ಥೈಲೆಂಡ್ ಯಥಾಸ್ಥಿತಿಗೆ: ಶಾಲೆ-ಕಾಲೇಜು ಶುರು
ಶಾಲೆಗಳಲ್ಲಿ ಎಲ್ಲ ರೀತಿಯ ಸುರಕ್ಷತೆ ಕ್ರಮ ಕೈಗೊಳ್ಳಲಾಗಿದೆ
Team Udayavani, Jul 6, 2020, 2:30 PM IST
ಬ್ಯಾಂಕಾಕ್: ಇಲ್ಲಿನ ಶಾಲೆಯೊಂದರಲ್ಲಿ ಮಕ್ಕಳ ಊಟದ ಟೇಬಲ್ ಮಧ್ಯೆ ಸಾಮಾಜಿಕ ಅಂತರಕ್ಕಾಗಿ ವ್ಯವಸ್ಥೆ ಮಾಡಲಾಗಿದೆ.
ಬ್ಯಾಂಕಾಕ್ : ಕೋವಿಡ್ ವೈರಸ್‌ನಿಂದಾಗಿ ಶೈಕ್ಷಣಿಕ ವಲಯದ ಮೇಲೆ ಗಂಭೀರ ಪರಿಣಾಮವಾಗಿದ್ದು, ಯುಸ್‌ಎನ ಕೆಲ ರಾಜ್ಯಗಳು ಸೇರಿದಂತೆ ಕೆಲವೊಂದು ದೇಶಗಳು ಶೈಕ್ಷಣಿಕ ಸಂಸ್ಥೆಗಳ ಪುನರಾರಂಭಕ್ಕೂ ಮುಂದಾಗಿವೆ. ಇದೀಗ ಥೈಲ್ಯಾಂಡ್ ಕೂಡ ಶಾಲಾ-ಕಾಲೇಜುಗಳನ್ನು ತೆರೆದಿದ್ದು, ಸೋಂಕು ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ವ್ಯವಸ್ಥೆ ಮಾಡಿದೆ ಎಂದು ಬ್ಯಾಂಕಾಕ್ ಪೋಸ್ಟ್ ವರದಿ ಮಾಡಿದೆ.
ಸಮರೋಪಾದಿಯಲ್ಲಿ ಸಿದ್ಧತೆ
ಕಳೆದ ಮೂರೂವರೆ ತಿಂಗಳುಗಳಿಂದ ಶಾಲೆಯತ್ತ ಬಂದಿರದ ಥಾಯ್ಲೆಂಡ್‌ನ ಶಾಲಾ ಮಕ್ಕಳು ಇದೀಗ ನಿಧಾನವಾಗಿ ಮರಳಿ ಶಾಲೆಗೆ ಬರುತ್ತಿದ್ದು, ಮಕ್ಕಳಿಗೆ ಸೋಂಕು ಹರಡದಂತೆ ತಡೆಯಲು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಥಾಯ್ಲೆಂಡ್ ಶಾಲೆಗಳು ಸಮರೋಪಾದಿಯಲ್ಲಿ ಸಿದ್ಧತೆ ಮಾಡಿಕೊಂಡಿವೆ.
ಮಕ್ಕಳಿಗೆ ಕ್ವಾರಂಟೈನ್
ಶಾಲೆ ತೆರೆಯುವಿಕೆ ಹಿನ್ನೆಲೆಯಲ್ಲಿಯೇ ಬ್ಯಾಂಕಾಕ್ ನಗರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶಾಮ್ಕಾಕ್ ತರಗತಿ ಪ್ರಾರಂಭಕ್ಕೂ ಮುನ್ನ ಅಗತ್ಯ ಕ್ರಮಗಳನ್ನು ಪಾಲಿಸಲು ಸೂಚಿಸಿದ್ದು, ಸುಮಾರು 5 ಸಾವಿರ ವಿದ್ಯಾರ್ಥಿಗಳಿಗೆ ಹೋಮ್ ಕ್ವಾರಂಟೈನ್‌ಗೆ ಒಳಗಾಗುವಂತೆ ಆದೇಶ ಹೊರಡಿಸಿತ್ತು.
ಪೋಷಕರಿಗೆ ಮಾಹಿತಿ
ಪ್ರತಿನಿತ್ಯ ವಿದ್ಯಾರ್ಥಿಗಳ ಆರೋಗ್ಯ ತಪಸಾಣೆ ಮಾಡಲು ಶಿಕ್ಷಣ ಸಂಸ್ಥೆ ನಿರ್ಧರಿಸಿದ್ದು, ಪ್ರವೇಶದ್ವಾರದಲ್ಲಿಯೇ ವಿದ್ಯಾರ್ಥಿಗಳ ಥಾರ್ಮಲ್ ಸ್ಕ್ಯಾನಿಂಗ್ ನಡೆಸಲಾಗುತ್ತಿದೆ. ಅಲ್ಲದೇ ವಿದ್ಯಾರ್ಥಿಗಳ ದೇಹ ತಾಪಮಾನ ಸೇರಿದಂತೆ ಆರೋಗ್ಯ ವರದಿಯನ್ನು ಸ್ವಯಂಚಾಲಿತವಾಗಿ ಪೋಷಕರಿಗೆ
ಸಂದೇಶವನ್ನು ಕಳುಹಿಸುವ ವ್ಯವಸ್ಥೆ ಕೂಡ ಮಾಡಲಾಗಿದೆ.
ನಿಯಮ ಪಾಲನೆಗಾಗಿ ವಿಭಿನ್ನ ಮಾರ್ಗ
ವಿದ್ಯಾರ್ಥಿಗಳು ಶಾಲೆಗೆ ಬಂದ ನಂತರ ಸ್ವತ: ಶಿಕ್ಷಕರು ಮಕ್ಕಳಿಗೆ ಮಾಸ್ಕ್ ನೀಡಲಿದ್ದು, ಕಡ್ಡಾಯವಾಗಿ ಅವುಗಳನ್ನು ಧರಿಸುವಂತೆ ನಿಯಮ ಮಾಡಲಾಗಿದೆ. ತರಗತಿಗಳು ಹಾಗೂ ಮಧ್ಯಾಹ್ನದ ಊಟದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುಲು ಒಂದೊಂದು ಬೆಂಚ್ ಗೂ ಬಾಕ್ಸ್‌ಗಳನ್ನು ಮಾಡಲಾಗಿದ್ದು, ಊಟದ ವೇಳೆಯೂ ಪ್ರತ್ಯೇಕ ಆಸನ ವ್ಯವಸ್ಥೆ ಮಾಡುವ ವಮೂಲಕ ಸಾಮಾಜಿಕ ಅಂತರ ನಿಯಮವನ್ನು ಕಾಯ್ದುಕೊಳ್ಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
MRPL ನಲ್ಲಿ ಉದ್ಯೋಗ ಆಮಿಷ: ಯುವಕನಿಗೆ 1 ಲಕ್ಷ ರೂ.ವಂಚನೆ
Karkala; ಕೋರ್ಟ್‌ಗೆ ಹಾಜರಾದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
Miracle: ಗುಳಿ ಗುಳಿ ಶಂಕರ ಎಂಬ ಮಾಂತ್ರಿಕ ಕೊಳ… ಇಲ್ಲಿದೆ ಹಲವು ಚಮತ್ಕಾರಿ ವಿಚಾರಗಳು
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.