ಕಾಸರಗೋಡು: ಮತ್ತೆ ಮೂವರಿಗೆ ಕೋವಿಡ್ 19 ವೈರಸ್ ಸೋಂಕು ದೃಢ

Team Udayavani, Apr 22, 2020, 6:12 AM IST

ಕಾಸರಗೋಡು: ಮತ್ತೆ ಮೂವರಿಗೆ ಕೋವಿಡ್ 19 ವೈರಸ್ ಸೋಂಕು ದೃಢ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರ ಮೂವರಿಗೆ ಕೋವಿಡ್ 19 ವೈರಸ್ ಸೋಂಕು ದೃಢಗೊಂಡಿದೆ. ಇದೇ ವೇಳೆ ನಾಲ್ಕು ಮಂದಿ ಕೋವಿಡ್ 19 ವೈರಸ್ ನಿಂದ ಗುಣಮುಖರಾಗಿದ್ದಾರೆ. ಸೋಂಕಿತರು ಚೆಂಗಳ ನಿವಾಸಿಯಾದ 48, 20 ಮತ್ತು ಮೊಗ್ರಾಲ್‌ಪುತ್ತೂರಿನ 43 ವರ್ಷ ಪ್ರಾಯದವರು.

ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 4,619 ಮಂದಿ ನಿಗಾದಲ್ಲಿದ್ದು, ಈ ಪೈಕಿ 4,567 ಮಂದಿ ಮನೆಗಳಲ್ಲೂ, 52 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. 3,256 ಸ್ಯಾಂಪಲ್‌ಗ‌ಳ ಪೈಕಿ 2,575 ಸ್ಯಾಂಪಲ್‌ ನೆಗೆಟಿವ್‌ ಬಂದಿವೆ. 392 ಸ್ಯಾಂಪಲ್‌ ವರದಿ ಲಭಿಸಲು ಬಾಕಿಯಿದೆ.

ಮಂಗಳವಾರ ಹೊಸದಾಗಿ 7 ಮಂದಿಯನ್ನು ಐಸೊಲೇಶನ್‌ ವಾರ್ಡ್‌ಗೆ ದಾಖಲಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 172 ಮಂದಿಗೆ ಸೋಂಕು ಬಾಧಿಸಿದ್ದು, 146 ಮಂದಿ ಗುಣಮುಖರಾಗಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ 26 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳ ರಾಜ್ಯದಲ್ಲಿ ಮಂಗಳವಾರ ಒಟ್ಟು 19 ಮಂದಿಗೆ ಸೋಂಕು ದೃಢಗೊಂಡಿದೆ. ಈ ಪೈಕಿ ಕಣ್ಣೂರು ಜಿಲ್ಲೆಯಲ್ಲಿ 10 ಮಂದಿಗೆ, ಪಾಲ್ಗಾಟ್‌ – 4, ಕಾಸರಗೋಡು-3, ಮಲಪ್ಪುರ ಮತ್ತು ಕೊಲ್ಲಂ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ ಸೋಂಕು ಬಾಧಿಸಿದೆ. ರಾಜ್ಯದಲ್ಲಿ ಒಟ್ಟು 16 ಮಂದಿ ಗುಣಮುಖರಾಗಿದ್ದಾರೆ.

ಕಣ್ಣೂರಿನಲ್ಲಿ 9 ಮಂದಿ ವಿದೇಶದಿಂದ ಬಂದವರು ಹಾಗೂ ಒಬ್ಬರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಪಾಲ್ಗಾಟ್‌, ಮಲಪ್ಪುರಂ ಮತ್ತು ಕೊಲ್ಲಂ ಜಿಲ್ಲೆಯಲ್ಲಿ ತಲಾ ಒಬ್ಬರು ತಮಿಳುನಾಡಿನಿಂದ ಬಂದವರು. ಕಾಸರಗೋಡು ಜಿಲ್ಲೆಯ ಮೂವರು ವಿದೇಶದಿಂದ ಬಂದವರು.

ಕೇರಳದಲ್ಲಿ ಈ ವರೆಗೆ ಒಟ್ಟು ಸೋಂಕು ಬಾಧಿತರ ಸಂಖ್ಯೆ 426. ಇದೀಗ ವಿವಿಧ ಆಸ್ಪತ್ರೆಗಳಲ್ಲಿ 117 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 36,667 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 36,335 ಮಂದಿ ಮನೆಗಳಲ್ಲೂ, 332 ಮಂದಿ ಆಸ್ಪತ್ರೆಗಳಲ್ಲೂ ನಿಗಾದಲ್ಲಿದ್ದಾರೆ. ಮಂಗಳವಾರ 102 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ತನಕ 20,252 ಸ್ಯಾಂಪಲ್‌ಗ‌ಳನ್ನು ಪರೀಕ್ಷೆ ಮಾಡಲಾಗಿದೆ. ಲಭ್ಯ 19,442 ಮಂದಿ ಸ್ಯಾಂಪಲ್‌ ನೆಗೆಟಿವ್‌ ಫಲಿತಾಂಶ ಬಂದಿದೆ.

ಕಣ್ಣೂರು ಜಿಲ್ಲೆಯಲ್ಲಿ ಹೆಚ್ಚು ಸೋಂಕಿತರು
ಮಂಗಳವಾರ ಕಣ್ಣೂರು ಜಿಲ್ಲೆಯಲ್ಲಿ 7 ಮಂದಿ, ಕಾಸರ ಗೋಡು-4, ಕಲ್ಲಿಕೋಟೆ- 4, ತಿರುವನಂತಪುರ-1 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಅತ್ಯಂತ ಹೆಚ್ಚು ಕೋವಿಡ್ 19 ವೈರಸ್ ಸೋಂಕಿತರು ಕಣ್ಣೂರು ಜಿಲ್ಲೆಯಲ್ಲಿದ್ದಾರೆ.

ಒಟ್ಟು 104 ಮಂದಿಗೆ ಸೋಂಕು ಹರಡಿದ್ದು, ಒಂದು ಮನೆಯ 10 ಮಂದಿಗೆ ಸಂಪರ್ಕದ ಮೂಲಕ ಸೋಂಕು ಬಾಧಿಸಿದೆ. ಈ ಹಿನ್ನೆಲೆಯಲ್ಲಿ ಕಣ್ಣೂರು ಜಿಲ್ಲೆಯಲ್ಲಿ ಇನ್ನಷ್ಟು ತಪಾಸಣೆ ಬಿಗಿಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದ್ದಾರೆ.

ವರ್ಕಾಡಿ ಯುವಕ ದುಬಾೖಯಲ್ಲಿ ಸಾವು
ಕೋವಿಡ್ 19 ವೈರಸ್ ಸೋಂಕಿನಿಂದ ವರ್ಕಾಡಿ ಧರ್ಮನಗರದ ಮಜೀರ್‌ಪಳ್ಳದ ನಿವಾಸಿ ದಿ| ಇಬ್ರಾಹಿಂ ಅವರ ಪುತ್ರ ಅಬ್ದುಲ್‌ ಹಮೀದ್‌ (38) ಅವರು ದುಬಾೖಯ ಆಸ್ಪತ್ರೆಯಲ್ಲಿ ಸಾವಿಗೀಡಾದರು. 20 ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಯಾಂಪಲ್‌ ಪರೀಕ್ಷೆಯಲ್ಲಿ ಅವರಿಗೆ ಕೋವಿಡ್ 19 ವೈರಸ್ ಸೋಂಕು ದೃಢಗೊಂಡಿತ್ತು. ಒಂದು ವಾರದ ಹಿಂದೆ ಅವರ ಪರಿಸ್ಥಿತಿ ಗಂಭೀರ ಸ್ಥಿತಿಗೆ ತಲುಪಿತ್ತು.

ದುಬಾೖಯಲ್ಲಿ ಚಾಲಕರಾಗಿ ದುಡಿಯುತ್ತಿದ್ದ ಅಶರು 8 ತಿಂಗಳ ಹಿಂದೆ ಊರಿಗೆ ಬಂದು ವಾಪಸಾಗಿದ್ದರು.
ಸೋಮವಾರ ಕೇರಳದ ಒಟ್ಟಪ್ಪಾಲಂ ಮತ್ತು ಪತ್ತನಂತಿಟ್ಟ ನಿವಾಸಿಗಳಿಬ್ಬರು ಸೋಂಕಿನಿಂದ ಸಾವಿಗೀಡಾಗಿದ್ದರು. ಈ ವರೆಗೆ ದುಬಾೖಯಲ್ಲಿ ಆರು ಮಂದಿ ಸಹಿತ ಕೊಲ್ಲಿ ರಾಷ್ಟ್ರದಲ್ಲಿ ಕೇರಳದ ಒಟ್ಟು 14 ಮಂದಿ ಸಾವಿಗೀಡಾಗಿದ್ದಾರೆ. ಹಲವು ಮಂದಿ ಕೊಲ್ಲಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟಾಪ್ ನ್ಯೂಸ್

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ: ರವಿ

CT Ravi: ದೂರು ದಾಖಲಾಗದಿದ್ದರೆ ಬೆಳಗಾವಿ ಚಲೋ

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್‌

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

Karnataka: ಸರಕಾರದಿಂದ ಕನ್ನಡದ ಅಭಿವೃದ್ಧಿಯೂ ಶೂನ್ಯ: ಬಿ.ವೈ. ವಿಜಯೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ

12

Kasaragod crime News: ಶಾಲಾ ತರಗತಿಯಲ್ಲಿ ವಿದ್ಯಾರ್ಥಿನಿಗೆ ಹಾವು ಕಡಿತ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Kumble: ಯುವಕನ ಕೊಲೆ; ಆರು ಮಂದಿ ಅಪರಾಧಿಗಳು ಡಿ. 23ರಂದು ಶಿಕ್ಷೆ ತೀರ್ಪು ಘೋಷಣೆ

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆMandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.