ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಆರಂಭ : ಕ್ಷಿಪ್ರ ವರದಿ, ಪ್ರಕರಣ ಅಧಿಕ ಸಾಧ್ಯತೆ
ಭಯ ಬೇಡ ಎಂದ ವೈದ್ಯರು
Team Udayavani, Jul 13, 2020, 6:50 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಕೋವಿಡ್ 19 ಸೋಂಕುಪೀಡಿತರ ಶೀಘ್ರ ಪತ್ತೆಗಾಗಿ ಸೋಮವಾರದಿಂದ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಅಧಿಕೃತವಾಗಿ ಆರಂಭವಾಗಲಿದೆ.
ಒಂದು ವಾರದಲ್ಲಿ ರಾಜ್ಯಾದ್ಯಂತ ಹೆಚ್ಚುವರಿಯಾಗಿ ಒಂದು ಲಕ್ಷ ಮಾದರಿಗಳನ್ನು ಪರೀಕ್ಷೆಗೊಳಪಡಿಸುವ ಗುರಿಯನ್ನು ಸರಕಾರ ಹೊಂದಿದೆ.
ಈಗಾಗಲೇ ಒಂದು ಲಕ್ಷ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್ಗಳನ್ನು ಖರೀದಿಸಲಾಗಿದ್ದು, ಬೆಂಗಳೂರಿನಲ್ಲಿ 50 ಸಾವಿರ, ಇತರ ಜಿಲ್ಲೆಗಳಲ್ಲಿ 50 ಸಾವಿರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಸೋಮವಾರದಿಂದ ರಾಜ್ಯದ ಎಲ್ಲೆಡೆ ಪರೀಕ್ಷೆ ಆರಂಭಗೊಳ್ಳಲಿದೆ. ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ತ್ವರಿತವಾಗಿದ್ದು, 15ರಿಂದ 20 ನಿಮಿಷಗಳಲ್ಲಿ ವರದಿ ಲಭ್ಯವಾಗಲಿದೆ.
ನಿತ್ಯ 20 ಸಾವಿರ ಸಾಮಾನ್ಯ ಪರೀಕ್ಷೆಗಳ ಜತೆಗೆ ಈ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳು ನಡೆಯಲಿದ್ದು, ಸೋಂಕುಪೀಡಿತರ ಸಂಖ್ಯೆ ಹೆಚ್ಚಬಹುದು.
ಆತಂಕ ಬೇಡ: ಡಾ| ಸಿ.ಎನ್. ಮಂಜುನಾಥ್
ಪರೀಕ್ಷೆ ಹೆಚ್ಚಿದರೆ ಸೋಂಕುಪೀಡಿತರ ಸಂಖ್ಯೆಯೂ ಹೆಚ್ಚುತ್ತದೆ. ಆದರೆ ಆತಂಕ ಬೇಡ. ವೈರಸ್ ದೇಹ ಸೇರಿದ 8-10 ದಿನಗಳಲ್ಲಿ ಸಾಯುತ್ತದೆ. ಸೋಂಕು ದೃಢಪಟ್ಟವರ ಪೈಕಿ ಶೇ.90 ಮಂದಿಗೆ ಯಾವುದೇ ಚಿಕಿತ್ಸೆ ಬೇಕಿಲ್ಲ. ಪೌಷ್ಟಿಕ ಆಹಾರ, ವಿಶ್ರಾಂತಿಯಂತಹ ಆರೈಕೆ ಸಾಕು. ಶೇ.8ರಷ್ಟು ಮಂದಿಗೆ ಆಕ್ಸಿಜನ್, ಶೇ. 2ರಷ್ಟು ಮಂದಿಗೆ ಮಾತ್ರ ವೆಂಟಿಲೇಟರ್ ಅಗತ್ಯವಿರುತ್ತದೆ. ಲಕ್ಷಣ ಇಲ್ಲದವರು ಮನೆಯಲ್ಲಿಯೇ ಆರೈಕೆಯಲ್ಲಿರಬಹುದು. ಅಗತ್ಯ ವ್ಯವಸ್ಥೆ ಇಲ್ಲದವರನ್ನು ಕೋವಿಡ್ 19 ಕೇರ್ ಸೆಂಟರ್ನಲ್ಲಿಟ್ಟು ಆರೈಕೆ ಮಾಡಬಹುದು ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆ ನಿರ್ದೇಶಕ ಡಾ| ಸಿ.ಎನ್. ಮಂಜುನಾಥ್ ತಿಳಿಸಿದ್ದಾರೆ.
22 ಸಾವಿರಕ್ಕೂ ಹೆಚ್ಚು ದೈನಿಕ ಸೋಂಕು
ಹೊಸದಿಲ್ಲಿ: ದೇಶಾದ್ಯಂತ ಕೋವಿಡ್ 19 ತೀವ್ರಗೊಂಡಿದ್ದು, ಕಳೆದ 9 ದಿನಗಳಲ್ಲಿ ಪ್ರತಿದಿನವೂ 22 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಶನಿವಾರದಿಂದ ರವಿವಾರ ಬೆಳಗ್ಗಿನ ತನಕದ 24 ತಾಸುಗಳ ಅವಧಿಯಲ್ಲಿ ದೇಶಾದ್ಯಂತ 28,637 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದು ಇದುವರೆಗಿನ ದೈನಿಕ ಗರಿಷ್ಠ. ದಿನವೊಂದಕ್ಕೆ 26 ಸಾವಿರಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಇದು ಸತತ 3ನೇ ದಿನ. ಶನಿವಾರ 27,114, ಶುಕ್ರವಾರ 26,506 ಪ್ರಕರಣ ಪತ್ತೆಯಾಗಿದ್ದವು. ಗುಣಮುಖ ಪ್ರಮಾಣವೂ ಸುಧಾರಣೆಯಾಗುತ್ತಿದ್ದು, ಸದ್ಯ ಶೇ. 62.93ರಷ್ಟಿರುವುದು ಸಮಾಧಾನದ ಸಂಗತಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Government: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಮುಹೂರ್ತ ನಿಗದಿ: ವಿಜಯೇಂದ್ರ
Award: ಪ್ರೊ.ತಾಳ್ತಜೆ ವಸಂತ ಕುಮಾರ್ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್ಡಿಕೆ
MUST WATCH
ಹೊಸ ಸೇರ್ಪಡೆ
Madarsa Act: ಯುಪಿ ಮದರಸಾ ಕಾಯ್ದೆ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ
Kharge: ಬೆಂಗಳೂರಿಗೆ ಬಂದು ನನ್ನ ಜತೆ ಚರ್ಚೆಗೆ ನಿಲ್ಲಿ: ಪ್ರಧಾನಿ ಮೋದಿಗೆ ಖರ್ಗೆ ಸವಾಲು
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್ಸಿಪಿ ವರಿಷ್ಠ ಶರದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.