‘ಜಗತ್ತಿಗೆ ಸಾಂತ್ವನ ಹೇಳಲು ಪ್ರೀತಿಯ ಬೆಳಕು ಬಂದಿದೆ…’ ; 22 ಗಾಯಕರ ವಿನೂತನ ಪ್ರಯತ್ನ
ಪ್ರಧಾನಮಂತ್ರಿ ಕೇರ್ಸ್ ಫಂಡ್ ಗೆ ನೆರವಾಗಲು ಇಂದಿನಿಂದ 3 ದಿನ 'ಸಂಗೀತ ಸೇತು'
Team Udayavani, Apr 10, 2020, 7:35 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕೋವಿಡ್ ಕಾಟದಿಂದ ತತ್ತರಿಸಿರುವ ಫ್ರಾನ್ಸ್‌ನಲ್ಲಿ ಕೆಲ ದಿನಗಳ ಹಿಂದೆ 51 ಸಂಗೀತ ಕಲಾವಿದರು ಬೊಲೆರೊ ನುಡಿಸಿದ್ದರು. ಅದಕ್ಕೂ ಮುನ್ನ ನೆದರ್ಲೆಂಡ್‌ನಲ್ಲಿ 18 ಗಾಯಕರು, ತಾವಿದ್ದ ಸ್ಥಳದಲ್ಲಿ ಒಂದೇ ಹಾಡನ್ನು ಹಾಡಿದ್ದ ವಿಡಿಯೊ ವೈರಲ್ ಆಗಿತ್ತು.
ಈಗ ಅಂಥದ್ದೇ ಪ್ರಯತ್ನವನ್ನು ದಕ್ಷಿಣ ಭಾರತದ ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಮಾಡಿದ್ದಾರೆ. ‘ಲೋಕಮ್ ಮುಳುವನ್ ಸುಖಮ್…’ ಎನ್ನುವ ಈ ಹಾಡಿಗೆ, 22 ಗಾಯಕರು ಧ್ವನಿ ಗೂಡಿಸಿದ್ದಾರೆ. ‘ಜಗತ್ತಿಗೆ ಸಾಂತ್ವನ ಹೇಳಲು ಪ್ರೀತಿಯ ಬೆಳಕು ಬಂದಿದೆ, ನಿಮ್ಮ ಕಣ್ತೆರೆಯಿರಿ’ ಎನ್ನುವ ಅರ್ಥದ ಈ ಹಾಡು, ಚಿತ್ರ ಅವರೊಂದಿಗೆ, ಸುಜಾತಾ, ಶ್ವೇತಾ, ದೇವಾನಂದ್, ವಿಧು ಪ್ರತಾಪ್, ಜ್ಯೋತ್ಸ್ನ್ಯಾ, ರಿಮಿ ಟಾಮಿ, ರಂಜಿನಿ ಜೋಸ್, ಕವಲಂ ಶ್ರೀಕುಮಾರ್, ಅಫ್ಜಲ್ ಮತ್ತು ಶರತ್ ಸೇರಿದಂತೆ 22 ಗಾಯಕರು ಹಾಡಿದ್ದಾರೆ.
ಇದು 1972ರಲ್ಲಿ ಬಿಡುಗಡೆಯಾಗಿರುವ ಮಲಯಾಳಂ ಚಿತ್ರ ‘ಸ್ನೇಹದೀಪಮೆ ಮಿಝಿ ಥುರಕ್ಕು’ ಎಂಬ ಚಿತ್ರದ ಗೀತೆಯಾಗಿದೆ. ಮೂಲ ಹಾಡನ್ನು ಎಸ್. ಜಾನಕಿ ಅವರು ಹಾಡಿದ್ದು ಪಿ. ಭಾಸ್ಕರನ್ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದರು. ಗಾಯಕಿ ಚಿತ್ರಾ ಅವರ ಫೇಸ್ ಬುಕ್ ಪೇಜ್ ನಲ್ಲಿ ಅಪ್ಲೋಡ್ ಆಗಿರುವ ಈ ಹಾಡು ಈಗಾಗಲೇ 4.27 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದ್ದು 10 ಸಾವಿರಕ್ಕೂ ಅಧಿಕ ಶೇರ್ ಗೆ ಒಳಗಾಗಿದೆ.
ಇಂದಿನಿಂದ 3 ದಿನ ‘ಸಂಗೀತ ಸೇತು’
ಲಾಕ್‌ಡೌನ್ ಬಂಧನದಲ್ಲಿರುವ ಜನರಿಗೆ ಮನರಂಜನೆ ನೀಡಲು ಹಾಗೂ ಪಿಎಂ ಕೇರ್ಸ್ ಫಂಡ್‌ಗೆ ನೆರವಾಗುವ ಸಲುವಾಗಿ ಪ್ರಸಿದ್ಧ ಗಾಯಕರಿಂದ 3 ದಿನಗಳ ಕಾಲ ನಿರಂತರವಾಗಿ ‘ಸಂಗೀತ ಸೇತು’ ಕಾರ್ಯಕ್ರಮ ನಡೆಯಲಿದೆ. ಏ.10ರಿಂದ 3 ದಿನಗಳ ಕಾಲ ರಾತ್ರಿ 8ರಿಂದ 9 ಗಂಟೆಯವರೆಗೆ ಸಂಗೀತ ಸೇತು ಗಾಯನ ನಡೆಯಲಿದೆ.
ಒಟಿಟಿ ಪ್ಲಾಟ್‌ಫಾರಂ, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅದನ್ನು ನೋಡಲು ಸಾಧ್ಯವಿದೆ. ಖ್ಯಾತ ಗಾಯಕರಾದ ಎಸ್ಪಿ ಬಾಲಸುಬ್ರಹ್ಮಣ್ಯಂ, ಯೇಸುದಾಸ್, ಆಶಾ ಬೋಸ್ಲೆ, ಸೋನು ನಿಗಮ್, ಉದಿತ್ ನಾರಾಯಣ್, ಹರಿಹರನ್, ಶಂಕರ್ ಮಹದೇವನ್ ಮತ್ತಿತರ ಗಾಯಕರು ಹಾಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಬಾಲಿವುಡ್ ನಟ ಶಾರುಖ್ ಖಾನ್ ಗೆ ಜೀವ ಬೆದರಿಕೆ ಹಾಕಿದ ವಕೀಲ ಛತ್ತೀಸ್ ಗಢದಲ್ಲಿ ಬಂಧನ
Bollywood: ʼಸಿಂಗಂ ಎಗೇನ್ʼ ಬಳಿಕ ʼಗೋಲ್ ಮಾಲ್ -5ʼಗೆ ಜತೆಯಾಗಲಿದ್ದಾರೆ ಅಜಯ್- ರೋಹಿತ್
Bollywood: ʼಕಲ್ಕಿʼ ನಿರ್ದೇಶಕನ ಸಿನಿಮಾದಲ್ಲಿ ಬಿಟೌನ್ ಬ್ಯೂಟಿ ಆಲಿಯಾ?
Hyderabad; ಸಲ್ಮಾನ್ ಖಾನ್ ಚಿತ್ರದ ಚಿತ್ರೀಕರಣ ಸ್ಥಳದಲ್ಲಿ ವ್ಯಾಪಕ ಕಟ್ಟೆಚ್ಚರ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.