ಅಮೆರಿಕದಲ್ಲಿ ಯುದ್ಧಭೂಮಿಯ ನಂತರದ ಸ್ಥಿತಿ

ರೋಗಿಗಳ ಮಾಹಿತಿಯೂ ಇಲ್ಲಿ ಲಭ್ಯವಾಗುತ್ತಿಲ್ಲ

Team Udayavani, Apr 9, 2020, 10:55 AM IST

ಅಮೆರಿಕದಲ್ಲಿ  ಯುದ್ಧಭೂಮಿಯ ನಂತರದ ಸ್ಥಿತಿ

ಮಣಿಪಾಲ: ಅಮೆರಿಕದಲ್ಲಿ ಕೋವಿಡ್‌ 19 ಯಾವ ಸ್ಥಿತಿಗೆ ತಲುಪಿದೆ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿ. ಜನರು ಯಾರೆಂದು ತಿಳಿಯುತ್ತಿಲ್ಲ. ಆಸ್ಪತ್ರೆಗೆ ದಾಖ ಲಾಗುತ್ತಿದ್ದಾರೆ. ರೋಗಿಗಳ ದಾಖಲಾತಿಯನ್ನು ಬರೆದಿಡಲು ಪುಸ್ತಗಳಿಲ್ಲವೇ ಅಥವಾ ಪುಸ್ತಕಗಳೇ ಮುಗಿದಿವೆಯೇ ಅದೂ ಗೊತ್ತಿಲ್ಲ.

ಅಂತೂ ದಾಖಲೆಗಳು ಆಗುತ್ತಿಲ್ಲ. ಒಂದು ಆಸ್ಪತ್ರೆಯಲ್ಲಿ ಹಾಸಿಗೆ ಭರ್ತಿಯಾಗಿದೆ ಎಂದಾದ ಬಳಿಕ ಮತ್ತೂಂದು ಆಸ್ಪತ್ರೆ ಕಡೆಗೆ ಪ್ರಯಾಣ. ಆಸ್ಪತ್ರೆಗೆ ಸೇರಿಸಿದವರ ಹೆಸರು ಮನೆಯವರಿಗೆ ಗೊತ್ತಿಲ್ಲ, ಯಾವ ಆಸ್ಪತ್ರೆಯಲ್ಲಿ ಮನೆಯವರು ದಾಖಲಾಗಿದ್ದಾರೆ ಎಂಬುದೂ ನಿಗೂಢ. ಇದು ಸದ್ಯದ ಅಮೆರಿಕದಂತಹ ದೇಶದ ಸ್ಥಿತಿ. ಜಮೈಕಾದಲ್ಲಿ ವಾಸವಾಗಿದ್ದ ಮಾರಿಯಾ ಅವರ ಮನೆಗೆ ತುರ್ತು ವೈದ್ಯಕೀಯ ತಜ್ಞರು ಭೇಟಿ ನೀಡಿ, ಕೋವಿಡ್‌ 19 ಸೋಂಕಿನ ಲಕ್ಷಗಳು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿಟ್ಟರು.

ಏಕಾಏಕಿ ಬಂದ ಬೇರೆ ವೈದ್ಯರು ಮಾರಿಯಾ ಅವರ ನಾಡಿ ಮಿಡಿತವನ್ನು ಪರೀಕ್ಷಿಸಿ, ತತ್‌ ಕ್ಷಣವೇ ಜಮೈಕಾ ಆಸ್ಪತ್ರೆಯ ತುರ್ತು ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ದರು. ಮರುದಿನ ಮರಿಯಾ ಅವರ ಮನೆಯವರು ಆಸ್ಪತ್ರೆಗೆ ಕರೆಮಾಡಿದಾಗ, ಆ ಹೆಸರಿನವರು ಇಲ್ಲಿ ಚಿಕಿತ್ಸೆ ಪಡೆಯುತ್ತಿಲ್ಲ ಎಂಬ ಉತ್ತರ ಸಿಕ್ಕಿತು. ವಾರ ಕಳೆದರೂ ಮರಿಯಾ ಅವರ ಕುರಿತಾದ ಮಾಹಿತಿ ಇಲ್ಲ. ಕುಟುಂಬ ಸದಸ್ಯರು ಅಗ್ನಿಶಾಮಕ ಇಲಾಖೆ, ಇತರ ಆಸ್ಪತ್ರೆ ಕಚೇರಿಗಳು ಮತ್ತು ತುರ್ತು ವೈದ್ಯಕೀಯ ಸೇವೆಯ ಸಂಖ್ಯೆ ಮೊದಲಾದ ಕಡೆ ಮಾಹಿತಿ ನೀಡಿ, ಪತ್ತೆ ಮಾಡಲು ಪ್ರಯತ್ನಿಸಿದ್ದರು. ಆದರೆ 73 ವರ್ಷದ ಮಿಸ್‌ ಮರಿಯಾ ಇನ್ನೂ ಪತ್ತೆಯಾಗಲಿಲ್ಲ.
ಜಮೈಕಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೆ ಅಲ್ಲಿರಬೇಕಿತ್ತು. ಯಾರು ಒಳಗೆ ಮತ್ತು ಹೊರಗೆ ಹೋಗುತ್ತಾರೆ ಎಂಬುದನ್ನು ತೋರಿಸುವ ಕೆಮರಾಗಳು ಅವರಲ್ಲಿ ಇಲ್ಲವೇ? ದಾಖಲಾಗಿರುವುದಕ್ಕೆ ಕಾಗದಪತ್ರಗಳಿಲ್ಲವೇ? ಎಂಬ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ ಎಂದು ದಿ ನ್ಯೂಯಾರ್ಕ್‌ ಟೈಮ್ಸ್ ವರದಿ ಮಾಡಿದೆ. ಈ ಕುರಿತಾಗಿ ಆಸ್ಪತ್ರೆಯೂ ಆ ಹೆಸರಿನ ರೋಗಿ ನಮ್ಮಲ್ಲಿಲ್ಲ ಎಂದು ಪತ್ರಿಕೆಗೆ ತಿಳಿಸಿದೆ.

ಹೌಸ್‌ಫುಲ್‌
ಕೋವಿಡ್‌ ವೈರಸ್‌ ಸಾಂಕ್ರಾಮಿಕ ಬಹುತೇಕ ನಗರದ ಆಸ್ಪತ್ರೆಗಳು ಮತ್ತು ತುರ್ತು ಪ್ರತಿಕ್ರಿಯೆ ವ್ಯವಸ್ಥೆಯನ್ನು ಹಿಂದೆಂದೂ ನೋಡಿರದ ರೀತಿಯಲ್ಲಿ ತುಂಬಿ ಹೋಗಿವೆ.  ಅಲ್ಲಿನ ತುರ್ತು ಸೇವಾ ವಿಭಾಗ 911ಗೆ ಕರೆಗಳು ದಾಖಲೆಯ ಸಂಖ್ಯೆಯಲ್ಲಿ ಹರಿದು ಬರುತ್ತಿವೆ. ಬಹುತೇಕ ಆಸ್ಪತ್ರೆಗಳ ವೈದ್ಯರು ಮತ್ತು ದಾದಿಯರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಅಮೆರಿಕ ಮಾತ್ರ ಅಕ್ಷರಶಃ ಯುದ್ಧದ ಬಳಿಕದ ಸ್ಥಿತಿಯಂತಾಗಿದೆ.

ಯಾವಾಗ ಕಾಣೆಯಾದರು?
ಮಾ. 30ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಮರಿಯಾ ಅವರು ಕಣ್ಮರೆಯಾಗಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ವೈದ್ಯರು ಪರೀಕ್ಷೆಗೆ ಮನೆಗೆ ಬಂದಾಗ ಅವರು ದುಃಖಿಸುತ್ತಿದ್ದರು. ಏಕೆಂದರೆ ವಾರದ ಮೊದಲು, ಮರಿಯಾ ಅವರ ಸೊಸೆ ಅದೇ ಮನೆಯಲ್ಲಿ ಸೋಂಕಿತರಾಗಿ ಸಾವನ್ನಪ್ಪಿದ್ದರು. ಅವರು ಒಂದು ವಾರದಿಂದ ವಾಂತಿ ಮತ್ತು ಬಳಲಿಕೆಯಿಂದ ಬಳಲುತ್ತಿದ್ದರು. ಈಗ ಮನೆಯ ಎಲ್ಲಾ ಐವರು ಸದಸ್ಯರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಮರಿಯಾ ಆ ದಿನ ಬೆಳಗ್ಗೆ ವಿಪರೀತವಾದ ಕೆಮ್ಮಿನಿಂದ ಬಳಲಿದ್ದರು. ಅವರೂ ಮಧುಮೇಹ ಮತ್ತು ಕ್ಯಾನ್ಸರ್‌ನಿಂದ ಬಳಲುತ್ತಿದ್ದವರಾಗಿದ್ದರು.
ಮಿಸ್‌ ಮರಿಯಾರ ಮಗ ಜೂಲಿಯನ್‌ ಎಸ್ಕೋಬಾರ್‌ ತಾಯಿಯ ಪತ್ತೆಯಾಗದೇ ಇರುವ ಕಾರಣ ತುಂಬಾ ಆಘಾತಕ್ಕೆ ಒಳಗಾಗಿದ್ದಾರೆ. ಅವರು ವಾರದ ಮೊದಲು ಹೆಂಡತಿಯನ್ನು ಕಳೆದುಕೊಂಡಿದ್ದರು. ಈಗ ತನ್ನ ತಾಯಿಯನ್ನು ಕಳೆದುಕೊಂಡ ಭಯದಲ್ಲಿದ್ದಾರೆ.

ಟಾಪ್ ನ್ಯೂಸ್

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

3

Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನ ಮಂಜೂರು

Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್‌ ಜಾಮೀನು ಮಂಜೂರು

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Vijay Hazare; ವಾಸುಕಿ,ಗೋಪಾಲ್‌ ಬೊಂಬಾಟ್‌ ಬೌಲಿಂಗ್;‌ ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dhaka

Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್‌!

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್‌ ಕೋರ್ಟ್‌ ಆದೇಶ

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

New Virus: ಚೀನದಲ್ಲಿ ಹೊಸ ವೈರಸ್‌ ಹಬ್ಬುತ್ತಿರುವ ಬಗ್ಗೆ ವದಂತಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!

1-tume

Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.