೆಯರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಮುಂಬೈ ನಾಗರಿಕ ಸಂಸ್ಥೆ, ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ), ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ (ಟಿಐಎಫ್ಆರ್) ಮತ್ತು ನೀತಿ ಆಯೋಗ ಜೊತೆಗೆ ಸೇರಿಕೊಂಡು ಸೆರೋಲಾಜಿಕಲ್ ಸಮೀಕ್ಷೆಯನ್ನು ನಡೆಸಿತು.
6,936 ಜನರನ್ನು ಗುರಿಯಾಗಿಸಿಕೊಂಡು 8,870 ಜನರ ಸಮೀಕ್ಷೆ ನಡೆಸಲಾಗಿದ್ದು, ಕೊಳೆಗೇರಿಗಳಲ್ಲಿ ವಾಸಿಸದ ಹಲವರು ಸಮೀಕ್ಷೆಯಲ್ಲಿ ಭಾಗಿಯಾಗಲು ಹಿಂಜರಿದರು ಎಂದು ವರದಿ ತಿಳಿಸಿದೆ. ಸಾಮಾನ್ಯ ಜನಸಂಖ್ಯೆ ಹೊಂದಿರುವ ಮುಂಬೈನ ಮೂರು ವಾರ್ಡ್‌ಗಳಾದ ದಹಿಸಾರ್, ಚೆಂಬೂರ್ ಮತ್ತು ಮಾಟುಂಗಾದಲ್ಲಿ ಕೂಡ ಸಮೀಕ್ಷೆ ನಡೆಸಲಾಗಿದ್ದು ಇದರಲ್ಲಿ 57% ಕೊಳಗೆರಿ ನಿವಾಸಿಗಳು ಮತ್ತು 16% ಕೊಳಗೇರಿಯಲ್ಲಿ ವಾಸಿಸದ ನಿವಾಸಿಗಳು ಕೋವಿಡ್ ಹೊಂದಿದ್ದಾರೆಂದು ಅಂದಾಜಿಸಲಾಗಿದೆ.
ಮುಂಬೈ ನಗರದಲ್ಲಿ ಶೇ 40% ಜನರು ಕೊಳಗೇರಿಯಲ್ಲಿ ವಾಸಿಸುತ್ತಿದ್ದು, ಇದುವರೆಗೂ 1,11,000 ಪ್ರಕರಣಗಳು ಮತ್ತು 6 ಸಾವಿರಕ್ಕೂ ಅಧಿಕ ಸಾವುಗಳು ವರದಿಯಾಗಿವೆ. ಸುಮಾರು 2 ಕೊಟಿ ಜನರಿರುವ ಮುಂಬೈ ಮಹಾನಗರದ ಧಾರವಿ ಒಂದರಲ್ಲೆ 10 ಲಕ್ಷ ಜನರು ವಾಸಿಸುತ್ತಿದ್ದಾರೆ. ಆದಾಗ್ಯ ಕೊಳಗೇರಿಯಲ್ಲಿ ಹೆಚ್ಚಿನ ಸಾವುಗಳು ವರದಿಯಾಗಿಲ್ಲ. ಸೋಂಕು ತಡೆಗಟ್ಟಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದೇ ಕಾರಣ ಎನ್ನಲಾಗಿದೆ.
ಕೊಳೆಗೇರಿಗಳಲ್ಲಿ ಕೋವಿಡ್ -19 ಹರಡಲು ಜನಸಂಖ್ಯಾ ಪ್ರಮಾಣ ಮತ್ತು ಸಮುದಾಯವಾಗಿ ಬಳಸಲ್ಪಡುವ ಶೌಚಾಲಯ ಮತ್ತು ನೀರಿನ ಬಳಕೆ ಕಾರಣವಾಗಿದೆ. ಆದರೆ ಸಮೀಕ್ಷೆಯ ಅಂಕಿ ಅಂಶಗಳು ಹೊಸ ಅನುಮಾನ ಮೂಡಿಸಿದ್ದು ಭಾರತದಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳುತ್ತಿರುವ ಕೋವಿಡ್ ಪ್ರಕರಣದ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಪರೀಕ್ಷೆಯ ಕೊರತೆಯಿಂದಾಗಿ ನಿಜವಾದ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲವೆಂದು ಹಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಅಧಿವೇಶನದಿಂದ ಬಿಜೆಪಿ ಆತಂಕ, ಹೀಗಾಗಿ ಅಪಪ್ರಚಾರ: ಸುರ್ಜೇವಾಲಾ
Critical: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರು; ಏಮ್ಸ್‌ಗೆ ದಾಖಲು
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.