ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನಲೆ: ಸೌದಿಯಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ
Team Udayavani, Apr 13, 2020, 5:30 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಸೌದಿ ಅರೇಬಿಯಾದಲ್ಲೂ ಕೋವಿಡ್ ವೈರಸ್ ವ್ಯಾಪಿಸುವಿಕೆ ತೀವ್ರಗೊಂಡಿದ್ದು, ಈಗಾಗಲೇ ಹೇರಿರುವ ಕರ್ಫ್ಯೂವನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸಿ ಭಾವೀ ದೊರೆ ಸಲ್ಮಾನ್ ಭಾನುವಾರ ಆದೇಶ ಹೊರಡಿಸಿದ್ದಾರೆ. ಕಳೆದ 4 ದಿನಗಳಲ್ಲಿ ಪ್ರತಿ ದಿನ 300ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸುಮಾರು 3 ಕೋಟಿ ಜನಸಂಖ್ಯೆಯಿರುವ ಈ ದೇಶದಲ್ಲಿ ಈಗಾಗಲೇ 52 ಮಂದಿ ಕೋವಿಡ್ ವೈರಸ್ ಗೆ ಬಲಿಯಾಗಿದ್ದು, 4,033 ಮಂದಿಗೆ ಸೋಂಕು ದೃಢಪಟ್ಟಿದೆ. ಸೌದಿ ಅರಮನೆಯನ್ನೂ ಕೋವಿಡ್ ವೈರಸ್ ಪ್ರವೇಶಿಸಿದ್ದು, ರಾಜಮನೆತನದ 150 ಸದಸ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಭಾರತೀಯರು ವಾಪಸ್
ಸಂಯುಕ್ತ ಅರಬ್ ಒಕ್ಕೂಟದಲ್ಲಿ (ಯುಎಇ) ಅತಂತ್ರರಾಗಿರುವ ಭಾರತೀಯರು ಸೇರಿದಂತೆ ವಿದೇಶಿಯರನ್ನು ಅವರವರ ದೇಶಕ್ಕೆ ವಾಪಸ್ ಕಳುಹಿಸಲು ಸಿದ್ಧ ಎಂದು ಯುಎಇ ಸರ್ಕಾರ ಹೇಳಿದೆ. ಈ ಕುರಿತು ಎಲ್ಲ ದೇಶಗಳ ರಾಯಭಾರಿ ಕಚೇರಿಗಳಿಗೆ ಸುತ್ತೋಲೆ ಕಳುಹಿಸಲಾಗಿದೆ.
ಯಾರು ತಮ್ಮ ದೇಶಗಳಿಗೆ ಮರಳಲು ಇಚ್ಛಿಸುತ್ತಿದ್ದಾರೋ, ಅಂಥವರನ್ನು ಕಳುಹಿಸಲು ಸೂಕ್ತ ಸಿದ್ಧತೆ ಮಾಡುತ್ತೇವೆ. ಆದರೆ, ಕೋವಿಡ್ ವೈರಸ್ ಪರೀಕ್ಷೆಯಲ್ಲಿ ಅವರ ವರದಿ ನೆಗೆಟಿವ್ ಬಂದರಷ್ಟೇ ಸ್ವದೇಶಕ್ಕೆ ಕಳುಹಿಸಲಾಗುತ್ತದೆ ಎಂದೂ ಭಾರತದ ಯುಎಇ ರಾಯಭಾರಿ ಡಾ.ಅಹ್ಮದ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.