ಬಂದಿಲ್ಲ; ಇನ್ನು ಬರಬೇಡ! : ಕೋವಿಡ್ 19 ಇಲ್ಲದ ರಾಷ್ಟ್ರಗಳು


Team Udayavani, Apr 1, 2020, 1:30 PM IST

ಬಂದಿಲ್ಲ; ಇನ್ನು ಬರಬೇಡ!

ಮಣಿಪಾಲ: ಚೀನದ ವುಹಾನ್‌ನಿಂದ ಪ್ರಾರಂಭವಾದ ಕೋವಿಡ್ 19 ವೈರಸ್‌ ಇಂದು ಇಡೀ ವಿಶ್ವಕ್ಕೆ ವ್ಯಾಪಿಸಿದೆ. ದಿನ ಬೆಳಗಾದರೆ ಸಾಕು. ಅದರದ್ದೇ ಹಾವಳಿಯ ಸುದ್ದಿ. ಎಲ್ಲಿ ನೋಡಿದರೂ ಸಾವಿನದ್ದೇ ಮಾತು. ಹಸುಳೆಯಿಂದ ಹಿಡಿದು ಹಿರಿಯ ವಯಸ್ಕರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುತ್ತಿರುವ ಕೋವಿಡ್ 19, ತನ್ನ ವ್ಯಾಪ್ತಿಯನ್ನು ವಿಸ್ತರಿಸುತಲೇ ಇದೆ.

ಅಚ್ಚರಿಯ ಅಂಶವೆಂದರೆ ಈ ಮಧ್ಯೆಯೂ ಕೆಲವು ದೇಶಗಳ ಬಾಗಿಲ ಬಳಿಯೂ ಕೊರೊನಾ ಹೋಗಿಲ್ಲ. ಆ ದೇಶಗಳು ಹಾಗೆಯೇ ಆರೋಗ್ಯಕರವಾಗಿರಲಿ ಎಂದು ಆಶಿಸೋಣ. ಆದರೆ ಇಂಥ ರಾಷ್ಟ್ರಗಳಲ್ಲಿ ಕೆಲವು ಪ್ರಕರಣಗಳು ಕಂಡು ಬಂದರೂ ಅವೆಲ್ಲವೂ ನೆಗೆಟಿವ್‌. ಇನ್ನು ಕೆಲವೆಡೆ ಸೋಂಕೇ ಇಲ್ಲ. ಅವುಗಳನ್ನು ಅಭಿನಂದಿಸೋಣ. ಅಂಥ ದೇಶಗಳಾವುವು ಎಂಬ ಕುತೂಹಲದ ಮಾಹಿತಿ ಇಲ್ಲಿದೆ.

ರಿಪಬ್ಲಿಕ್‌ ಅಫ್‌ ಪಲೊ : ಪಶ್ಚಿಮ ಫೆಸಿಫಿಕ್‌ ಸಮುದ್ರ ವ್ಯಾಪ್ತಿಯಲ್ಲಿರುವ ರಿಪಬ್ಲಿಕ್‌ ಪಲೊ ದೇಶಕ್ಕೆ ಅಮೆರಿಕದಿಂದ ಹಿಂದಿರುಗಿದ 73 ವರ್ಷದ ಮಹಿಳೆಗೆ ಪ್ರಾರಂಭದಲ್ಲಿ ಕೋವಿಡ್ 19  ಸೋಂಕಿನ ಗುಣ ಲಕ್ಷಣಗಳು ಕಂಡು ಬಂದಿತ್ತು. ಆಕೆಯನ್ನು ವರದಿ ಬರುವವರೆಗೂ ಕ್ವಾರಂಟೈನ್‌ ಮಾಡಲಾಗಿತ್ತು. ಆದರೆ ವರದಿ ನೆಗೆಟಿವ್‌ ಎಂದು ಬಂದಿದೆ. ಉಳಿದಂತೆ ಬೇರಾವ ಪ್ರಕರಣಗಳಿಲ್ಲ.

ಟೋಂಗಾ :  ಈ ದೇಶದ 21 ವರ್ಷದ ಯುವತಿಯೊಬ್ಬಳಲ್ಲಿ ಕೋವಿಡ್‌-19 ಸಾಮ್ಯವುಳ್ಯ ರೋಗ ಲಕ್ಷಣಗಳು ಕಂಡುಬಂದಿದ್ದು, ಆಕೆಯನ್ನು ಸ್ಥಳೀಯ ನುಕು’ಅಲೋಫಾ ವಯೋಲಾ ಆಸ್ಪತ್ರೆಗೆ ದಾಖಲಿಸಲಾಯಿತು.ಅನಂತರ ಅಗತ್ಯ ಪರೀಕ್ಷೆಯನ್ನು ಮಾಡಿ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಆಸ್ಟ್ರೇಲಿಯಾದ ಪ್ರಯೋಗಾಲಯಕ್ಕೆ ಪರೀಕ್ಷೆಗೆಂದು ಕಳುಹಿಸಿಕೊಟ್ಟರು. ಆದರೆ ಆಕೆಯ ವರದಿಯೂ ಋಣಾತ್ಮಕವೆಂದು ದೃಢ ಪಟ್ಟಿದೆ.

ಸೋಲೋಮನ್‌ ಐಲ್ಯಾಂಡ್ಸ್  : ಈ ದೇಶದಲ್ಲಿ ಹೊರಗಿನಿಂದ ಹಡಗಿನಲ್ಲಿ ಬಂದ ನಾಲ್ವರಲ್ಲಿ ಕೋವಿಡ್ 19  ಲಕ್ಷಣಗಳಿದ್ದವು. ಆದರೆ, ಅವರ ರಕ್ತ ಮತ್ತು ಗಂಟಲಿನ ದ್ರವವನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಇಲ್ಲ ಎಂಬುದು ತಿಳಿದು ಬಂದಿದೆ. ಬೇರೆಯವರಲ್ಲಿ ಈ ಸೋಂಕು ಇಲ್ಲ.

ಲಾವೊ ಪೀಪಲ್ಸ್  ಡೆಮಾಕ್ರಟಿಕ್‌ ರಿಪಬ್ಲಿಕ್‌ :  ಈ ದೇಶದಲ್ಲಿ 50 ಜನರು ಕೋವಿಡ್ 19  ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ ತದನಂತರದ ದಿನಗಳಲ್ಲಿ ಎಲ್ಲರ ಕುರಿತೂ ವರದಿ ಬಂದಿತು. ಆ ಪೈಕಿ ಇವರದ್ದು ನೆಗೆಟಿವ್‌ ಎಂದು ವರದಿಯಾಯಿತು. ಇಲ್ಲಿನ ಸರಕಾರ ಶಂಕಿತ ಪ್ರಕರಣಗಳು ಎಂದು ಗುರುತಿಸಲ್ಪಟ್ಟ ಅಷ್ಟು ಜನರ ಪರೀಕ್ಷಾ ಮಾದರಿಗಳನ್ನು ರಾಷ್ಟ್ರೀಯ ಪ್ರಯೋಗಾಲಯ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರ ಕೇಂದ್ರ, ಪಾಶ್ಚರ್‌ ಸಂಸ್ಥೆ (ಇನ್‌ಸ್ಟಿಟ್ಯೂಟ್‌ ಪಾಶ್ಚರ್‌ ಡು ಲಾವೋಸ್‌) ಮತ್ತು ಮಹೋಸೊಟ್‌ ಆಸ್ಪತ್ರೆಯ ಮೈಕ್ರೋಬಯಾಲಜಿ ಪ್ರಯೋಗಾಲಯದಲ್ಲಿ ಮೂರು ಬಾರಿ ಪರೀಕ್ಷಿಸಿದ್ದು, ಹೆಚ್ಚುವರಿಯಾಗಿ ಆಸ್ಟ್ರೇಲಿಯಾದ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ. (ವೋಸ್‌ ಲ್ಯಾಬ್‌ ಗಳಲ್ಲಿ ಪರೀಕ್ಷಿಸಲ್ಪಟ್ಟ ಶಂಕಿತ ಪ್ರಕರಣಗಳ ಮಾದರಿಗಳನ್ನು ಹೆಚ್ಚಾಗಿ ಆಸ್ಟ್ರೇಲಿಯಾದ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತದೆ)

ರಿಪಬ್ಲಿಕ್‌ ಆಫ್‌ ಮಾರ್ಷಲ್‌ ಐಲ್ಯಾಂಡ್ಸ್‌ :  ಮಾರ್ಚ್‌ 9 ರಂದು 66 ವರ್ಷದ ವ್ಯಕ್ತಿಯಲ್ಲಿ ಕೋವಿಡ್ 19  ಲಕ್ಷಣ  ಕಂಡು ಬಂದ ಕಾರಣ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ವರದಿಯಲ್ಲಿ ಸೋಂಕು ಇಲ್ಲದಿರುವುದು ಖಚಿತವಾಗಿದ್ದು, ವ್ಯಕ್ತಿಯಿಂದ ತೆಗೆದ ಪರೀಕ್ಷಾ ಮಾದರಿಯನ್ನು ಹವಾಯಿ ಸ್ಟೇಟ್‌ ಲ್ಯಾಬ್‌ನಲ್ಲಿ ಪರೀಕ್ಷಿಸಲಾಗಿದೆ. ಇನ್ನೂ ಅಲ್ಲಿನ ಸರಕಾರ ಚೀನ, ಹಾಂಗ್‌ ಕಾಂಗ್‌, ಮಕಾವು, ಜಪಾನ್‌, ದ.ಕೊರಿಯಾ, ಇಟಲಿ, ಜರ್ಮನಿ ಮತ್ತು ಇರಾನ್‌ ಸೇರಿದಂತೆ ಹಲವಾರು ದೇಶಗಳ ಪ್ರಯಾಣ ಮೇಲೆ ನಿರ್ಬಂಧ ಹೇರಿದೆ. ಇಲ್ಲಿ ಒಟ್ಟು ಐದು ಶಂಕಿತ ಕೊರೊನವೈರಸ್‌ ಸೋಂಕು ಪ್ರಕರಣಗಳು ವರದಿಯಾಗಿವೆ. ಫೆಬ್ರವರಿ 05 ರಂದು ಬೋಸ್ವಾನ ಸರಕಾರ ವರದಿ ಮಾಡಿದಂತೆ ಎಲ್ಲಾ ಪ್ರಕರಣಗಳು ನೆಗೆಟಿವ್‌ ಆಗಿವೆ.

ಶಂಕಿತ ಪ್ರಕರಣವೂ ಇಲ್ಲದ ರಾಷ್ಟ್ರ ಗಳು :  ಬುರುಂಡಿ, ಕೊಮೊರೊಸ್‌, ಫೆಡರೇಟೆಡ್‌ ಸ್ಟೇಟ್ಸ್  ಆಫ್‌ ಮೈಕ್ರೋನೇಶಿಯಾ, ಕಿರಿಬಾಟಿ, ಮಲಾವಿ, ನೌರು, ಯೆಮೆನ್‌ ಗಣರಾಜ್ಯ, ಪಶ್ಚಿಮ ಸಹಾರಾ, ಸಮೋವಾ, ಸಿಯೆರಾ ಲಿಯೋನ್‌, ಸಾವೊ ಟೋಮೆ ಮತ್ತು ಪ್ರಿನ್ಸಿಪೆ, ತಜಿಕಿಸ್ಥಾನ್‌, ತುರ್ಕಮೆನಿಸ್ಥಾನ್‌, ತುವಾಲು, ವನವಾಟು.

ಟಾಪ್ ನ್ಯೂಸ್

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

bike

Malpe: ಕಿನ್ನಿಮೂಲ್ಕಿ; ನಿಲ್ಲಿಸಲಾಗಿದ್ದ ಬುಲೆಟ್‌ ಕಳವು

navaneth-Rana

Maharashtra: ಬಿಜೆಪಿ ನಾಯಕಿ ನವನೀತ್‌ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್‌ ದಾಖಲು

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು

1-erqrer

Kanguva ಕುರಿತು ಭಾರೀ ನೆಗೆಟಿವ್ ವಿಮರ್ಶೆ: ನಟ ಸೂರ್ಯ ಪತ್ನಿ ಜ್ಯೋತಿಕಾ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.