ಶೀಘ್ರ ದಿನಕ್ಕೆ 10 ಲಕ್ಷ ಟೆಸ್ಟ್; ಸಚಿವ ಹರ್ಷವರ್ಧನ್ ಹೇಳಿಕೆ
10 ಲಕ್ಷಕ್ಕಿಂತ ಹೆಚ್ಚು ಗುಣಮುಖರು
Team Udayavani, Jul 31, 2020, 6:40 AM IST
ಹೊಸದಿಲ್ಲಿ: ಸದ್ಯಕ್ಕೆ ದೇಶದಲ್ಲಿ ಪ್ರತಿ ದಿನ ಸುಮಾರು 5 ಲಕ್ಷ ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗುತ್ತಿದ್ದು, ಮುಂದಿನ ಒಂದೆರಡು ತಿಂಗಳಲ್ಲಿ ಇದನ್ನು ದುಪ್ಪಟ್ಟುಗೊಳಿಸಲು ಚಿಂತನೆ ನಡೆದಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಹೊಸದಿಲ್ಲಿಯಲ್ಲಿ ಗುರುವಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಏಪ್ರಿಲ್‌ನಲ್ಲಿ ನಾವು ದಿನಕ್ಕೆ 6 ಸಾವಿರ ಪರೀಕ್ಷೆಗಳನ್ನಷ್ಟೇ ಮಾಡುತ್ತಿದ್ದೆವು.
ಈಗ ಈ ಸಂಖ್ಯೆ 5 ಲಕ್ಷಕ್ಕೇರಿದೆ. ಮುಂದಿನ ಒಂದೆರಡು ತಿಂಗಳಲ್ಲಿ ದಿನಕ್ಕೆ 10 ಲಕ್ಷ ಸ್ಯಾಂಪಲ್‌ಗಳನ್ನು ಪರೀಕ್ಷೆ ಮಾಡುವ ಗುರಿ ಹಾಕಿಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ, 6 ತಿಂಗಳ ಹಿಂದೆ ದೇಶವು ವೆಂಟಿಲೇಟರ್ ಸೇರಿದಂತೆ ಆರೋಗ್ಯ ಮೂಲಸೌಕರ್ಯಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಸ್ಥಿತಿ ಇತ್ತು. ಆದರೆ, ಈಗ ನಾವೇ ವೆಂಟಿಲೇಟರ್‌ಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಹರ್ಷವರ್ಧನ್ ಹೇಳಿದ್ದಾರೆ. ಲಸಿಕೆ ಅಭಿವೃದ್ಧಿ ವಿಚಾರ ಪ್ರಸ್ತಾಪಿಸಿದ ಅವರು, ದೇಶದ ವೈದ್ಯಕೀಯ ಸಮುದಾಯದ ಜೊತೆಗೆ ವಿಜ್ಞಾನಿಗಳು ಕೂಡ ಕೋವಿಡ್ 19 ವಿರುದ್ಧದ ಸಮರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದೂ ಶ್ಲಾಘಿಸಿದ್ದಾರೆ.
10 ಲಕ್ಷ ದಾಟಿದ ಗುಣಮುಖರು: ಇದೇ ಮೊದಲ ಬಾರಿಗೆ ದೇಶದಲ್ಲಿ ಒಂದೇ ದಿನ ಸೋಂಕು ದೃಢಪಟ್ಟವರ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ಗುಣಮುಖರಾದವರ ಸಂಖ್ಯೆ 10 ಲಕ್ಷ ಮೀರಿದೆ. ಇದೇ ವೇಳೆ ದೇಶದಲ್ಲಿ ಸೋಂಕಿತರ ಸಂಖ್ಯೆ 16.17 ಲಕ್ಷ ದಾಟಿದೆ.
ಬುಧವಾರ ಬೆಳಗ್ಗೆ 8ರಿಂದ ಗುರುವಾರ ಬೆಳಗ್ಗೆ 8ರವರೆಗಿನ 24 ಗಂಟೆಗಳ ಅವಧಿಯಲ್ಲಿ 52,123 ಹೊಸ ಪ್ರಕರಣಗಳು ಪತ್ತೆಯಾಗಿ, 775 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಪ್ರಸ್ತುತ ದೇಶದಲ್ಲಿ 5.28 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದರೆ, ಗುಣಮುಖ ರಾದವರ ಸಂಖ್ಯೆ 10 ಲಕ್ಷ ದಾಟಿ, ಗುಣಮುಖ ಪ್ರಮಾಣ ಶೇ.64.44ಕ್ಕೇರಿದೆ ಎಂದೂ ಸಚಿವಾಲಯ ತಿಳಿಸಿದೆ.
ಲಸಿಕೆ ಬಂದರಷ್ಟೇ ಸೋಂಕು ನಿರ್ಮೂಲನೆ ಸಾಧ್ಯ
ಭಾರತದಂಥ ದೊಡ್ಡ ಹಾಗೂ ಜನಸಂಖ್ಯೆ ಅಧಿಕವಿರುವ ದೇಶದಲ್ಲಿ ಸಾಮೂಹಿಕ ರೋಗನಿರೋಧಕ ಶಕ್ತಿಯನ್ನು ಪರಿಗಣಿಸಿಕೊಂಡು ಕೋವಿಡ್ 19 ಸೋಂಕನ್ನು ಎದುರಿಸಲು ಸಾಧ್ಯವಿಲ್ಲ. ಈ ಸೋಂಕನ್ನು ನಿರ್ಮೂಲನೆ ಮಾಡಬೇಕೆಂದರೆ ನಾವು ಲಸಿಕೆಯ ಮೊರೆ ಹೋಗಲೇಬೇಕಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಸಮೂಹ ರೋಗನಿರೋಧಕ ಶಕ್ತಿ ಎನ್ನುವುದು ರೋಗದಿಂದ ಪರೋಕ್ಷ ಸುರಕ್ಷೆ ಒದಗಿಸುವಂಥದ್ದು. ಇದು ಜನರನ್ನು ರೋಗದಿಂದ ರಕ್ಷಿಸುತ್ತದೆ ನಿಜ. ಆದರೆ, ಯಾವಾಗ ಲಸಿಕೆ ಅಭಿವೃದ್ಧಿಯಾಗುತ್ತದೋ ಅಥವಾ ಯಾವಾಗ ಜನರು ರೋಗ ಬಂದು ಸಂಪೂರ್ಣ ಗುಣಮುಖರಾಗುತ್ತಾರೋ ಆಗ ಮಾತ್ರ ಈ ಶಕ್ತಿ ಸೃಷ್ಟಿಯಾಗುತ್ತದೆ.
ಭಾರತದಲ್ಲಿ ಇಂಥ ಸಮೂಹ ರೋಗನಿರೋಧಕ ಶಕ್ತಿಯನ್ನು ಅವಲಂಬಿಸಲು ಆಗುವುದಿಲ್ಲ. ಲಸಿಕೆ ಬಂದ ನಂತರವಷ್ಟೇ ರೋಗ ನಿರ್ಮೂಲನೆ ಸಾಧ್ಯ ಎಂದಿದ್ದಾರೆ ಸಚಿವಾಲಯದ ಅಧಿಕಾರಿಗಳು. ಇತ್ತೀಚೆಗೆ ದಿಲ್ಲಿಯಲ್ಲಿ ಶೇ.23ಕ್ಕೂ ಹೆಚ್ಚು ಮಂದಿಯ ಹಾಗೂ ಮುಂಬೈನ ಶೇ.57ರಷ್ಟು ಮಂದಿಯ ದೇಹದಲ್ಲಿ ಪ್ರತಿಕಾಯ ಸೃಷ್ಟಿಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ದೇಶದ ಜನರಲ್ಲಿ ಸಾಮೂಹಿಕ ರೋಗ ನಿರೋಧಕ ಶಕ್ತಿ ಸೃಷ್ಟಿಯಾಗಿದೆಯೇ ಎಂಬ ಚರ್ಚೆಗಳು ಶುರುವಾಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.