ಸಿಂಗಾಪುರ: ಒಂದಾಗುತ್ತಿರುವ ಸ್ನೇಹಿತರು, ಪ್ರೇಮಿಗಳು!
ಸಿಂಗಾಪುರ: ಶುಕ್ರವಾರದಿಂದ ಶಾಪಿಂಗ್ ಮಾಲ್, ರೆಸ್ಟೋರಂಟ್‌ಗಳು ತೆರೆದುಕೊಂಡಿವೆ.
Team Udayavani, Jun 20, 2020, 12:42 PM IST
ಸಿಂಗಾಪುರ: ಸುಮಾರು ಎರಡು ತಿಂಗಳುಗಳಿಗಿಂತ ಹೆಚ್ಚು ಕಾಲ ದೂರ ದೂರವೇ ಉಳಿದಿದ್ದ ಸಿಂಗಾಪುರದ ಸ್ನೇಹಿತರು, ಪ್ರೇಮಿಗಳು ಶುಕ್ರವಾರ ಮತ್ತೆ ಜತೆಯಾಗಿದ್ದಾರೆ. ಶಾಂಪಿಂಗ್, ರೆಸ್ಟೋರಂಟ್‌ಗಳಲ್ಲಿ ಊಟ, ಚಾಹ ಸಹಿತ ಬೇಕಾದ ತಿಂಡಿ ತಿನಸುಗಳನ್ನು ಸವಿದು ಸಂಭ್ರಮಿಸಿದರು.
ಕೋವಿಡ್ ವೈರಸ್ ವ್ಯಾಪಕವಾಗಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸುಮಾರು ಎರಡು ತಿಂಗಳುಗಳಿಗಿಂತಲೂ ಹೆಚ್ಚು ಕಾಲ ದೇಶದಲ್ಲಿ ಜಾರಿಗೊಳಿಸಿದ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದು, ಶುಕ್ರವಾರದಿಂದ ಶಾಪಿಂಗ್ ಮಾಲ್, ರೆಸ್ಟೋರಂಟ್‌ಗಳು ತೆರೆದುಕೊಂಡಿವೆ. ಸಾರ್ವಜನಿಕರ ಓಡಾಟಕ್ಕೂ ಅವಕಾಶ ನೀಡಲಾಗಿದೆ. ಪರಿಣಾಮ ಜನರು ತಮ್ಮ ಸ್ನೇಹಿತರೊಂದಿಗೆ ಬಹುಕಾಲದ ಅನಂತರ ಸುತ್ತಾಡಿ ಖುಷಿ ಪಡುವಂತಾಗಿದೆ. ಹೊಟೇಲ್ – ರೆಸ್ಟೋರೆಂಟ್‌ಗಳಲ್ಲಿ ತಿಂಡಿಗಳನ್ನು ಪಾರ್ಸೆಲ್ ಮತ್ತು ಹೋಮ್ ಡೆಲಿವರಿ ನೀಡಲು ಈ ಹಿಂದೆಯೇ ಅವಕಾಶ ನೀಡಲಾಗಿತ್ತು. ಇದೀಗ ರೆಸ್ಟೋರೆಂಟ್‌ಗಳಲಿಗೆ ಜನರ ಪ್ರವೇಶಿಸಲು ಅವಕಾಶ ನೀಡಿದ್ದರಿಂದ ಪ್ರತಿ ಟೇಬಲ್‌ಗಳ ಮಧ್ಯೆ ಪ್ಲಾಸ್ಟಿಕ್ ಪರದೆಗಳನ್ನು ಅಳವಡಿಸಲಾಗಿತ್ತು. ಅಂಗಡಿಗಳು ಮತ್ತು ಶಾಪಿಂಗ್ ಮಾಲ್‌ಗಳಲ್ಲೂ ಸಾಮಾಜಿಕ ಅಂತರ ಕಾಪಾಡಲು ಹಳದಿ ಟೇಪ್‌ಗ್ಳನ್ನು ಅಳವಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು.
ಸಿಂಗಾಪುರದಲ್ಲಿ ಲಾಕ್‌ಡೌನ್ ಹಂತಗಳಲ್ಲಿ ಸಡಿಲಗೊಳಿಸಲಾಗಿದೆ. ಮೊದಲನೆ ಯದಾಗಿ ಜೂನ್ ಆರಂಭದಲ್ಲಿ ಶಾಲೆಗಳು ಪುನರಾರಂಭಗೊಂಡವು. ಜಿಮ್‌ಗಳು, ಉದ್ಯಾನವನಗಳು ಮತ್ತು ಕಡಲತೀರಗಳು ಈಗ ಮತ್ತೆ ತೆರೆಯಲಾಯಿತು. ಆದರೆ ಧಾರ್ಮಿಕ ಸಭೆಗಳು, ಬಾರ್‌ಗಳು, ಚಿತ್ರಮಂದಿರಗಳು ಮತ್ತು ಬೃಹತ್ ಪ್ರಮಾಣದಲ್ಲಿ ಜನ ಸೇರುವ ಕಾರ್ಯ ಕ್ರಮಗಳ ಆಯೋಜನಗೆ ಇನ್ನೂ ಅವಕಾಶ ನೀಡಿಲ್ಲ.
ಸಿಂಗಾಪುರದಲ್ಲಿ ಈ ವರೆಗೆ 41,615 ಕೊರೊನಾ ವೈರಸ್ ಸೋಂಕು ಪ್ರಕರಣ ಪತ್ತೆಯಾಗಿದೆ. ಅದರಲ್ಲಿ 26 ಮಂದಿ ಮೃತಪಟ್ಟಿದ್ದು, 32,241 ಮಂದಿ ಗುಣಮುಖರಾಗಿದ್ದಾರೆ. 8,877 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.