ದ್ವಿತೀಯ ಮಹಾ ಯುದ್ಧದ ಬಳಿಕದ ಅತೀ ದೊಡ್ಡ ಸಂಕಷ್ಟ
Team Udayavani, Apr 2, 2020, 12:52 PM IST
ನ್ಯೂಯಾರ್ಕ್: ಜಗತ್ತನ್ನು ಕಾಡುತ್ತಿರುವ ಕೋವಿಡ್ 19 ವೈರಸ್ ಎರಡನೆಯ ಮಹಾಯುದ್ಧದ ಅನಂತರ ಜಗತ್ತಿಗೆ ದೊಡ್ಡ ಸವಾಲಾಗಿದೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಎಚ್ಚರಿಸಿದ್ದಾರೆ. ಇದು ಮುಂದಿನ ದಿನಗಳಲ್ಲಿ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂದರು.
ಸಾವಿನ ಸಂಖ್ಯೆ 42,000 ಸಾವಿರಕ್ಕೂ ಮಿಕ್ಕಿದ್ದು ಜಗತ್ತನ್ನು ಗಾಬರಿಯನ್ನಾಗಿಸಿದೆ. ಅಮೆರಿಕದಲ್ಲಿ ಶೇ. 75ರಷ್ಟು ಮಂದಿ ಈಗ ಲಾಕ್‌ಡೌನ್ ಅಡಿಯಲ್ಲಿದ್ದಾರೆ ಎಂದ ಅವರು, ವಿಶ್ವಸಂಸ್ಥೆ ಸ್ಥಾಪನೆಯಾದ ಬಳಿಕ ಜಗತ್ತು ಇಂತಹ ಸಮಸ್ಯೆಯನ್ನು ಕಂಡಿರಲಿಲ್ಲ. ಎರಡನೇ ವಿಶ್ವ ಯುದ್ಧದ ಬಳಿಕ ಜಗತ್ತನ್ನು ಒಟ್ಟುಗೂಡಿಸಲು ವಿಶ್ವಸಂಸ್ಥೆಯನ್ನು ಹುಟ್ಟುಹಾಕಲಾಯಿತು. ಇದು ಅಂತಾರಾಷ್ಟ್ರೀಯ ಶಾಂತಿಯನ್ನು ಕಾಯ್ದುಕೊಳ್ಳುತ್ತಾ ಬಂದಿತ್ತು. ತೃತೀಯ ಮಹಾಯುದ್ಧವನ್ನು ತಡೆಗಟ್ಟುವುದು ಇದರ ಪ್ರಮುಖ ಧ್ಯೇಯವಾಗಿತ್ತು ಎಂದರು.
25 ಮಿಲಿಯ ಉದ್ಯೋಗ ನಷ್ಟ : ವಿಶ್ವಸಂಸ್ಥೆಯ ವರದಿಯಂತೆ ಕೋವಿಡ್ 19 ವೈರಸ್ ಬಳಿಕ ಜಗತ್ತು ಸ್ತಬ್ಧವಾಗಿದ್ದು, ಯಾವುದೇ ಉತ್ಪಾದನಾ ಚಟುವಟಿಕೆಗಳು ನಡೆಯುತ್ತಿಲ್ಲ. ಇದರಿಂದ ವಿತ್ತೀಯ ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಕುರಿತಂತೆ ವಿಶ್ವಸಂಸ್ಥೆ ವರದಿ ತಯಾರಿಸಿದ್ದು, ಅಂದಾಜು 25 ಮಿಲಿಯ ಉದ್ಯೋಗ ನಷ್ಟ ವಾಗಲಿದೆ. ಎಫ್‌ಡಿಐ ಅಥವಾ ವಿದೇಶಿ ನೇರ ಹೂಡಿಕೆ ಪ್ರಮಾಣದಲ್ಲಿ ಶೇ. 40ರಷ್ಟು ಕುಂಠಿತವಾಗಲಿದೆ ಎಂದಿದ್ದಾರೆ. ಇವೆಲ್ಲವೂ ಭಾರತಕ್ಕೂ ಅನ್ವಯವಾಗಲಿದೆ. ದೇಶದಲ್ಲಿ ಮೊದಲೇ ನಿರುದ್ಯೋಗ ಪ್ರಮಾಣ ಹೆಚ್ಚು ಇದ್ದು, ಮತ್ತಷ್ಟು ಅಪಾಯ ಎದುರಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಏಳು ದಿನಗಳಲ್ಲಿ ಸಂಖ್ಯೆಗಳು ದ್ವಿಗುಣಗೊಳ್ಳುವುದರೊಂದಿಗೆ ಜಗತ್ತಿನಾದ್ಯಂತ ಕೋವಿಡ್ 19 ಪ್ರಕರಣ ಆತಂಕಕಾರಿಯಾಗಿ ಬದಲಾಗುತ್ತಿದೆ. ಅಲ್ಲದೆ, ಈ ಅವಧಿಯಲ್ಲಿ ಸಾವಿನ ಸಂಖ್ಯೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಮಾರ್ಚ್ 24ರಲ್ಲಿ ಜಾಗತಿಕವಾಗಿ ಪ್ರಕರಣಗಳ ಸಂಖ್ಯೆ 4 ಲಕ್ಷ ಇದ್ದರೆ ಅದರ ಬಳಿಕ 4 ಲಕ್ಷ ಹೆಚ್ಚಾಗಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕನ್ನರು ಮುಂದಿನ ಎರಡು ವಾರಗಳು ಕಠಿಣವಾಗಿರಲಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Chennai: ನಟಿ ಕಸ್ತೂರಿ ಶಂಕರ್‌ಗೆ ನ.29ರ ವರೆಗೆ ನ್ಯಾಯಾಂಗ ಬಂಧನ
Malpe: ನಿಲ್ಲಿಸಲಾಗಿದ್ದ ಬುಲೆಟ್ ಕಳವು
Maharashtra: ಬಿಜೆಪಿ ನಾಯಕಿ ನವನೀತ್ ರಾಣಾ, ಬೆಂಬಲಿಗರ ಮೇಲೆ ಹಲ್ಲೆ, ಎಫ್‌ಐಆರ್ ದಾಖಲು
Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Kharge: ನಾವು ಸಂವಿಧಾನ ರಕ್ಷಿಸದಿದ್ದರೆ ಮೋದಿ ಚಹಾ ಮಾರಿಕೊಂಡೇ ಇರಬೇಕಿರುತ್ತಿತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.