ರಾಜ್ಯದಲ್ಲಿ ಇಂದು 322 ಹೊಸ ಕೋವಿಡ್ ಸೋಂಕು ಪ್ರಕರಣ ಪತ್ತೆ ; 8 ಸೋಂಕಿತರು ಸಾವು
ಉಡುಪಿ 11, ದಕ್ಷಿಣ ಕನ್ನಡ 08 ಮತ್ತು ಉತ್ತರ ಕನ್ನಡ 03 ಹೊಸ ಸೋಂಕು ಪ್ರಕರಣ ಪತ್ತೆ
Team Udayavani, Jun 23, 2020, 6:39 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ರಾಜ್ಯದಲ್ಲಿ ಮಂಗಳವಾರವೂ ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿದೆ.
ಮಂಗಳವಾರ ಒಟ್ಟಾರೆಯಾಗಿ 322 ಹೊಸ ಕೋವಿಡ್ 19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಸೋಂಕು ಸಂಬಂಧಿತ ಕಾರಣಗಳಿಂದ 8 ಜನರು ಸಾವನ್ನಪ್ಪಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿನ ಕಾಟ ಮಿತಿ ಮೀರಿದ್ದು ರಾಜ್ಯದಲ್ಲಿ ಇಂದು ಪತ್ತೆಯಾಗಿರುವ ಒಟ್ಟು 322 ಪ್ರಕರಣಗಳ ಪೈಕಿ 107 ಪ್ರಕರಣಗಳು ಇಲ್ಲಿಯೇ ವರದಿಯಾಗಿದೆ ಮತ್ತು ನಗರದಲ್ಲಿ ಇನ್ನೂ 996 ಕೋವಿಡ್ 19 ಸೋಂಕಿನ ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು (107) ಹೊರತುಪಡಿಸಿದಂತೆ ಇಂದು ಬಳ್ಳಾರಿ (53), ಬೀದರ್ (22), ಮೈಸೂರು (21), ವಿಜಯಪುರ (16), ಯಾದಗಿರಿ (13) ಹಾಗೂ ಉಡುಪಿ (11) ಜಿಲ್ಲೆಗಳಲ್ಲಿ ಅತೀ ಹೆಚ್ಚಿನ ಸೋಂಕಿತರು ಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ಮನೆ ಮನೆಗೆ ಮೀನು ಮಾರುವ ವ್ಯಾಪಾರಿಗೆ ಕೋವಿಡ್ -19 ಸೋಂಕು ದೃಢ
ರಾಜ್ಯದ ವಿವಿಧ ಜಿಲ್ಲೆಗಳ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಪೈಕಿ ಇಂದು 274 ಜನ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ 6004 ಕೋವಿಡ್ 19 ಸೋಂಕಿತರು ಗುಣಮುಖರಾದಂತಾಗಿದೆ.
ಇದೀಗ ರಾಜ್ಯದಲ್ಲಿ ಒಟ್ಟು 3563 ಸಕ್ರಿಯ ಕೋವಿಡ್ 19 ಸೋಂಕಿನ ಪ್ರಕರಣಗಳಿದ್ದು ಇವರಲ್ಲಿ 120 ಜನ ಐ.ಸಿ.ಯು.ನಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಇದುವರೆಗೆ ಕೋವಿಡ್ 19 ಸೋಂಕು ಸಂಬಂಧಿತ 150 ಸಾವು ಸಂಭವಿಸಿದ್ದು ಚೇತರಿಕೆ ಪ್ರಮಾಣವೇ ಹೆಚ್ಚಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ ಇಂದು ನಾಲ್ಕು ಪಾಸಿಟಿವ್ ಪ್ರಕರಣ ದೃಢ
ಇಂದು ರಾಜ್ಯದಲ್ಲಿ ಪತ್ತೆಯಾದ ಹೊಸ ಸೋಂಕಿನ ಪ್ರಕರಣಗಳಲ್ಲಿ 05 ಜನ ಸೋಂಕಿತರು ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನಲೆಯುಳ್ಳವರಾಗಿದ್ದಾರೆ ಹಾಗೂ 64 ಜನ ಅಂತರ್ ರಾಜ್ಯ ಪ್ರಯಾಣದ ಹಿನ್ನಲೆಯವರಾಗಿದ್ದಾರೆ ಎಂಬ ಮಾಹಿತಿಯನ್ನು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತನ್ನ ದೈನಂದಿನ ಪ್ರಕಟನೆಯಲ್ಲಿ ತಿಳಿಸಿದೆ.
ಇದುವರೆಗೆ ಕೋವಿಡ್ ಸಂಬಂಧಿತ ಅತೀ ಹೆಚ್ಚು ಸಾವು ಸಂಭವಿಸಿರುವ ಜಿಲ್ಲೆಯು ಬೆಂಗಳೂರು ನಗರವಾಗಿದೆ. ಇಲ್ಲಿ ಕೋವಿಡ್ ಸೋಂಕಿಗೆ ಈಗಾಗಲೇ 73 ಜನರು ಬಲಿಯಾಗಿದ್ದಾರೆ. ಆ ಬಳಿಕದ ಸ್ಥಾನದಲ್ಲಿ ಬೀದರ್ (15), ಕಲಬುರಗಿ (11), ದಾವಣಗೆರೆ (07) ಹಾಗೂ ವಿಜಯಪುರ (07) ಜಿಲ್ಲೆಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.