ಸಾಮಾಜಿಕ ಮಾಧ್ಯಮವನ್ನು ಹಳಿಗೆ ತಂದ ಕೋವಿಡ್ 19 ವೈರಸ್
ಹಳೆ ಶೈಲಿಯಿಂದ ಹೊರಬಂದ ಜಾಲತಾಣಗಳು
Team Udayavani, Apr 23, 2020, 1:49 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮಣಿಪಾಲ: ಕೋವಿಡ್ 19 ವೈರಸ್ ಬಂದ ಬಳಿಕ ಸಾಮಾಜಿಕ ಮಾಧ್ಯಮಗಳು ಕೆಲಸ ಮಾಡುವ ವಿಧಾನಗಳಲ್ಲಿ ಬದಲಾವಣೆಗಳು ಕಾಣುತ್ತಿವೆ. ಭಾರತ ಸೇರಿದಂತೆ ಬಹುತೇಕ ಹಲವು ರಾಷ್ಟ್ರಗಳಲ್ಲಿ ಸಾಮಾಜಿಕ ಜಾಲತಾಣಗಳು ತನ್ನ ಹಳೆಯ ಶೈಲಿಯಿಂದ ಹೊರ ಬಂದಿವೆ.
ಕೆಲವು ರಾಷ್ಟ್ರಗಳಲ್ಲಿ ಅದರ ಸದ್ಭಳಕೆಗಿಂತಲೂ ಸುಳ್ಳು ಸುದ್ದಿಗಳ ಹರಡುವಿಕೆಯ ಪ್ರಮಾಣ ಹೆಚ್ಚಾಗಿತ್ತು. ಇದೀಗ ಕೋವಿಡ್-19 ಕುರಿತಂತಹ ಜಾಗೃತಿ ಕಾರ್ಯಗಳು ಪ್ರಪಂಚಾದ್ಯಂತ ನಡೆಯುತ್ತಿವೆ. ತಜ್ಞರ ಪ್ರಕಾರ ಸಾಮಾಜಿಕ ಜಾಲತಾಣಗಳ ಈ ನಡೆ ಕೋವಿಡ್ 19 ವೈರಸ್ ಸೋಂಕಿನ ಬಳಿಕವೂ ಮುಂದುವರಿಯಲಿದೆ ಎಂದಿದ್ದಾರೆ.
ಯೂಟ್ಯೂಬ್‌ಗಳಲ್ಲಿ ಬ್ರೌಸ್ ಹೆಚ್ಚಳ
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯೂ ಹೆಚ್ಚಾಗಿದೆ. ಕೋವಿಡ್ 19 ವೈರಸ್ ಭೀತಿ ಆವರಿಸಿರುವ ಕಾರಣ ಜನರು ಮನೆಯಲ್ಲೇ ಉಳಿದಿದ್ದಾರೆ. ಈ ಕಾರಣಕ್ಕೆ ಜಗತ್ತಿನಾದ್ಯಂತ ಇಂಟರ್‌ನೆಟ್ ಗ್ರಾಹಕರ ಸಂಖ್ಯೆ ವಿಪರೀತ ಹೆಚ್ಚಾಗಿದೆ.
ಯೂಟ್ಯೂಬ್‌ನಲ್ಲಿ ಸಮಯ ಕಳೆಯುವವರ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಅದರ ಸಿಇಒ. ವೀಡಿಯೊಗಳ ಹುಡುಕಾಟದಲ್ಲೂ ಮನರಂಜನೆಯ ಜತೆಗೆ ಕೋವಿಡ್ 19 ವೈರಸ್ ಸೋಂಕಿನ ಸುರಕ್ಷತೆ ಇತ್ಯಾದಿಯನ್ನು ವೀಕ್ಷಿಸುತ್ತಿದ್ದಾರೆ.
ಇನ್ನು ವಾಟ್ಸ್ಯಾಪ್ ಬಳಕೆಯಲ್ಲಿ ಶೇ. 40ರಷ್ಟು ಹೆಚ್ಚಳ ಕಂಡಿದೆ ಎಂದು ಇತ್ತೀಚೆಗೆ ವರದಿಯೊಂದು ಹೇಳಿತ್ತು. ಸರಕಾರಗಳು ತಮ್ಮ ಅಧಿಕಾರಿಗಳಿಗೆ ಮಾಹಿತಿಗಳನ್ನು ವಾಟ್ಸ್ಯಾಪ್ ಮೂಲಕ ಹೆಚ್ಚು ನೀಡುತ್ತಿವೆ. ಬಹುತೇಕ ಮಾಧ್ಯಮಗಳೂ ಇಂದು ವಾಟ್ಸ್ಯಾಪ್ ಅನ್ನು ಮಾಹಿತಿ ಪ್ರಸರಣದ ಮೂಲವಾಗಿ ಬಳಸುತ್ತಿವೆ.
ಕೋವಿಡ್ 19 ವೈರಸ್ ಸೋಂಕು ಆರಂಭವಾದಾಗ ವಾಟ್ಸ್ಯಾಪ್ ನಲ್ಲಿ ಶೇ.27ರಷ್ಟು ಬಳಕೆ ಪ್ರಮಾಣ ಹೆಚ್ಚಳವಾಗಿತ್ತು. ಮಧ್ಯಂತರ ಅವಧಿಯಲ್ಲಿ ಶೇ. 41 ರಷ್ಟು ಹೆಚ್ಚಾಗಿದೆ. ಇನ್ನು ಕೆಲವು ದೇಶಗಳಲ್ಲಿ ಶೇ.51ರಷ್ಟು ಏರಿದೆ. ಶೇಕಡಾ 76ರಷ್ಟು ಹೆಚ್ಚಳ ಸ್ಪೇನ್ ನಲ್ಲಿ ಕಂಡುಬಂದಿದೆ.
ಕಂಪೆನಿಗಳು ತಮ್ಮ ಸಹೋದ್ಯೋಗಿಗಳನ್ನು ಹೆಚ್ಚಾಗಿ ವಾಟ್ಸಪ್‌ಗ್ಳಲ್ಲಿ ಕಾಣುತ್ತಿದ್ದಾರೆ. ಮಾಹಿತಿ ಗಳು ಮತ್ತು ನೋಟಿಸ್‌ಗಳನ್ನು ವಾಟ್ಸ್ಯಾಪ್ ಮೂಲಕ ಕಳುಹಿಸಲಾಗುತ್ತಿದೆ. ಬಹುದೊಡ್ಡ ಕಂಪೆನಿಗಳಾಗಿದ್ದರೆ ಅವುಗಳ ಸಿಇಒಗಳು, ಸಿಬಂದಿ ಲೈವ್ ಸ್ಟ್ರೀಮಿಂಗ್‌ನಲ್ಲಿ ಮೀಟಿಂಗ್‌ಗಳನ್ನು ನಡೆಸುತ್ತಿದ್ದಾರೆ.
ಇವುಗಳು ಉದ್ಯಮ ಶೀಲರ ಕರ್ತವ್ಯಗಳಾದರೆ. ಇನ್ನು ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದ್ದು, ಈ ಹಿನ್ನೆಲೆಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಗ್ರೂಪ್‌ಗ್ಳು ರಚಿತವಾಗಿದೆ. ಇವುಗಳ ಮೂಲಕ ನೋಟ್ಸ್‌ಗಳು, ಪರೀಕ್ಷೆಗೆ ಕೇಳಬಹುದಾದ ಅಗತ್ಯ ಪ್ರಶ್ನೆಗಳನ್ನು ಪಟ್ಟಿ ಮಾಡಿಕೊಡಲಾಗುತ್ತಿದೆ.
ಫೇಸ್ ಬುಕ್ ಶೇ. 37
ಒಟ್ಟಾರೆಯಾಗಿ ಫೇಸ್ ಬುಕ್ ಬಳಕೆ ಶೇಕಡಾ 37ರಷ್ಟು ಹೆಚ್ಚಾಗಿದೆಯಂತೆ. ವಿಚಾಟ್ ಮತ್ತು ವೀಬೊ ಸೇರಿದಂತೆ ಸ್ಥಳೀಯ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳ ಬಳಕೆಯಲ್ಲಿ ಚೀನ ಶೇ. 58ರಷ್ಟು ಹೆಚ್ಚಳ ಕಂಡಿದೆ. ಈ ವಿದ್ಯಮಾನ ಜಗತ್ತಿನ ಇತರ ರಾಷ್ಟ್ರಗಳಲ್ಲಿಯೂ ಕಂಡುಬಂದಿದೆ.
ಎಲ್ಲಾ ಮೆಸೇಜಿಂಗ್ ಪ್ಲಾಟ್‌ಫಾರ್ಮ್ಗಳಲ್ಲಿ 18-34 ವಯಸ್ಸಿನವರು ಹೆಚ್ಚಾಗಿ ಕಂಡು ಬರುತ್ತಿದ್ದಾರೆ. ವಾಟ್ಸ್ಯಾಪ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಳಸುವ 35ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇ. 40 ಹೆಚ್ಚಳವಾಗಿದೆ. ಅಂತಾರ್ಜಾಲ ಬಳಕೆಯಲ್ಲಿಯೂ ಹೆಚ್ಚಳವಾಗುತ್ತಿದೆ.
ಸುಳ್ಳು ಸುದ್ದಿಗೆ ಕಡಿವಾಣ
ಚುನಾವಣೆಗಳು ಮತ್ತು ಇತರ ಕಾರಣಗಳಿಗಾಗಿ ಅತೀ ಹೆಚ್ಚು ಸುಳ್ಳು ಸುದ್ದಿಗಳನ್ನು ಹರಿಯಬಿಡಲಾಗುತ್ತಿದ್ದುದು ಈ ವರೆಗಿನ ಘಟನೆಗಳಾದರೆ ಈಗ ಕೋವಿಡ್ 19 ವೈರಸ್ ಕುರಿತಾದ ಸುಳ್ಳು ಸುದ್ದಿಗಳನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ.
ಆರೋಗ್ಯ ಮಾಹಿತಿಗಳ ರವಾನೆ
ಸಂಚಾರಗಳು ಸ್ತಬ್ಧವಾಗಿರುವ ಕಾರಣ ಆರೋಗ್ಯ ಮಾಹಿತಿ ಮತ್ತು ಕೈಗೊಳ್ಳಬಹುದಾದ ಕ್ರಮಗಳನ್ನು ಇಂಟರ್‌ನೆಟ್ ಮೂಲಕ ಜನರಿಗೆ ತಲುಪಿಸಲಾಗುತ್ತಿದೆ. ಆರೋಗ್ಯ ಅಧಿಕಾರಿಗಳು ಮತ್ತು ಜನ ಸಮಾನ್ಯರ ನಡುವಿನ ಕೊಂಡಿಯಾಗಿ ಇವುಗಳು ಕೆಲಸ ಮಾಡುತ್ತಿವೆ.
ಇಂದು ಇವುಗಳ ಬಳಕೆ ಎಷ್ಟಿದೆ ಎಂದರೆ ಬಹುತೇಕ ರಾಷ್ಟ್ರಗಳಲ್ಲಿ ಮಹಾ ಚುನಾವಣೆಗಳ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ವಾರಿಯರ್ಸ್ ರೀತಿ ಕೆಲಸ ಮಾಡುತ್ತವೆ. ಇತ್ತೀಚೆಗೆ ಇದೊಂದು ಟ್ರೆಂಡ್. ಆದರೆ ಈಗ ಪ್ರಚಾರ ಮತ್ತು ಮಾಹಿತಿಯನ್ನು ಉಚಿತವಾಗಿ ಒಬ್ಬರಿಂದ ಒಬ್ಬರಿಗೆ ದಾಟಿಸುವ ಕಾರ್ಯ ಇವುಗಳದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bullet Train: ಮುಂಬೈ-ಅಹಮದಾಬಾದ್ ಹೈಸ್ಪೀಡ್ ಕಾರಿಡಾರ್ ವಿದ್ಯುದ್ದೀಕರಣ ಕಾರ್ಯ ಶುರು
The Shoolin Group: ಮಂಗಳೂರಿನ ಹೊಸ ಪ್ರೀಮಿಯಂ ಹೋಟೆಲ್ ಶೂಲಿನ್ ಕಂಫರ್ಟ್ಸ್ ಉದ್ಘಾಟನೆ
Share Market: ಷೇರುಪೇಟೆ ಸೂಚ್ಯಂಕ 300 ಅಂಕ ಜಿಗಿತ: ಲಾಭಗಳಿಸಿದ ಷೇರು ಯಾವುದು?
Meta Lay off: ಟೆಕ್ ದೈತ್ಯ ಮೆಟಾ ಸಂಸ್ಥೆಯಿಂದ 3,600 ಉದ್ಯೋಗಿಗಳ ವಜಾ: ಜುಗರ್ ಬರ್ಗ್
Stock Market: ರೂಪಾಯಿ ಮೌಲ್ಯ ಕುಸಿತದ ಪರಿಣಾಮ-ಷೇರುಪೇಟೆ ಸೂಚ್ಯಂಕ 1,049 ಅಂಕ ಕುಸಿತ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.