ನಾರ್ವೆ: ಬದುಕು ಮತ್ತೆ ಸಹಜ ಸ್ಥಿತಿಯತ್ತ
Team Udayavani, Apr 9, 2020, 1:20 PM IST
ನಾರ್ವೆ: ಕೋವಿಡ್-19 ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಮಾರ್ಚ್ 13ರಂದು ಇಡೀ ನಾರ್ವೆ ಸ್ಥಗಿತಗೊಂಡಿತ್ತು. ನಿರಂತರ ಹೋರಾಟದಿಂದ ಈ ದೇಶದಲ್ಲಿ ಇದೀಗ ಚೇತರಿಕೆಯ ಗಾಳಿ ಬೀಸುತ್ತಿದ್ದು, ಹಂತ ಹಂತ ವಾಗಿ ಲಾಕ್‌ಡೌನ್ ನಿಯಮವನ್ನು ಸಡಿಲಗೊಳಿಸುತ್ತಿದೆ. ಈ ಕುರಿತಾಗಿ ಡೈಲಿ ಮೇಲ್ ವರದಿ ಮಾಡಿದ್ದು, ನಾರ್ವೆ ಪ್ರಧಾನಿ ಎರ್ನಾ ಸೋಲ್ಬರ್ಗ್ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ವಿವರಿಸಿದ್ದಾರೆ.
ಒಗ್ಗಟ್ಟಾಗಿ ಹೋರಾಡಿದ್ದೇವೆ
“ದೇಶದ ಪ್ರತಿಯೋರ್ವ ಪ್ರಜೆಯೂ ಸೋಂಕು ನಿಯಂತ್ರಣ ಕಾರ್ಯದಲ್ಲಿ ಒಗ್ಗಟ್ಟಾಗಿ ಹೋರಾಡಿದ್ದು, ಇಂದು ನಾವೆಲ್ಲ ಸಹಜ ಸ್ಥಿತಿಗೆ ಮರಳಲು ಕಾರಣವಾಗಿದೆ. ಇದು ಹರ್ಷದ ಸಂಗತಿ. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಚಾಲ್ತಿಯ ಲ್ಲಿರುವ ಲಾಕ್‌ಡೌನ್ ನಿರ್ಬಂಧಗಳನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಲು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ಹೇಳಿದ್ದಾರೆ.
ಪ್ರಮಾಣ ಇಳಿಕೆ
ನಾರ್ವೆಯಲ್ಲಿ ಸಾಂಕ್ರಾಮಿಕ ರೋಗವು ನಿಯಂತ್ರಣ ಗೊಂಡಿದ್ದು, ಲಾಕ್‌ಡೌನ್ ಕ್ರಮಗಳ ಕಠಿಣ ಪಾಲನೆ ಯಿಂದ ಸೋಂಕಿಗೆ ತುತ್ತಾಗುವವರ ಸಂಖ್ಯೆ ಇಳಿಕೆಯಾಗಿದೆ. ಪ್ರಾರಂಭಿಕ ಹಂತದಲ್ಲಿ ಶೇ.2.5ರಷ್ಟಿದ್ದ ಸೋಂಕು ಹರಡುವಿಕೆ ಪ್ರಮಾಣ, ಲಾಕ್‌ಡೌನ್ ಜಾರಿಯಾದ ಬಳಿಕ ಶೇ.0.7ರಷ್ಟಕ್ಕೆ ಇಳಿಯಿತು. ಇದಕ್ಕೆ ನಾನು ಕಾರಣನಲ್ಲ, ನಿಯಮಗಳನ್ನು ಸರಿಯಾಗಿ ಪಾಲಿಸಿ ಸೋಂಕು ಹರಡದಂತೆ ತಡೆದವರು ಪ್ರಜೆಗಳು. ಹಾಗಾಗಿ ಅವರ ಪರಿಶ್ರಮವೇ ದೊಡ್ಡದು ಎಂದು ನಾರ್ವೆ ಆರೋಗ್ಯ ಮಂತ್ರಿ ಬೆಂಟ್ ಹೋಯಿ ಹೇಳಿದ್ದಾರೆ.
ಪಾಲನೆ ಆಗಲಿದೆ
ಪರಿಸ್ಥಿತಿ ನಿಯಂತ್ರಣಗೊಳ್ಳುತ್ತಿದೆ ಎಂದ ಮಾತ್ರಕ್ಕೆ ಎಲ್ಲಿ ಬೇಕೆಂದರೆ ಅಲ್ಲಿ ಓಡಾಡುವ ಆಗಿಲ್ಲ. ಎಪ್ರಿಲ್ 14 ರವರೆಗೆ ಲಾಕ್‌ಡೌನ್ ಮುಂದುವರೆಯಲಿದೆ. ಅದಾದ ಬಳಿಕ ಕೆಲವು ನಿಯಮಗಳನ್ನು ಸಡಿಲಿಸಲಾಗುವುದು. ಇನ್ನು ಕೆಲವು ನಿಯಮಗಳು ಹಾಗೆಯೇ ಮುಂದುವರಿ ಯಲಿವೆ. ಎಪ್ರಿಲ್ 20 ರವರೆಗೆ ಶಾಲಾ ಕಾಲೇಜುಗಳ ತೆರೆಯುವಿಕೆ, ವಿದೇಶ ಪ್ರಯಾಣದ ಮೇಲೆ ನಿರ್ಬಂಧಗಳು ಮುಂದುವರೆಯಲಿವೆ. ಜೂನ್‌ವರೆಗೆ ಯಾವುದೇ ಸಭೆ-ಸಮಾರಂಭಗಳನ್ನು ನಡೆಸದಂತೆ ಆದೇಶ ಹೊರಡಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ನಿಯಮವನ್ನು ಕಠಿಣವಾಗಿ ಪಾಲನೆ ಆಗಲಿದ್ದು, ವರ್ಕ್ ಫ್ರಾಂ ಹೋಮ್ ಜೂನ್‌ವರೆಗೆ ಇರಲಿದೆ ಎಂದು ಹೇಳಲಾಗಿದೆ.
ಕೋವಿಡ್-19 ಹರಡುವುದನ್ನು ತಡೆಯುವಲ್ಲಿ ಲಾಕ್‌ಡೌನ್ ಕ್ರಮಗಳು ಒಂದು ಮಟ್ಟಿಗೆ ಯಶಸ್ವಿಯಾಗಿದ್ದರೂ, ನಾರ್ವೆಯ ನಿರುದ್ಯೋಗ ದರವನ್ನು ಹೆಚ್ಚಿಸಿದೆ. ಕಾರ್ಮಿಕ ಮತ್ತು ಕಲ್ಯಾಣ ಸಂಸ್ಥೆ (ಎನ್‌ಎವಿ) ಸಂಸ್ಥೆ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಶೇ.15.4ರಷ್ಟು ನಿರುದ್ಯೋಗ ಸಮಸ್ಯೆಯ ದರ ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.