ಕೋವಿಡ್ 19: ಹಿಮ್ಮೆಟ್ಟಿಸಿದ ಶತಾಯುಷಿ ಮಹಿಳೆ
Team Udayavani, Aug 2, 2020, 6:52 AM IST
ಚಿತ್ರದುರ್ಗ: ನಗರದ 110 ವರ್ಷ ಪ್ರಾಯದ ಅಜ್ಜಿ ಹಾಗೂ ಆಕೆಯ 13 ತಿಂಗಳ ಮರಿ ಮೊಮ್ಮಗಳು ಕೋವಿಡ್ 19 ಸೋಂಕು ಗೆಲ್ಲುವ ಮೂಲಕ ರೋಗಿಗಳಲ್ಲಿ ಹೊಸ ಆತ್ಮವಿಶ್ವಾಸ ಮೂಡಿಸಿದ್ದಾರೆ.
ಕೋವಿಡ್ 19 ಹಿರಿಯರಿಗೆ ಮತ್ತು ಮಕ್ಕಳಿಗೆ ಹೆಚ್ಚು ಅಪಾಯ ಎಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ 60 ವರ್ಷ ದಾಟಿದ ಅನೇಕರು ಇದಕ್ಕೆ ಬಲಿಯಾಗಿದ್ದಾರೆ.
“ಜೀವನದಲ್ಲಿ ಯಾವುದಕ್ಕೂ ಹೆದರಿದವಳಲ್ಲ. ಹಾಗಾಗಿ ಕೋವಿಡ್ 19 ಸೋಂಕಿಗೂ ಭಯಪಟ್ಟಿಲ್ಲ’ ಎನ್ನುವ ಸಿದ್ಧಮ್ಮ ಚಿತ್ರದುರ್ಗದ ಕೋವಿಡ್ ಆಸ್ಪತ್ರೆಯಿಂದ ಶನಿವಾರ ಬಿಡುಗಡೆಯಾಗಿದ್ದಾರೆ.
ಪ್ರಕರಣದ ವಿವರ
ನಗರದ ಜಿಲ್ಲಾಸ್ಪತ್ರೆ ಎದುರಿನಲ್ಲಿರುವ ಪೊಲೀಸ್ ಕ್ವಾಟ್ರಸ್‌ನ ಮೊಮ್ಮಗನ ಮನೆಯಲ್ಲಿದ್ದ ಅಜ್ಜಿ ಸಿದ್ಧಮ್ಮ, 13 ತಿಂಗಳ ಮರಿ ಮೊಮ್ಮಗಳು, ಇಬ್ಬರು ಸೊಸೆಯಂದಿರು ಸೇರಿ ನಾಲ್ವರಿಗೆ ಜು. 27ರಂದು ಕೋವಿಡ್ 19 ದೃಢಪಟ್ಟಿತ್ತು. ಜು. 28ರಂದು ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ ಐದು ದಿನಗಳ ಚಿಕಿತ್ಸೆಯ ಬಳಿಕ ಅಜ್ಜಿ ಹಾಗೂ ಮಗು ಡಿಸ್ಚಾರ್ಜ್ ಆಗಿದ್ದಾರೆ.
ಆಸ್ಪತ್ರೆಯಿಂದ ನಗುಮೊಗದೊಂದಿಗೆ ಹೊರ ಬಂದ ಅಜ್ಜಿಯು ಮೊಮ್ಮಕ್ಕಳ ಆರೋಗ್ಯ ವಿಚಾರಿಸಿದರು. ಈ ವೇಳೆ ಎದುರಾದ ಮಾಧ್ಯಮದವರು ಮಾತನಾಡಿಸಿದಾಗ, “ನಾನು ಆರೋಗ್ಯವಾಗಿದ್ದೇನೆ. ನನಗೆ ಏನೂ ಆಗಿರಲಿಲ್ಲ. ಆಸ್ಪತ್ರೆ ಚೆನ್ನಾಗಿದೇರಿ. ಊಟಕ್ಕೆ ಗಂಜಿ ಕೊಟ್ರಾ. ನನಗೆ ಗಟ್ಟಿ ಪದಾರ್ಥ ಸೇರಲ್ಲ’ ಎಂದು ನೆನಪಿಗೆ ಬಂದಷ್ಟನ್ನು ಹೇಳಿಕೊಂಡರು.
ಆರೋಗ್ಯವಂತೆ
ಅಜ್ಜಿಗೆ ಬಿಪಿ, ಶುಗರ್ ಯಾವುದೂ ಇಲ್ಲ. ಚೆನ್ನಾಗಿದ್ದಾರೆ. ಮುದ್ದೆ ಇಷ್ಟಪಡುತ್ತಾರೆ. 110 ವರ್ಷದಲ್ಲೂ ಅವರ ಕೆಲಸಗಳನ್ನು ಅವರೇ ಮಾಡಿಕೊಳ್ಳುತ್ತಾರೆ, ಓಡಾಡುತ್ತಾರೆ. ಕೋವಿಡ್ 19 ಅವರನ್ನು ಧೃತಿಗೆಡಿಸಿಲ್ಲ ಎನ್ನುತ್ತಾರೆ ಮನೆಯವರು.
ನಮ್ಮ ಆಸ್ಪತ್ರೆಯಲ್ಲಿ ಈ ಹಿಂದೆ ಹಿರಿಯೂರಿನ 97 ವರ್ಷದ ವೃದ್ಧೆ, ಹೊಸದುರ್ಗದ 96 ವರ್ಷದ ವೃದ್ಧೆಗೆ ಚಿಕಿತ್ಸೆ ನೀಡಲಾಗಿತ್ತು. ಅವರಿಬ್ಬರೂ ಗುಣಮುಖರಾಗಿದ್ದರು. ಈಗ 110 ವರ್ಷದ ಅಜ್ಜಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ 110 ವರ್ಷದ ವೃದ್ಧೆ ಚೇತರಿಸಿಕೊಂಡಿದ್ದು ಇದೇ ಮೊದಲ ಪ್ರಕರಣ ಇರಬಹುದು. ಇಂಥವರನ್ನು ನೋಡಿದಾಗ ಚಿಕಿತ್ಸೆ ನೀಡಲು ಉತ್ಸಾಹ ಹೆಚ್ಚಾಗುತ್ತದೆ.
– ಡಾ| ಎಚ್.ಜೆ. ಬಸವರಾಜಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Talk Fight: ಬಿ.ಎಸ್.ಯಡಿಯೂರಪ್ಪ ಬಗ್ಗೆ ಹಗುರ ಮಾತು ಸಲ್ಲ: ಬಿ.ವೈ.ವಿಜಯೇಂದ್ರ ಎಚ್ಚರಿಕೆ
Waqf Property: ಸಚಿವ ಜಮೀರ್ ಅಹ್ಮದ್‌ರನ್ನು ಗಡೀಪಾರು ಮಾಡಿ: ಬಿ.ವೈ.ವಿಜಯೇಂದ್ರ
ಬಿಜೆಪಿಯವರಿಗೆ ಕಾಳಜಿಯಿದ್ದರೆ ಕೇಂದ್ರದಿಂದ ಬೆಳೆ ಪರಿಹಾರ ಹೆಚ್ಚಿಸಲಿ: ಕೃಷ್ಣ ಬೈರೇಗೌಡ
Rain: ಚಿತ್ರದುರ್ಗದಲ್ಲಿ ತಡರಾತ್ರಿ ವರುಣನ ಅಬ್ಬರ… ಕೆರೆಯಂತಾದ ನಾಯಕನಹಟ್ಟಿ ಪೊಲೀಸ್ ಠಾಣೆ
ByPolls; ಕಾಂಗ್ರೆಸ್ ಸಂಪರ್ಕದಲ್ಲಿ ಯೋಗೇಶ್ವರ ವಿಚಾರ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
IPL Mega Auction: ನ.24 ಮತ್ತು 25 ಜೆಡ್ಡಾದಲ್ಲಿ ಐಪಿಎಲ್ ಹರಾಜು
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.