ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಈ ಬಾರಿ ನಾಯಕರೇ ಇಲ್ಲ!


Team Udayavani, Jun 10, 2020, 2:25 PM IST

ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಈ ಬಾರಿ ನಾಯಕರೇ ಇಲ್ಲ!

ಸಾಂದರ್ಭಿಕ ಚಿತ್ರ

ಸೆ.22ರಂದು ಅಧಿವೇಶನ ನಡೆಯ ಬೇಕಿತ್ತು. ಈಗ ಎಲ್ಲ ದೇಶಗಳಲ್ಲೂ ಸೋಂಕಿನ ಭೀತಿ ಇರುವುದರಿಂದ ಸಭೆ ನಡೆಯುವುದೂ ಅನುಮಾನ.

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ 75 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿವಿಧ ದೇಶ ಗಳ ನಾಯಕರು ಭಾಗಿ ಯಾಗುವುದು ಅನುಮಾನ. ಕಾರಣ ಕೋವಿಡ್‌ ಭೀತಿ! ಸೆಪ್ಟಂಬರ್‌ನಲ್ಲಿ ನ್ಯೂಯಾರ್ಕಿನ ವಿಶ್ವಸಂಸ್ಥೆ ಕಟ್ಟದಲ್ಲಿ ಅಧಿವೇಶನ ನಡೆಯ ಬೇಕಿದ್ದು, ನಾಯಕರು ಭಾಗಿಯಾಗಲು ಸಾಧ್ಯವಾಗುವುದು ತೀವ್ರ ಅನುಮಾನವಾಗಿದೆ.

ಆದರೆ ಅಧಿವೇಶನ ಮುಂದಕ್ಕೆ ಹೋಗ ಲಿದೆಯೇ? ಅಥವಾ ಆನ್‌ಲೈನ್‌ ಮೂಲಕ ಅಧಿವೇಶನ ನಡೆಯಲಿದೆಯೇ ಎಂಬುದೂ ಸ್ಪಷ್ಟಗೊಂಡಿಲ್ಲ. ಒಂದು ದೇಶದ ನಾಯಕ ಆಗಮಿಸುವಾಗ ಅವರೊಂದಿಗೆ ಹಲವು ಮಂದಿಯ ನಿಯೋಗವೂ ಇರುತ್ತದೆ. ದೊಡ್ಡ ತಂಡಗಳು ಆಗಮಿಸುವ ವೇಳೆ ಸುರಕ್ಷತೆ ಪ್ರಶ್ನೆ ಎದುರಾಗಬಹುದು. ಆದ್ದರಿಂದ ವಿಶ್ವಸಂಸ್ಥೆ ಸಭೆ ನಡೆಯುವುದೇ ಅನುಮಾನವಾಗಿದೆ ಎಂದು ಸಾಮಾನ್ಯ ಸಭೆಯ ಅಧ್ಯಕ್ಷರಾಗಿರುವ ನೈಜೀರಿಯಾದ ತಿಜ್ಜಿನಿ ಮೊಹಮ್ಮದ್‌ ಬಂದೆ ಹೇಳಿದ್ದಾರೆ.

ಕೋವಿಡ್‌ ಭೀತಿ ಇಲ್ಲದೇ ಹೋಗಿದ್ದರೆ ಸೆ.22ರಂದು ಅಧಿವೇಶನ ನಡೆಯಬೇಕಿತ್ತು. ಈಗ ಎಲ್ಲ ದೇಶಗಳಲ್ಲೂ ಸೋಂಕಿನ ಭೀತಿ ಇರುವುದರಿಂದ ಸಭೆ ನಡೆಯುವುದೂ ಅನುಮಾನ, ನಾಯಕರು ಬರುವುದೂ ಇನ್ನೂ ಅನುಮಾನವಾಗಿದೆ. ಆದ್ದರಿಂದ ಸಾಮಾನ್ಯ ಸಭೆ ಕುರಿತಾಗಿ ಮುಂದೇನು ಮಾಡಬಹಬುದು? ಎಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ. ಇಂತಹದ್ದೊಂದು ಸಂದಿಗ್ಧ ಪರಿಸ್ಥಿತಿ ವಿಶ್ವಸಂಸ್ಥೆಯ ಇತಿಹಾಸದಲ್ಲಿ ಕಳೆದ 74 ವರ್ಷಗಳಲ್ಲಿ ಉದ್ಭವವಾಗಿಲ್ಲ ಎಂದು ಹೇಳ್ದಿರೆ.

ಮುಂದಿನ ನಡೆಗಳೇನು? ಸಭೆಯ ಬಗ್ಗೆ ಏನು ತೀರ್ಮಾನ ಕೈಗೊಳ್ಳಬಹುದು ಎಂಬುದರ ಬಗ್ಗೆ ಸದಸ್ಯ ರಾಷ್ಟ್ರಗಳೊಂದಿಗೆ ವಿಶ್ವಸಂಸ್ಥೆ ಕಾರ್ಯದರ್ಶಿ ಎರಡು ವಾರಗಳಲ್ಲಿ ಚರ್ಚೆ ನಡೆಸಿ ತೀರ್ಮಾನಿಸುವ ಸಾಧ್ಯತೆಯಿದೆ. ಕಳೆದ ತಿಂಗಳು ಈ ವಿಚಾರದಲ್ಲಿ ಬಂದೆ ಅವರಿಗೆ ಮು. ಕಾರ್ಯದರ್ಶಿ ಆ್ಯಂಟಾನಿಯೋ ಗುಟೆರರ್ಸ್‌ ಅವರು ಪತ್ರ ಬರೆದಿದ್ದು ಸಾಂಪ್ರದಾಯಿಕ ಸಭೆ ಬದಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಪತ್ರ ಬರೆದಿದ್ದರು. ವಿಶ್ವದ ನಾಯಕರ ಮುದ್ರಿತ ಧ್ವನಿ ಪ್ರಸಾರವನ್ನು ಮಾಡುವುದು, ಅಥವಾ ವೀಡಿಯೋ ಕಾನ್ಫರೆನ್ಸ್‌ ರೀತಿ ಕ್ರಮಕೈಗೊಳ್ಳುವುದು ಇತ್ಯಾದಿಗಳನ್ನು ಮಾಡಬಹುದು ಎಂದು ಸಲಹೆ ನೀಡಿದ್ದರು. ಅಲ್ಲದೇ ಆಯಾ ದೇಶದ ಮುಖ್ಯಸ್ಥರು ಸಭೆಗೆ ಆಗಮಿಸಿದರೂ ಅವರ ಒಬ್ಬ ಅಧಿಕಾರಿಗೆ ಸಭೆಯ ಹಾಲ್‌ನಲ್ಲಿ ಅನುಮತಿಸುವುದನ್ನು ಮಾಡಬಹುದು ಎಂದು ಹೇಳಿದ್ದರು.

ಸಾಮಾನ್ಯವಾಗಿ ಸಾಮಾನ್ಯ ಸಭೆಯಲ್ಲಿ ಕಲಾಪಗಳು ಒಂದು ವಾರಕ್ಕೂ ಹೆಚ್ಚು ಕಾಲ ನಡೆಯುತ್ತವೆ. ಸಾಮಾನ್ಯ ಸಭೆ ಹಾಲ್‌ನಲ್ಲಿ 193 ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ಮಾತನಾಡುತ್ತಾರೆ. ಕೋವಿಡ್‌ನಿಂದಾಗಿ ಜಗತ್ತು ಸಾಮಾನ್ಯ ಸ್ಥಿತಿಗೆ ಯಾವಾಗ ಮರಳುತ್ತದೆ ಎಂಬುದನ್ನು ಯಾರೂ ನಿರೀಕ್ಷೆ ಮಾಡಲಾಗದ ಸ್ಥಿತಿಯಲ್ಲಿದೆ. ಆದ್ದರಿಂದ ಸಭೆ ನಡೆಯುವುದೇ ಅನುಮಾನ. ದೊಡ್ಡ ಪ್ರಮಾಣದಲ್ಲಿ ಭದ್ರತಾ ಸಿಬಂದಿ, ಪರಿಚಾರಕರು, ನಿಯೋಗ, ವಿವಿಧ ಅಧಿಕಾರಿಗಳು ಈ ವೇಳೆ ನ್ಯೂಯಾರ್ಕ್‌ನಲ್ಲಿ ನೆರೆಯುವುದರಿಂದ ಸಭೆ ನಡೆಸುವುದೂ ಕಷ್ಟಕರವಾಗಿದೆ, ಹಾಗಂತ ವರ್ಷದ ಈ ಕಾರ್ಯಕ್ರಮವನ್ನು ತಪ್ಪಿಸಿಕೊಳ್ಳುವುದೂ ಅಷ್ಟು ಸುಲಭದ ಮಾತಲ್ಲ ಎಂಬ ಇಂಗಿತ ವಿಶ್ವಸಂಸ್ಥೆಯಿಂದ ವ್ಯಕ್ತವಾಗಿದೆ.  ನ್ಯೂಯಾರ್ಕ್‌ನಲ್ಲಿ 3 ಲಕ್ಷ ದಾಟಿದ ಕೇಸು: ಸದ್ಯ ನ್ಯೂಯಾರ್ಕ್‌ನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 3.78 ಲಕ್ಷದ ಗಡಿ ದಾಟಿದೆ. ಸುಮಾರು 24 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 67 ಸಾವಿರಕ್ಕೂ ಹೆಚ್ಚು ಮಂದಿ ಚೇತರಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

1-idpp

Actor; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಟಿ ಡಿಂಪಲ್‌ ಕಪಾಡಿಯಾ

1-kukke

Kukke Subrahmanya: ಕಿರುಷಷ್ಠಿ ರಥೋತ್ಸವ

1-mang

Mangaluru ಧರ್ಮಪ್ರಾಂತ;ವಾರ್ಷಿಕ ಪರಮ ಪವಿತ್ರ ಪ್ರಸಾದದ ಮೆರವಣಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.