ಪಾಕಿಸ್ತಾನ ಲಾಕ್ ಡೌನ್ ಎಫೆಕ್ಟ್: ಹಸಿವಿನಿಂದ ಗರ್ಭಿಣಿ ಮಹಿಳೆ ಸಾವು-ತನಿಖೆಗೆ ಆದೇಶ: ವರದಿ
ಲಾಕ್ ಡೌನ್ ನಿಂದಾಗಿ ಯಾವುದೇ ಕೆಲಸ ಸಿಕ್ಕಿರಲಿಲ್ಲವಾಗಿತ್ತು. ಇದರಿಂದಾಗಿ ಕುಟುಂಬಕ್ಕೆ ಆಹಾರದ ಸಮಸ್ಯೆ ಎದುರಾಗಿದ್ದು,
Team Udayavani, Apr 20, 2020, 11:14 PM IST
Representative Image
ಕರಾಚಿ: ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್ ಡೌನ್ ನಿಂದಾಗಿ ಗರ್ಭಿಣಿ ಮಹಿಳೆಯೊಬ್ಬಳು ಉಪವಾಸದಿಂದ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಕಳೆದ ವಾರ ಸಿಂಧ್ ನ ಮೀರ್ ಪುರ್ ಖಾಸ್ ಜಿಲ್ಲೆಯ ಜಹುಡೋ ನಗರದ ನಿವಾಸಿ ಸುಗ್ರಾ ಬೀಬಿ(30ವರ್ಷ) ಊಟವಿಲ್ಲದೇ ಸಾವನ್ನಪ್ಪಿರುವುದಾಗಿ ಡೈಲಿ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಸುಗ್ರಾ ಬೀಬಿ ಪತಿ ಅಲ್ಲಾ ಬಕ್ಷ್ ದಿನಗೂಲಿ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ನಿಂದಾಗಿ ಯಾವುದೇ ಕೆಲಸ ಸಿಕ್ಕಿರಲಿಲ್ಲವಾಗಿತ್ತು. ಇದರಿಂದಾಗಿ ಕುಟುಂಬಕ್ಕೆ ಆಹಾರದ ಸಮಸ್ಯೆ ಎದುರಾಗಿದ್ದು, ಈತನಿಗೆ ಆರು ಮಂದಿ ಮಕ್ಕಳಿರುವುದಾಗಿ ವರದಿ ವಿವರಿಸಿದೆ.
ಪತ್ನಿ ಊಟವಿಲ್ಲದೇ ಹಸಿವಿನಿಂದ ಸಾವನ್ನಪ್ಪಿದ್ದು, ಆಕೆಯ ಶವಸಂಸ್ಕಾರ ಮಾಡಲು ತನ್ನ ಬಳಿ ಹಣ ಇಲ್ಲವಾಗಿತ್ತು. ಸ್ಥಳೀಯ ಜನರೇ ಹಣ ಸಂಗ್ರಹಿಸಿ ದೇಣಿಗೆ ನೀಡಿದ್ದರು. ನಂತರ ಪತ್ನಿಯನ್ನು ಸಮಾಧಿ ಮಾಡಲಾಯಿತು ಎಂದು ವರದಿ ವಿವರಿಸಿದೆ.
ಹಸಿವಿನಿಂದ ಗರ್ಭಿಣಿ ಸಾವನ್ನಪ್ಪಿರುವ ಪ್ರಕರಣವನ್ನು ತನಿಖೆ ನಡೆಸುವಂತೆ ಸಿಂಧ್ ಸರ್ಕಾರ ಆದೇಶ ನೀಡಿದೆ. ಈ ಬಗ್ಗೆ ಕೂಡಲೇ ವರದಿ ಒಪ್ಪಿಸುವಂತೆ ಮೀರ್ ಪಿರ್ ಆಡಳಿತ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.