ಆಕ್ಸ್‌ಫರ್ಡ್ ಲಸಿಕೆಯ ಎರಡು ಪ್ರಯೋಗ ಫಲಿತಾಂಶ ತೃಪ್ತಿಕರ
Team Udayavani, Jul 21, 2020, 6:49 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಲಂಡನ್: ಕೋವಿಡ್ 19 ಲಸಿಕೆ ಸಂಶೋಧನೆಯಲ್ಲಿ ಜಗತ್ತಿನ ಗಮನ ಸೆಳೆದಿದ್ದ ಆಕ್ಸ್ ಫರ್ಡ್ ವಿವಿ ಲಸಿಕೆಯ ಆರಂಭಿಕ 2 ಹಂತದ ಪ್ರಯೋಗ ಫಲಿತಾಂಶಗಳು ಭರವಸೆ ಹೆಚ್ಚಿಸಿವೆ.
ಆಕ್ಸ್‌ಫರ್ಡ್ ತಜ್ಞರು ಶೋಧಿಸಿದ ‘ಎಝೆಡ್‌ಡಿ1222’ ಪಡೆದ ಹಲವರಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ.
ಯಾವುದೇ ಅಡ್ಡ ಪರಿಣಾಮ ನೀಡದೆ ಲಸಿಕೆ ಸೋಂಕಿತನ ದೇಹದಲ್ಲಿ ಕೆಲಸ ಮಾಡಿದೆ.
ಕೋವಿಡ್ 19 ವಿರುದ್ಧ ಪ್ರಬಲವಾಗಿ ಹೋರಾಡುವ ಟಿ-ಸೆಲ್ ರೋಗ ನಿರೋಧಕಗಳನ್ನು ಹೆಚ್ಚಿಸುವಲ್ಲಿ ಸಫಲವಾಗಿದೆ.
‘ಲಸಿಕೆ ದೀರ್ಘಕಾಲದವರೆಗೆ ರೋಗನಿರೋಧಕ ಶಕ್ತಿಯನ್ನು ರಕ್ಷಿಸುತ್ತದೆ. ಆದಾಗ್ಯೂ ಲಸಿಕೆ ಬಗ್ಗೆ ಹೆಚ್ಚಿನ ಸಂಶೋಧನೆಗೆ ಕಾಲಾವಕಾಶ ಬೇಕಿದೆ’ ಎಂದು ವಿವಿ ತಜ್ಞ ಆ್ಯಂಡ್ರೂ ಪೊಲಾರ್ಡ್ ಹೇಳಿದ್ದಾರೆ.
ಟೆಸ್ಟ್ ಯಶಸ್ವಿ
ಇಂಗ್ಲೆಂಡ್‌ನ ಸಂಸ್ಥೆ ಸೋಂಕಿತರ ಮೇಲೆ ನಡೆಸಿದ ಪ್ರೊಟೀನ್ ಆಧಾರಿತ ಚಿಕಿತ್ಸೆ ಪ್ರಯೋಗ ಪರೀಕ್ಷೆ ಸಫಲತೆ ಕಂಡಿದೆ. ಎಸ್‌ಎನ್‌ಜಿ-0001 ಸೂತ್ರೀ ಕರಣದ ಇಂಟರ್‌ಫೆರಾನ್ ಬೇಟಾ ಎಂಬ ಪ್ರೊಟೀನನ್ನು ಬಳಸಿ ಈ ಚಿಕಿತ್ಸೆ ನೀಡಲಾಗುತ್ತದೆ. 9 ಆಸ್ಪತ್ರೆಗಳಲ್ಲಿ ಉಸಿರಾಟದ ವೇಳೆ ಆಮ್ಲಜನಕದ ಕೊರತೆ ಅನುಭವಿಸಿದ್ದ 101 ಸೋಂಕಿತ ಪ್ರತಿನಿಧಿಗಳಿಗೆ ಪ್ರೊಟೀನ್ ಲಸಿಕೆ ನೀಡಲಾಗಿತ್ತು. ಅದರಲ್ಲಿ ಸರಿಸುಮಾರು ಅರ್ಧದಷ್ಟು ಮಂದಿ ಚೇತರಿಸಿಕೊಂಡಿದ್ದಾರೆ.
ಕೊವ್ಯಾಕ್ಸಿನ್ ಮಾನವ ಪ್ರಯೋಗ ಶೀಘ್ರ
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಆವಿಷ್ಕರಿಸಿದ ‘ಕೊವ್ಯಾಕ್ಸಿನ್’ ಅನ್ನು ಮಾನವನ ಮೇಲೆ ಪ್ರಯೋಗಿಸಲು ಸಂಸ್ಥೆ ಮುಂದಾಗಿದೆ. ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಈ ವಾರ ಕೊವ್ಯಾಕ್ಸಿನ್ ಮಾನವ ಪರೀಕ್ಷೆ ಆರಂಭಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.