1 ಸಾವಿರ ಮಂದಿಗೆ ಅವಕಾಶ : ಸ್ವಿಜರ್ಲೆಂಡ್‌ನಲ್ಲಿ ಹೊಸ ನಿಯಮ ಮುಂದಿನ ವಾರದಿಂದ
Team Udayavani, Jul 3, 2020, 11:06 AM IST
ಜ್ಯೂರಿಚ್: ಐರೋಪ್ಯ ಒಕ್ಕೂಟದ ದೇಶಗಳು ಲಾಕ್‌ಡೌನ್ ಸಡಿಲಗೊಳಿಸಿರುವಂತೆಯೇ, ಸ್ವಿಜರ್ಲೆಂಡ್ ಕೂಡ ನಿಯಮಗಳನ್ನು ಸಡಿಲಗೊಳಿಸಿದೆ. ಹೊಸ ಕ್ರಮವಾಗಿ 1 ಸಾವಿರ ಮಂದಿ ಸೇರುವ ಸಭೆ, ಪಾರ್ಟಿ ಇತ್ಯಾದಿಗಳಿಗೆ ಅನುವು ಮಾಡಿಕೊಟ್ಟಿದೆ. ಮುಂದಿನ ವಾರದಿಂದ ಹೊಸ ನಿಯಮ ಜಾರಿಗೆ ಬರಲಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್ ಸಡಿಲಿಕೆ ನಡೆಯಲಿದೆ ಎಂದು ಅಲ್ಲಿನ ಸರಕಾರ ಹೇಳಿದೆ.
ನೆರೆಯ ಇಟಲಿಯಲ್ಲಿ ಕೋವಿಡ್ ತಲ್ಲಣವನ್ನೇ ಸೃಷ್ಟಿಸಿದ್ದ ಹಿನ್ನೆಲೆಯಲ್ಲಿ ಸ್ವಿಜರ್ಲೆಂಡ್ ಕೂಡ ಭೀತಿಗೆ ಒಳಗಾಗಿದ್ದು, ಹಲವು ಕ್ರಮಗಳನ್ನು ಕೈಗೊಂಡಿತ್ತು. ಸದ್ಯ ಹಲವು ನಿಯಮಗಳು ಸಡಿಲಗೊಂಡಿದ್ದರೂ ಸಾಮಾಜಿಕ ಅಂತರ ಮಾಸ್ಕ್ ಧರಿಸುವುದು ಇತ್ಯಾದಿಗಳ ಬಗ್ಗೆ ನಿಯಮಗಳು ಕಟ್ಟುನಿಟ್ಟಾಗಿವೆ. ಅಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಜನರು 1.5 ಮೀಟರ್‌ನಷ್ಟು ದೂರ ಇರುವುದು ಕಡ್ಡಾಯವಾಗಿದೆ. ಮುಂದಿನ ಸೋಮವಾರ ಇದು ಜಾರಿಗೆ ಬರಲಿದೆ. ರೆಸ್ಟೋರೆಂಟ್, ನೈಟ್‌ಕ್ಲಬ್‌ಗಳಿಗೆ ವಿಧಿಸಲಾಗಿದ್ದ ನೈಟ್ ಕರ್ಫ್ಯೂವನ್ನು ವಾಪಸ್ ಪಡೆಯಲಾಗಿದೆ.
ಆದರೆ ಇಲ್ಲೆಲ್ಲ ಜನರು ಅಂತರ ಕಾಪಾಡಿಕೊಳ್ಳುವಂತೆ ಕುಳಿತುಕೊಳ್ಳಬೇಕಾದ್ದು ಕಡ್ಡಾಯವಾಗಿದೆ. ಈ ಮೊದಲು 300 ಜನ ಸೇರಬಹುದು ಎಂಬ ನಿಯಮವಿದ್ದು ಅದನ್ನು ಸಡಿಲಗೊಳಿಸಲಾಗಿದೆ. 300 ಜನಕ್ಕಿಂತ ಹೆಚ್ಚಿದ್ದರೆ, ಕೋವಿಡ್ ಪ್ರಕರಣಗಳು ಕಂಡುಬಂದಲ್ಲಿ ಸೇರಿದ ಜನರ ವಿವರ ಸಂಗ್ರಹಿಸುವುದು, ಪತ್ತೆ ಹಚ್ಚುವುದು ಕಷ್ಟವಾದ್ದರಿಂದ ನಿಯಮ ಅಷ್ಟಕ್ಕೇ ಸೀಮಿತಗೊಳಿಸಲಾಗಿತ್ತು. ಹೆಚ್ಚು ಜನರು ಈಗ ಸೇರಬಹುದಾಗಿದ್ದರೂ ಎಲ್ಲ ಕಾರ್ಯಕ್ರಮಗಳಿಗೆ ಸರಕಾರದಿಂದ ಸೂಕ್ತ ಅನುಮತಿ ಪಡೆಯಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.