ಬೀದರ್ ಜಿಲ್ಲೆಯಲ್ಲಿ ಮತ್ತೊಂದು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆ
Team Udayavani, Apr 20, 2020, 9:02 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೀದರ್: ರಾಜ್ಯದಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳಲ್ಲಿ ಹಾಟ್ ಸ್ಪಾಟ್ ಜಿಲ್ಲೆಗಳ ಪಟ್ಟಿಯಲ್ಲಿರುವ ಬೀದರ್ ನಲ್ಲಿ ಸೋಮವಾರ ಮತ್ತೊಂದು ಪಾಸಿಟಿವ್ ಪ್ರಕರಣ ವರದಿಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಇದೀಗ ಸೋಂಕಿತರ ಸಂಖ್ಯೆ ಈಗ 15ಕ್ಕೆ ಏರಿಕೆಯಾಗಿದೆ.
ಜಿಲ್ಲಾಡಳಿತದ ಕಟ್ಟುನಿಟ್ಟಿನ ಕ್ರಮದ ನಡುವೆಯೂ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಕಳೆದ ಎರಡು ದಿನಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಾರದಿದ್ದರಿಂದ ಸ್ಥಳೀಯರು ಕೊಂಚ ನಿರಾಳರಾಗಿದ್ದರು. ಆದರೆ, ಸೋಮವಾರ ಮತ್ತೊಂದು ಹೊಸ ಕೇಸ್ ದಾಖಲಾಗಿರುವುದು ಜನರನ್ನು ಆತಂಕಕ್ಕೆ ತಳ್ಳಿದಂತಾಗಿದೆ.
117ನೇ ರೋಗಿಯ ಸಂಪರ್ಕಕ್ಕೆ ಬಂದಿರುವ 28 ವಯಸ್ಸಿನ ಯುವಕನಲ್ಲಿ ಸೋಂಕು ಇರುವುದು ದೃಢವಾಗಿದ್ದು, ಬ್ರಿಮ್ಸ್ ಐಸೋಲೇಶನ್ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಿಲ್ಲೆಯಲ್ಲಿ ಹನ್ನೇರಡು ದಿನಗಳ ಹಿಂದೆ ಏಕಕಾಲಕ್ಕೆ 10 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದರೆ ಕಳೆದ ಶನಿವಾರ ಬೀದರ್ ನ ಓಲ್ಡ್ ಸಿಟಿಯ 50 ವಯಸ್ಸಿನ ಮಹಿಳೆಯಲ್ಲಿ ಸೋಂಕು ಇರುವುದು ದೃಢವಾಗಿತ್ತು.
ನಂತರ ಜಮಾತ್‌ನಿಂದ ಆಗಮಿಸಿದ್ದ ಓಲ್ಡ್ ಸಿಟಿಯ 122ನೇ ರೋಗಿಯ ಮಗಳು ಮತ್ತು ಆತನ ಸಹೋದರನ ಮಗಳಲ್ಲಿ ಸೋಂಕು ಇರುವುದು ಧೃಡಪಟ್ಟಿತ್ತು. ಇದಾದ ಬಳಿಕ ಶುಕ್ರವಾರ ದೆಹಲಿಯ ಜಮಾತ್‌ನಿಂದ ವಾಪಸ್ಸಾದವರ ಸಂಪರ್ಕಕ್ಕೆ ಬಂದಿದ್ದ ಯುವಕನಲ್ಲಿ ವೈರಸ್ ಕಂಡು ಬಂದಿತ್ತು. ಈಗ ಮತ್ತೊಬ್ಬ ಯುವಕನಲ್ಲಿ ಸೋಕು ಕಾಣಿಸಿಕೊಂಡಿದೆ.
ಅತಿ ಹೆಚ್ಚು ಪಾಸಿಟಿವ್ ಹೊಂದಿರುವ ಜಿಲ್ಲೆಗಳಲ್ಲಿ ಒಂದಾಗಿರುವ ಬೀದರ್ ಸಹ ಹಾಟ್‌ಸ್ಪಾಟ್ ಪಟ್ಟಿಯಲ್ಲಿ ಸೇರುತ್ತಿದ್ದಂತೆ ಜಿಲ್ಲಾಡಳಿತ ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ. ಸೋಂಕಿತರ ಪ್ರದೇಶಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ, ಸೋಂಕಿತರ ಸಂಪರ್ಕಿತರನ್ನು ಸಮರ್ಪಕ ಕ್ವಾರಂಟೈನ್ ವ್ಯವಸ್ಥೆಗೆ ಒತ್ತು ನೀಡಿದೆ.
ಇಂಥ ಬಿಗಿ ಕ್ರಮಗಳ ಮಧ್ಯಯೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯ ಹೆಚ್ಚುತ್ತಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಇನ್ನು 365 ಜನರ ಸ್ಯಾಂಪಲ್ ಪರೀಕ್ಷೆ ವರದಿ ಬರಬೇಕಿದ್ದು, ಇವುಗಳಲ್ಲಿಯೂ ಇನ್ನಷ್ಟು ಪಾಸಿಟಿವ್ ಪ್ರಕರಣಗಳು ಹೆಚ್ಚುವ ಸಾಧ್ಯತೆಗಳ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.
50 ಜನ ಕೋವಿಡ್ ಶಂಕಿತರ ಬಿಡುಗಡೆ
ಕೋವಿಡ್ ಪಾಸಿಟಿವ್ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಶಂಕೆಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಹಿನ್ ಸಂಸ್ಥೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದ್ದ 193 ಜನರ ಪೈಕಿ 50 ಜನರ ವರದಿ ನೆಗೆಟಿವ್ ಬಂದಿದ್ದು, ಅವರನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ.
ಭಾಗ್ಯ ನಗರದ ಹೊರವಲಯದ ಶಾಹಿನ್ ಕ್ವಾರಂಟೈನ್‌ನಲ್ಲಿ 193 ಶಂಕಿತ ಸೋಂಕಿತರನ್ನು ಇಟ್ಟು ಅವರ ರಕ್ತ ಹಾಗೂ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇವರಲ್ಲಿ ಸದ್ಯ 50 ಜನರ ವರದಿ ನೆಗೆಟಿವ್ ಬಂದ್ ಹಿನ್ನೆಲೆ ಅವರನ್ನು ಬಿಡುಗಡೆ ಮಾಡಲಾಗಿದೆ.
ಓಲ್ಡ್ ಸಿಟಿ, ಸಿಂಗರ್ ಬಾಗ್ ಭಾಗದ ಮಕ್ಕಳು, ಮಹಿಳೆಯರು, ಪುರುಷರು ಕ್ವಾರಂಟೈನ್‌ಲ್ಲಿದ್ದರು. ಶಾಹಿನ್ ಕಾಲೇಜಿನಿಂದ ಶಾಲಾ ವಾಹನದಲ್ಲೇ ಅವರವರ ಮನೆಗಳಿಗೆ ವಾಪಸಾಗಿದ್ದು, ಈ ವೇಳೆ ಬಡಾವಣೆ ನಿವಾಸಿಗರು ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಸ್ವಾಗತಿಸಿದರು.
1204 ಜನರ ವರದಿ ಬಾಕಿ
ಜಿಲ್ಲಾ ಆರೋಗ್ಯ ಇಲಾಖೆಯ ಸರ್ವೇಕ್ಷಣಾ ಘಟಕ ಮಿಡಿಯಾ ಬುಲೇಟಿನ್ ಬಿಡುಗಡೆ ಮಾಡಿದ್ದು, ಸೋಮವಾರ ಸಂಜೆವರೆಗೆ ಜಿಲ್ಲೆಯಲ್ಲಿ 1976 ಜನರ ರಕ್ತ ಮತ್ತು ಗಂಟಲು ದ್ರವದ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 15 ಪಾಸಿಟಿವ್ ಬಂದಿದ್ದರೆ 757 ನೆಗೆಟಿವ್ ಬಂದಿದೆ. ಇನ್ನುಳಿದ 1204 ಮಂದಿಯ ವರದಿ ಇನ್ನೂ ಬರಬೇಕಿದೆ.
ಸೋಂಕಿತರ 553 ಪ್ರಥಮ ಸಂಪರ್ಕಿತ ಮತ್ತು 1229 ದ್ವಿತೀಯ ಸಂಪರ್ಕಿತರನ್ನು ಈಗಾಗಲೇ ಗುರುತಿಸಲಾಗಿದ್ದು ಇವರಲ್ಲಿ ಮೂವರಲ್ಲಿ ಜ್ವರದ ಲಕ್ಷಣ ಇರುವುದು ಮನೆಗಳ ಸಮೀಕ್ಷೆ ವೇಳೆ ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Contractor Sachin Case: ಎರಡನೇ ದಿನವೂ ತನಿಖೆ ಮುಂದುವರಿಸಿದ ಸಿಐಡಿ ತಂಡ
CID; ಸತತ 2 ಗಂಟೆಗಳ ಕಾಲ ಸಚಿನ್ ಕುಟುಂಬಸ್ಥರ ವಿಚಾರಣೆ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Bidar: ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೂ ಮೊದಲು ಹೊಟೇಲ್ ನಲ್ಲಿ ಓಡಾಡಿದ ದೃಶ್ಯ ಸೆರೆ
ಗುತ್ತಿಗೆದಾರ ಸಚಿನ್ ಕೇಸ್: ಪ್ರಕರಣ ಮುಚ್ಚಿಹಾಕಲು ಸರ್ಕಾರದ ಯತ್ನ: ಸಹೋದರಿ ಆರೋಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.