ಮದುವೆ ಸೀಸನ್‌ನಲ್ಲೇ ಕೋವಿಡ್ ತಂದ ಸಂಕಷ್ಟ
Team Udayavani, Jul 9, 2020, 11:23 AM IST
ರಮಲ್ಲಾ: ಇಲ್ಲಿನ ರಸ್ತೆಯೊಂದರಲ್ಲಿ ಸಂಚರಿಸುತ್ತಿರುವ ವಾಹನಗಳ ಪ್ರಯಾಣಿಕರ ಆರೋಗ್ಯ ಪರೀಕ್ಷೆ ಯನ್ನು ಮಾಡಲಾಗುತ್ತಿದೆ.
ರಮಲ್ಲಾ: ಕೋವಿಡ್‌ನಿಂದಾಗಿ ಎಷ್ಟೋ ಮದುವೆಗಳು ನಿಂತು ಹೋಗಿವೆ; ಹಲವಾರು ಮದುವೆಗಳು ಬಂಧುವರ್ಗಗಳ ಆಗಮನವೂ ಇಲ್ಲದೆ ನಡೆದಿದೆ. ಇದು ಭಾರತದ ಪರಿಸ್ಥಿತಿ ಮಾತ್ರವಲ್ಲ ಮಧ್ಯಪ್ರಾಚ್ಯದ ಯುದ್ಧಗ್ರಸ್ಥ ಪ್ಯಾಲೆಸ್ತೀನ್-ಇಸ್ರೇಲ್ ಮಧ್ಯದ ವೆಸ್ಟ್‌ಬ್ಯಾಂಕ್ ಪರಿಸ್ಥಿತಿಯೂ ಆಗಿದೆ. ವೆಸ್ಟ್‌ಬ್ಯಾಂಕ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 4000ಕ್ಕೆ ಏರಿಕೆಯಾಗಿದ್ದು, ಇದರಿಂದ ಮದುವೆಗಳಿಗೆ ಅಡ್ಡಿಯಾಗಿದೆ. ಅಲ್ಲೀಗ ಮದುವೆಗಳ ಸೀಸನ್. ಆದರೆ ಮದುವೆಗಳನ್ನು ಮಾಡಲಾಗದೆ ಜನರು ಚಿಂತೆಯಲ್ಲಿದ್ದಾರೆ. ಈವರೆಗೆ ಒಟ್ಟು 15 ಸಾವುಗಳು ಸಂಭವಿಸಿದ್ದು, ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಆತಂಕ ಹೆಚ್ಚಾಗಿದೆ.
ಪ್ಯಾಲೆಸ್ತೀನಿನ ಪ್ರಧಾನಿ ಮೊಹಮ್ಮದ್ ಶಾತೆಯ್ನಾ ಅವರು ಕ್ಯಾಬಿನೆಟ್ ಸಭೆಯಲ್ಲಿ ತಿಳಿಸಿದ ಪ್ರಕಾರ, ವೆಸ್ಟ್ ಬ್ಯಾಂಕ್‌ನ ಶೇ.82ರಷ್ಟು ಪ್ರಕರಣಗಳಿಗೆ ಕಾರಣ ಮದುವೆಗಳು ಮತ್ತು ಅಂತ್ಯಕ್ರಿಯೆಗಳು. ಇಲ್ಲಿ ಕಳೆದ ಮೂರು ತಿಂಗಳಿಂದ ಲಾಕ್‌ಡೌನ್ ಇದ್ದರೂ ಸೋಂಕು ಹರಡುತ್ತಲೇ ಇದೆ. ಆದ್ದರಿಂದ ಶುಕ್ರವಾರದಿಂದ ಇಲ್ಲಿ ಐದು ದಿನಗಳ ಕಠಿನ ಲಾಕ್‌ಡೌನ್‌ಗೆ ಪ್ಯಾಲೆಸ್ತೀನ್ ಸರಕಾರ ಮುಂದಾಗಿದೆ. ಪ್ಯಾಲೆಸ್ತೀನ್‌ನಲ್ಲಿ ಹೆಬ್ರಾನ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಶೇ.75ರಷ್ಟು ಪ್ರಕರಣಗಳು ಇದೇ ನಗರದಲ್ಲಿ ಕಂಡು ಬಂದಿವೆ. ಪ್ಯಾಲೆಸ್ತೀನಿನಲ್ಲಿ ಮದುವೆಗಳು ಎಂದರೆ ಸಾಮಾನ್ಯವಾಗಿ ಬೇಸಗೆಯಲ್ಲಿ ನಡೆಯುತ್ತವೆ. ಸಮುದಾಯದ ದೊಡ್ಡ ಕಾರ್ಯಕ್ರಮ ಇದಾಗಿದ್ದು, ನೂರಾರು ಮಂದಿ ಭಾಗಿಯಾಗುತ್ತಾರೆ. ಭೂರಿ ಭೋಜನ, ನೃತ್ಯ, ತಡರಾತ್ರಿಯವರೆಗೆ ಸಂಗೀತ ಇತ್ಯಾದಿಗಳು ಈ ಮದುವೆಗಳಲ್ಲಿ ಸಾಮಾನ್ಯ. ಮದುವೆಗಳು ಸಾಂಪ್ರದಾಯಿಕ ಕಾರ್ಯಕ್ರಮಗಳಾಗಿದ್ದರೂ, ಈ ಮೊದಲಿನಂತೆ ಬಂಧುವರ್ಗದ ಎಲ್ಲರನ್ನೂ ಸೇರಿಸಿ ಸಂಭ್ರಮ ಪಡುವುದು ಸಾಧ್ಯವಿಲ್ಲವಾಗಿದೆ. 23 ಲಕ್ಷ ಮಂದಿಗೆ ಇಲ್ಲಿ ಕೇವಲ 30 ವೆಂಟಿಲೇಟರ್‌ಗಳು ಲಭ್ಯವಿವೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಎಂದು ಇಲ್ಲಿನ ವ್ಯಕ್ತಿಯೊಬ್ಬರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
Kollywood: ಯೂಟ್ಯೂಬ್ ವಿಮರ್ಶೆ ಬ್ಯಾನ್ ಮಾಡಲು ತಮಿಳು ನಿರ್ಮಾಪಕರ ಸಂಘ ಆಗ್ರಹ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Panaji: ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.