ಕೋವಿಡ್ ಸೋಂಕು ಹರಡುವಿಕೆ ವಿರುದ್ಧ ಪುಟ್ಟ ಮಕ್ಕಳಿಂದ ದೊಡ್ಡ ಪಾಠ: ಪ್ರಧಾನಿ ಮೋದಿ ಮೆಚ್ಚುಗೆ
Team Udayavani, Apr 17, 2020, 7:01 AM IST
ನವದೆಹಲಿ: ಕೋವಿಡ್ ವೈರಸ್ ಸೋಂಕು ಹರಡದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಎಷ್ಟು ಮುಖ್ಯ ಎಂಬ ಬಗ್ಗೆ ಪುಟ್ಟ ಮಕ್ಕಳು ನಮಗೆ ದೊಡ್ಡ ಪಾಠ ಕಲಿಸಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮಹತ್ವ ತಿಳಿಸಿಕೊಡಲು ಮಕ್ಕಳು ಪ್ರಾತ್ಯಕ್ಷಿಕೆ ನೀಡಿರುವ 60 ಸೆಕೆಂಡುಗಳ ವಿಡಿಯೋ ಒಂದನ್ನು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಆಟದ ಮೂಲಕ ಮಕ್ಕಳು ಕಲಿಸಿಕೊಟ್ಟಿರುವ ಪಾಠ, ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಈ ಮಾರಕ ಸೋಂಕಿನಿಂದ ಸುರಕ್ಷಿತವಾಗಿರಬೇಕು ಎಂಬ ಬಗ್ಗೆ ಪರಿಣಾಮಕಾರಿ ಸಂದೇಶ ರವಾನಿಸುತ್ತದೆ ಎಂದಿದ್ದಾರೆ.
ವಿಡಿಯೋದಲ್ಲಿ ಐವರು ಮಕ್ಕಳು ರಸ್ತೆಯಲ್ಲಿ ಕೆಂಪು ಇಟ್ಟಿಗೆಗಳನ್ನು ಒಂದರ ಮುಂದೆ ಮತ್ತೂಂದರಂತೆ ನಿಲ್ಲಿಸಿ, ಮೊದಲ ಇಟ್ಟಿಗೆಯನ್ನು ಬೀಳಿಸುತ್ತಾರೆ. ಇಟ್ಟಿಗೆಗಳು ಪರಸ್ಪರ ಒಂದಕ್ಕೊಂದು ತಾಗಿ ಬೀಳುತ್ತಾ ಹೋಗುತ್ತವೆ.
ಎಲ್ಲ ಇಟ್ಟಿಗೆಗಳೂ ಬಿದ್ದ ಬಳಿಕ ಮತ್ತದೇ ರೀತಿ ಇಟ್ಟಿಗೆಗಳನ್ನು ಜೋಡಿಸುವ ಮಕ್ಕಳು ಮತ್ತೆ ಮೊದಲ ಇಟ್ಟಿಗೆಯನ್ನು ಬೀಳಿಸುತ್ತಾರೆ. ಈ ವೇಳೆ ಇಟ್ಟಿಗೆಗಳು ಒಂದಕ್ಕೊಂದು ತಾಗಿ ಬೀಳುತ್ತಿರುವಾಗ ಬಾಲಕನೊಬ್ಬ ಮಧ್ಯದಲ್ಲಿನ ಒಂದು ಇಟ್ಟಿಗೆಯನ್ನು ತೆಗೆಯುತ್ತಾನೆ.
ಇಟ್ಟಿಗೆಗಳ ಬೀಳುವಿಕೆ ಅಲ್ಲಿಗೇ ನಿಲ್ಲುತ್ತದೆ. ಹಾಗೇ ನಾವುಗಳೂ ಸಾಮಾಜಿಕ ಅಂತರ ಕಾಯ್ದುಕೊಂಡರೆ ಈ ವೈರಸ್ ಹರಡುವುದನ್ನು ತಡೆಗಟ್ಟಬಹುದು ಎಂಬ ಸಂದೇಶವನ್ನು ಮಕ್ಕಳು ನೀಡುತ್ತಾರೆ. ಮಕ್ಕಳ ಈ ಕ್ರಿಯಾಶೀಲ ಚಿಂತನೆ ಇದೀಗ ಪ್ರಧಾನಿ ಮೋದಿ ಅವರ ಗಮನವನ್ನು ಸೆಳೆದಿದೆ.
बच्चों ने खेल-खेल में जो बता दिया, उसमें कोरोना महामारी से बचने की एक बड़ी सीख है। pic.twitter.com/n13Z92zi2W
— Narendra Modi (@narendramodi) April 16, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.