ತಾಂಜೇನಿಯಾ ಕೋವಿಡ್ ಮುಕ್ತ
Team Udayavani, Jun 10, 2020, 1:10 PM IST
ದೊಡೊಮಾ: ತಾಂಜೇನಿಯಾದ ರಾಜಧಾನಿಯಲ್ಲಿ ಕೋವಿಡ್‌ನಿಂದ ಸುರಕ್ಷಿತವಾಗಿರಲು ಕೈ ತೊಳೆಯುವ ಪ್ರದೇಶ
ದೊಡೊಮಾ: ಕೋವಿಡ್‌ನಿಂದ ಹಲವು ರಾಷ್ಟ್ರಗಳು ಸಂಕಷ್ಟ ಪಡುತ್ತಿರುವಂತೆ, ಬೆರಳೆಣಿಕೆಯ ರಾಷ್ಟ್ರಗಳು ಕೋವಿಡ್‌ನಿಂದ ಮುಕ್ತ ಎಂದು ಘೋಷಿಸಿವೆ. ಅಧ್ಯಕ್ಷ ಜಾನ್ ಮೊಗುಫುಲಿ ಅವರು ದೇಶ ಕೋವಿಡ್‌ನಿಂದ ಮುಕ್ತವಾಗಿದೆ ಎಂದು ಘೋಷಿಸಿದ್ದಾರೆ. ಇದು ಜನರ ಪ್ರಾರ್ಥನೆಯಿಂದಾಗಿ ನೆರವೇರಿದೆ ಎಂದು ಹೇಳಿದ್ದಾರೆ. ಇತ್ತ ತಾಂಜೇನಿಯಾ ಸರಕಾರದ ಧೋರಣೆಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತೀವ್ರ ಆತಂಕ ವ್ಯಕ್ತಪಡಿಸಿದೆ. ಸರಕಾರ ಹಲವು ದಿನಗಳಿಂದ ಸೋಂಕಿತರ ಅಂಕಿ ಅಂಶಗಳ ಪ್ರಕಟನೆಯನ್ನೇ ನಿಲ್ಲಿಸಿದ್ದು, ಅಪಾಯಕಾರಿ ಎಂದಿದೆ.
ಎ.29ರಂದು ಅಲ್ಲಿನ ಸರಕಾರ ಅಂಕಿ ಅಂಶಗಳನ್ನು ಪ್ರಕಟಿಸಿದಾಗ ಒಟ್ಟು 509 ಪ್ರಕರಣಗಳು ಇದ್ದುದಾಗಿ ಮತ್ತು 21 ಮಂದಿ ಮೃತಪಟ್ಟಿದ್ದಾಗಿ ಹೇಳಲಾಗಿತ್ತು. ಅಲ್ಲದೇ ಅಧ್ಯಕ್ಷರು ಕಳೆದ ವಾರ ನಾಲ್ವರು ರೋಗಿಗಳು ದಾರ್ ಇ ಸಲಾಮ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿದ್ದರು. ಕಳೆದ ತಿಂಗಳು ತಾಂಜೇನಿಯಾ ದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಎಚ್ಚರಿಕೆಯ ಸಂದೇಶವೊಂದನ್ನು ಹೊರಡಿಸಿದ್ದು, ದಾರ್ ಇ ಸಲಾಮ್‌ನ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ತುಂಬಿದ್ದು, ನಗರದ ಸೋಂಕು ಪೀಡಿತರ ಸಂಖ್ಯೆ ಸರ್ವಾಧಿಕ ಮಟ್ಟದಲ್ಲಿರಬಹುದು ಎಂದು ಹೇಳಿತ್ತು. ಆದರೆ ಅಧ್ಯಕ್ಷರು ಇದಕ್ಕೆ ವ್ಯತಿರಿಕ್ತವಾಗಿ ದೇಶದ ಜನರು ಚರ್ಚ್, ಮಸೀದಿಗೆ ತೆರಳಿ ಪ್ರಾರ್ಥಿಸಿದ್ದರಿಂದ ವೈರಸ್ ಸಂಪೂರ್ಣವಾಗಿ ನಾಶವಾಗಿದೆ, ದೇಶದ ಆರೋಗ್ಯ ವಲಯದ ಸ್ಥಿತಿ ಸುಧಾರಣೆಯಾಗಿದೆ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.