ಇಟಲಿ : ಲಾಕ್‌ಡೌನ್ ಇಲ್ಲ, ಇದೆ !
ಇಟಲಿಯಲ್ಲಿನ ಲಾಕ್‌ಡೌನ್ ಕುರಿತು ಅಲ್ಲಿನ ಜನರಿಗೆ ಗೊಂದಲ ಇದೆ.
Team Udayavani, May 8, 2020, 4:40 PM IST
ಪ್ಯಾರಿಸ್‌ನಲ್ಲಿನ ರಸ್ತೆಗಳಲ್ಲಿ ವಾಹನಗಳು ಸಂಚರಿಸುತ್ತಿದ್ದು, ಗುರುವಾರ ಅವುಗಳು ಕಂಡುಬಂದಿದ್ದು ಹೀಗೆ.
ಮಿಲನ್: ಇಟಲಿಯಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಕೆಲವು ಪ್ರದೇಶಗಳಲ್ಲಿ ಜನರು ಮುಕ್ತವಾಗಿ ಓಡಾಡುತ್ತಿದ್ದು, ಕೆಲವು ನಗರಗಳಲ್ಲಿ ಲಾಕ್‌ಡೌನ್ ಮುಂದುವರಿದಿದೆ.
ಇಟಲಿಯ ಸ್ಥಳೀಯ ಆಡಳಿತ ತಮ್ಮದೇ ಆದ ನಿಯಮಗಳನ್ನು ಜಾರಿಗೆ ತರುತ್ತಿರುವುದರಿಂದ ಹೀಗೆ ಕೆಲವೆಡೆ ಲಾಕ್‌ಡೌನ್ ವಿನಾಯಿತಿ, ಇನ್ನು ಕೆಲವೆಡೆ ಲಾಕ್‌ಡೌನ್ ಇದೆ. ಇಟಲಿ ಸರಕಾರವು ಲಾಕ್‌ಡೌನ್ ಘೋಷಿಸುತ್ತಿದ್ದಂತೆ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಜಾರಿ ತಂದಿತು. ಆ ಪೈಕಿ ಕೆಲವು ನಿರ್ಬಂಧಗಳು ಮುಂದುವರಿದರೆ, ಕೆಲವಷ್ಟೇ ಸಡಿಲುಗೊಂಡವು.
ಇಟಲಿಯ ವಿವಿಧ ನಗರಗಳ ಸ್ಥಳೀಯ ಆಡಳಿತ ರಾಷ್ಟ್ರೀಯ ನಿಯಮಗಳನ್ನು ಅಳವಡಿಸಿಕೊಳ್ಳುತ್ತಿದ್ದರೂ ಅವುಗಳಿಗೆ ಪೂರಕವಾಗಿ ತಮಗೆ ಬೇಕಾದಂಥ ಕೆಲವು ಹೆಚ್ಚುವರಿ ಕ್ರಮಗಳನ್ನು ಜಾರಿಗೆ ತಂದಿವೆ. ಇದು ಕೆಲವೆಡೆ ಜನರಲ್ಲಿ ಗೊಂದಲವನ್ನೂ ಸೃಷ್ಟಿಸಿದೆ. ಕಳೆದ ವಾರದಿಂದ ವೆನೆಟೊ ಮತ್ತು ಕ್ಯಾಲಬ್ರಿಯಾದಲ್ಲಿ ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ಆಹಾರ ಮತ್ತು ಪಾನೀಯವನ್ನು ಪೂರೈಸುತ್ತಿವೆ. ಇನ್ನು ಕೆಲವು ಕಡಲ ತೀರಗಳಲ್ಲಿ ಮತ್ತೆ ಚಟುವಟಿಕೆ ಆರಂಭಿಸುವ ಯೋಚನೆ ಚರ್ಚೆಯಲ್ಲಿದೆ. ನೆರೆಹೊರೆಯ ಎಮಿಲಿಯಾ- ರೊಮಾಗ್‌ನಲ್ಲಿನ ಕಡಲ ತೀರಗಳಿಗೆ ಅಲ್ಲಿನ ಮೂಲ ನಿವಾಸಿಗಳಿಗೂ ಪ್ರವೇಶವಿಲ್ಲ. ನಿಯಮಗಳನ್ನು ಉಲ್ಲಂ ಸಿದರೆ 3,000 ಯುರೋ ದಂಡ ತೆರಬೇಕು. ಮಾರ್ಚ್ ಅಂತ್ಯದಲ್ಲಿ ಸರಕಾರ ಹೊಸ ಸುಗ್ರೀವಾಜ್ಞೆ ಜಾರಿಗೊಳಿಸಿ, ಸ್ಥಳೀಯ ಆಡಳಿತಗಳಿಗೆ ತಮ್ಮದೇ ಆದ ಕೆಲವು ನಿಯಮಗಳನ್ನು ಜಾರಿಗೆ ತರಲು ಅವಕಾಶ ಮಾಡಿಕೊಡಲಾಗಿತ್ತು.
ಪುಗ್ಲಿಯಾ ಮತ್ತು ಮೋಲಿಸ್ ಸೇರಿದಂತೆ ದಕ್ಷಿಣದ ಅನೇಕ ಕಡೆಗಳಲ್ಲಿನ ಪ್ರದೇಶಗಳಿಗೆ ಯಾರಾದರೂ ಪ್ರವೇಶಿಸಿದರೆ 14 ದಿನಗಳ ಕಡ್ಡಾಯ ಕ್ವಾರಂಟೇನ್‌ಗೆ ಒಳಗಾಗಬೇಕು. ಹೆಚ್ಚು ಕೊರೊನಾ ಪ್ರಕರಣ ಪತ್ತೆಯಾದ ಲೊಂಬಾರ್ಡಿ ಪ್ರದೇಶದಲ್ಲಿ ಇಂದಿಗೂ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಎಮಿಲಿಯಾ ರೊಮಾಗ್‌ನಲ್ಲಿಯೂ ಇಂಥದ್ದೇ ಕಠಿಣ ನಿಯಮಗಳಿವೆ. ಸ್ಥಳೀಯ ಮೇಯರ್‌ಗಳು ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸುತ್ತಿದ್ದಾರೆ. ಕೆಲವು ಪಟ್ಟಣಗಳು ಮತ್ತು ನಗರಗಳಲ್ಲಿನ ಉದ್ಯಾನವನಗಳನ್ನು ಮತ್ತೆ ಮುಚ್ಚಲು ನಿರ್ಧರಿಸಲಾಗಿದೆ. ಈ ಹಿಂದೆ ಸರಕಾರ ಅವುಗಳನ್ನು ತೆರವು ಮಾಡಲು ಅನುವು ಮಾಡಿಕೊಟ್ಟಿದ್ದರೂ ಸುಗ್ರೀವಾಜ್ಞೆಯ ಅವಕಾಶವನ್ನು ಬಳಸಿ ಸ್ಥಳೀಯ ಆಡಳಿತಗಳು ಅನುಮತಿ ನಿರಾಕರಿಸಿವೆ. ಇಟಲಿಯಲ್ಲಿ ಇದುವರೆಗೆ 2,14,457 ಪ್ರಕರಣಗಳು ಪತ್ತೆಯಾಗಿದ್ದು, 29,684 ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. 93,245 ಮಂದಿ ಗುಣಮುಖರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.