ಕರ್ನಾಟಕದ ವಿಜ್ಞಾನಿಯಿಂದ ಮಾಸ್ಕ್ ಸ್ಯಾನಿಟೈಸ್ ತಂತ್ರಜ್ಞಾನ
Team Udayavani, May 5, 2020, 5:34 PM IST
ವಾಷಿಂಗ್ಟನ್: ಆರೋಗ್ಯ ಸಿಬ್ಬಂದಿ ಹೆಚ್ಚು ಬಳಸುವ ಎನ್- 95 ಮಾಸ್ಕ್ ಅನ್ನು ಸ್ಯಾನಿಟೈಸ್ ಮಾಡುವುದು ನಿಜಕ್ಕೂ ಸವಾಲು.
ಎನ್- 95 ಮಾಸ್ಕ್ ಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಇದರ ಮರು ಬಳಕೆಯ ಸರಳವಿಧಾನವೊಂದನ್ನು ಬೆಂಗಳೂರು ಮೂಲದ, ಹಾರ್ವರ್ಡ್ ವಿವಿಯ ಸಂಶೋಧನಾ ವಿದ್ಯಾರ್ಥಿ ತನುಷ್ ಜಗದೀಶ್ ಕಂಡುಹಿಡಿದಿದ್ದಾರೆ.
ತನುಷ್ ನಡೆಸಿದ ಪ್ರಯೋಗದಲ್ಲಿ, ಕೋವಿಡ್ ವೈರಸ್ ನ ಸಮೀಪವರ್ತಿ ಎನಿಸಿಕೊಂಡ ‘ಎಂಎಸ್ 2’ ವೈರಸ್ ಅನ್ನು ಬಳಸಲಾಗಿತ್ತು. ಈ ವೈರಾಣುಗಳನ್ನು ಮಾಸ್ಕ್ ಮೇಲೆ ಹಬ್ಬಿಸಲಾಯಿತು. ನಂತರ ನೀರು ತುಂಬಿದ ಬೌಲ್‌ಗೆ, ಬಲೆಯನ್ನು ಮುಚ್ಚಿ, ಅದರ ಮೇಲ್ಭಾಗದಲ್ಲಿ ವೈರಾಣುಯುಕ್ತ ಮಾಸ್ಕ್ ಇಟ್ಟು, 3 ನಿಮಿಷ ಅದನ್ನು ಮೈಕ್ರೋವೇವ್ ಮಾಡಲಾಯಿತು.
ಬಳಿಕ ಮಾಸ್ಕ್ ನ ಮೇಲೆ ಇ- ಕೊಲಿ ಎನ್ನುವ ವಿಜ್ಞಾನಿಗಳ ಪ್ರಯೋಗ ಸ್ನೇಹಿ ಬ್ಯಾಕ್ಟೀರಿಯಾಗಳನ್ನು ಸಿಂಪಡಿಸಲಾಯಿತು. ವೈರಾಣುಗಳು ಜೀವಂತವಿದ್ದರೆ, ಇ- ಕೊಲಿ ಬ್ಯಾಕ್ಟೀರಿಯಾ ಸಂಪರ್ಕ ಬೆಸೆದಾಗ, ಅವು ಸಣ್ಣ ರಂಧ್ರ ರೂಪದ ರಚನೆಗಳನ್ನು ಸೃಷ್ಟಿಸುತ್ತವೆ.
ಅಂಥ ರಚನೆಗಳು ಕಾಣಿಸದೆ ಇದ್ದರೆ, ಮಾಸ್ಕ್ ವೈರಸ್‌ರಹಿತವಾಗಿದೆ ಎಂದರ್ಥ. ‘3 ನಿಮಿಷದ ಹಬೆಗೆ ಬಹುತೇಕ ವೈರಾಣುಗಳು ಸತ್ತುಹೋಗಿರುತ್ತವೆ. ಭಾರತದಂಥ ದೇಶಗಳಲ್ಲಿ ಎನ್-95 ಮಾಸ್ಕ್ ಗಳು ಕೊರತೆ ಇರುವುದರಿಂದ ಈ ವಿಧಾನ ಹೆಚ್ಚು ಪ್ರಯೋಜನ ನೀಡಲಿದೆ’ ಎನ್ನುತ್ತಾರೆ, ತನುಷ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.