ವೈರಸ್ ತಡೆಯುವುದೇ ಸವಾಲು ; ಈ ಬಾರಿ ಹಜ್ ಯಾತ್ರೆ ಇಲ್ಲ?
Team Udayavani, Jun 17, 2020, 3:09 PM IST
ಮೆಕ್ಕಾ: ಪವಿತ್ರ ಕಾಬಾ ಶಿಲೆಯಿರುವ ಮಸೀದಿ ಪ್ರದೇಶದಲ್ಲಿ ಈಗ ಯಾತ್ರಾರ್ಥಿಗಳಿಲ್ಲದೆ ಸಿಬಂದಿ ಮಾತ್ರ ಕಂಡುಬರುತ್ತಿದ್ದಾರೆ.
ರಿಯಾಧ್: ಕೋವಿಡ್ ಪ್ರಕರಣಗಳಿಗೆ ಯಾವುದೇ ಲಗಾಮು ಹಾಕಲು ಸಾಧ್ಯವಾಗದೇ ಇರುವುದರಿಂದ ಮತ್ತು ವಿಶ್ವಾದ್ಯಂತ ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಈ ಬಾರಿ ಹಜ್ ಯಾತ್ರೆಯನ್ನು ನಡೆಸಲದೇ ಇರಲು ಸೌದಿ ಅರೇಬಿಯಾ ಚಿಂತನೆ ನಡೆಸಿದೆ.
ಒಂದು ವೇಳೆ ಹಜ್ ಯಾತ್ರೆ ರದ್ದುಗೊಂಡಿದ್ದೇ ಆದಲ್ಲಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹಜ್ ಯಾತ್ರೆ ನಡೆಯದ ವರ್ಷವಾಗಿ ದಾಖಲೆ ಪುಟಕ್ಕೆ ಸೇರ್ಪಡೆಯಾಗಲಿದೆ. ಜುಲೈ ಅನಂತರದ ತಿಂಗಳಿನಲ್ಲಾದರೂ ಹಜ್ ಯಾತ್ರೆ ನಡೆಸುವುದು ಸಾಧ್ಯವೇ ಎಂಬ ಬಗ್ಗೆ ಹೇಳುವಂತೆ ಮುಸ್ಲಿಂ ರಾಷ್ಟ್ರಗಳು ರಿಯಾಧ್ ಮೇಲೆ ಒತ್ತಡ ಹೇರುತ್ತಿವೆ. ಈ ಬಾರಿ ಹಜ್ ಯಾತ್ರೆಯನ್ನು ರದ್ದು ಪಡಿಸುವುದು ಆ ದೇಶಗಳಿಗೆ ಅಷ್ಟು ಸಮರ್ಪಕವಾಗಿ ಕಂಡಿಲ್ಲ ಎಂದು ಹೇಳಲಾಗಿದೆ. ಆದರೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸುವ ವೇಳೆ ಸಾಂಕ್ರಾಮಿಕ ಕಾಯಿಲೆ ಅಧ್ವಾನವನ್ನೇ ಸೃಷ್ಟಿಸಬಹುದು ಎಂಬ ಆತಂಕ ಸೌದಿ ಅರೇಬಿಯಾದ್ದಾಗಿದೆ. ಅಲ್ಲದೇ ಇದರಿಂದಾಗುವ ಆರ್ಥಿಕ ಹೊರೆ ಮತ್ತು ರಾಜಕೀಯ ಸಮಸ್ಯೆಗಳ ಬಗ್ಗೆ ಸೌದಿ ಅರೇಬಿಯಾ ಸ್ಪಷ್ಟವಾಗಿ ಇಳಿದುಕೊಂಡಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ ಎಂಬ ತೀರ್ಮಾನವನ್ನು ಮಾಡಿದೆ ಎನ್ನಲಾಗಿದೆ.
ಹಜ್ ಯಾತ್ರೆಯ ವೇಳೆ ಸುಮಾರು 25 ಲಕ್ಷ ಮಂದಿ ಆಗಮಿಸುತ್ತಾರೆ. ವರ್ಷವೂ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಅವರ ನಿರ್ವಹಣೆ ಸುಲಭವಾದ್ದೇನಲ್ಲ. ಶೀಘ್ರ ಈ ಕುರಿತ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇಡೀ ಯಾತ್ರೆ ರದ್ದು ಮಾಡುವುದು ಅಥವಾ ಅದನ್ನು ಆಯೋಜನೆ ಮಾಡುತ್ತೇವೆ ಎನ್ನುವುದೂ ಸಂದಿಗ್ಧದ ಪರಿಸ್ಥಿತಿ ಎಂದು ಅವರು ಹೇಳಿದ್ದಾರೆ. ಇತ್ತ ಅನೇಕ ರಾಷ್ಟ್ರಗಳು ಸೌದಿ ಅರೇಬಿಯಾದ ನಿರ್ಧಾರವನ್ನೂ ಎದುರು ನೋಡುತ್ತಿವೆ.
ಇತ್ತ ಅತಿ ಹೆಚ್ಚು ಮುಸ್ಲಿಮರನ್ನು ಹೊಂದಿರುವ ದೇಶವಾದ ಇಂಡೋನೇಷ್ಯಾ ಈ ಬಾರಿ ಯಾರನ್ನೂ ಯಾತ್ರೆಗೆ ತೆರಳಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರೂ, ಸೌದಿ ತನ್ನ ನಿರ್ಧಾರ ತಿಳಿಸಬೇಕು ಎಂಬ ನಿರೀಕ್ಷೆಯಲ್ಲಿದೆ. ಮಲೇಷ್ಯಾ, ಸೆನೆಗಲ್, ಟರ್ಕಿ, ಈಜಿಪ್ಟ್, ಲೆಬನಾನ್, ಬಲ್ಗೇರಿಯಾಗಳೂ ಇದೇ ನಿರೀಕ್ಷೆಯಲ್ಲಿವೆ. ಫ್ರಾನ್ಸ್ ಧರ್ಮ ಗುರುಗಳು ಮುಸ್ಲಿ ಮರು ಮುಂದಿನ ವರ್ಷದವರೆಗೆ ಯಾತ್ರೆ ಮುಂದೂಡಬೇಕು ಎಂಬ ಆಗ್ರಹ ವನ್ನು ಮಂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.