ಕೋವಿಡ್ 19 ಲಸಿಕೆ ಮಾತ್ರವೇ ಜಗತ್ತಿನ ಜನಜೀವನ ಸಹಜ ಸ್ಥಿತಿಗೆ ತರಬಲ್ಲದು: ವಿಶ್ವಸಂಸ್ಥೆ
ಇದು ಲಕ್ಷಾಂತರ ಜನರ ಜೀವ ಹಾಗೂ ಕೋಟ್ಯಂತರ ರೂಪಾಯಿ ಹಣವನ್ನು ಉಳಿಸಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
Team Udayavani, Apr 16, 2020, 3:46 PM IST
ವಾಷಿಂಗ್ಟನ್: ಕೋವಿಡ್ ಮಹಾಮಾರಿಯಿಂದ ತತ್ತರಿಸುತ್ತಿರುವ ಜಗತ್ತನ್ನು ಕೋವಿಡ್ 19 ಲಸಿಕೆ ಮಾತ್ರವೇ ಸಹಜ ಸ್ಥಿತಿಗೆ ತರುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆ್ಯಂಟನಿಯೋ ಗುಟೆರಸ್ ತಿಳಿಸಿದ್ದಾರೆ. 2020ರ ಅಂತ್ಯದೊಳಗೆ ವೈರಸ್ ಗೆ ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯುವ ಸಾಧ್ಯತೆ ಇದ್ದಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಲಸಿಕೆಯಿಂದ ಮಾತ್ರ ಜಗತ್ತನನು ಸಹಜ ಸ್ಥಿತಿಗೆ ಮರಳಿಸಲು ಇರುವ ಏಕೈಕ ಸಾಧನವಾಗಿದೆ. ಇದು ಲಕ್ಷಾಂತರ ಜನರ ಜೀವ ಹಾಗೂ ಕೋಟ್ಯಂತರ ರೂಪಾಯಿ ಹಣವನ್ನು ಉಳಿಸಲಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ವಿಶ್ವಾದ್ಯಂತ ಹರಡುತ್ತಿರುವ ಸೋಂಕಿನ ವಿರುದ್ಧ ಹೋರಾಡಲು ಲಸಿಕೆಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ. ಇದರಿಂದ ಜಾಗತಿಕವಾಗಿ ಲಾಭವಿದೆ. ಅಲ್ಲದೇ ಇದರಿಂದ ವೈರಸ್ ನಿಯಂತ್ರಣಕ್ಕೆ ಅನುಕೂಲವಾಗಲಿದೆ. ಲಸಿಕೆ ಕಂಡು ಹಿಡಿಯುವ ನಿಟ್ಟಿನಲ್ಲ ಎಲ್ಲರೂ ಪ್ರಯತ್ನಿಸಬೇಕಾಗಿದೆ. ಇದರೊಂದಿಗೆ 2020ರೊಳಗೆ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಜಾಗತಿಕವಾಗಿ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ 20 ಲಕ್ಷಕ್ಕೆ ತಲುಪಿದ್ದು, ವಿಶ್ವಾದ್ಯಂತ ಸಾವಿನ ಸಂಖ್ಯೆ 1,30000ಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.