ತುಂಡು ಬಟ್ಟೆಯ ಮೇಲಲ್ಲ ದೇವರ ಮೇಲೆ ವಿಶ್ವಾಸವಿಡಿ ಎಂದು ಮಾಸ್ಕ್ ಗೇಲಿ ಮಾಡಿದ ಯುವಕನಿಗೆ ಸೋಂಕು
ಕೋವಿಡ್ ಜಾಗೃತಿ ಸಂದೇಶಗಳನ್ನು ಟಿಕ್ ಟಾಕ್ ನಲ್ಲಿ ಗೇಲಿ ಮಾಡುತ್ತಿದ್ದ ಮಧ್ಯಪ್ರದೇಶದ ಸಮೀರ್ ಖಾನ್
Team Udayavani, Apr 12, 2020, 7:25 AM IST
ಸಾಗರ್ (ಮಧ್ಯಪ್ರದೇಶ): ಕೋವಿಡ್ ವೈರಸ್ ಸಾಂಕ್ರಾಮಿಕ ರೋಗವಾಗಿರುವ ಕಾರಣದಿಂದ ಹೊರಗಡೆ ಓಡಾಡುವ ಸಂದರ್ಭದಲ್ಲಿ ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂಬ ಜಾಗೃತಿ ಸಂದೇಶಗಳನ್ನು ಟಿಕ್ ಕಾಟ್‌ನಲ್ಲಿ ಗೇಲಿ ಮಾಡುತ್ತಿದ್ದ ಯುವಕನಿಗೆ ಇದೀಗ ಕೋವಿಡ್ ಸೋಂಕು ತಗುಲಿರುವುದು ದೃಢವಾಗಿದೆ.
ಮಧ್ಯಪ್ರದೇಶ ಸಾಗರ್ ಪ್ರದೇಶದ ಸಮೀರ್ ಖಾನ್ ಎಂಬ ಟಿಕ್ ಟಾಕ್ ಸ್ಟಾರ್ ಈ ವಿಡಿಯೋ ಆ್ಯಪ್ ನಲ್ಲಿ ಮಾಸ್ಕ್ ಧರಿಸುವುದನ್ನು ಲೇವಡಿ ಮಾಡಿ ಕೆಲವೊಂದು ವಿಡಿಯೋಗಳನ್ನು ಅಪ್ ಲೋಡ್ ಮಾಡಿದ್ದ.
‘ನೀನು ಮಾಸ್ಕ್ ಧರಿಸುವುದಿಲ್ಲವೇ’ ಎಂದು ಹಿನ್ನಲೆ ಧ್ವನಿ ಕೇಳುವ ಸಂದರ್ಭದಲ್ಲಿ ‘ಈ ತುಂಡು ಬಟ್ಟೆಯ ಮೇಲೇಕೆ ನಿಮಗೆ ವಿಶ್ವಾಸ ; ವಿಶ್ವಾಸ ಇಡುವುದಾದರೆ ಮೇಲಿರುವವನ ಮೇಲೆ ಇಡು’ ಎಂಬರ್ಥದ ಡೈಲಾಗ್ ಹೊಡೆಯುವ ವಿಡಿಯೋ ಟಿಕ್ ಟಾಕ್ ನಲ್ಲಿ ವೈರಲ್ ಆಗಿತ್ತು.
ಇತ್ತೀಚೆಗೆ ಸಮೀರ್ ಖಾನ್ ಜಬಲ್ಪುರದಲ್ಲಿಯ ತನ್ನ ಸಹೋದರಿ ಮನೆಗೆ ಭೇಟಿ ನೀಡಿದ್ದ. ಬಳಿಕ ಆತನನ್ನು ಆಸ್ಪತ್ರೆಯೊಂದರ ಪ್ರತ್ಯೇಕ ನಿಗಾ ಘಟಕದಲ್ಲಿ ಇರಿಸಿ ತಪಾಸಣೆ ನಡೆಸಿದ ಬಳಿಕ ಸೋಂಕು ದೃಢಪಟ್ಟಿತ್ತು. ಇದೀಗ ತಾನಿರುವ ಆಸ್ಪತ್ರೆಯ ವಾರ್ಡ್ ನಿಂದ ಸೆಲ್ಫೀ ವಿಡಿಯೋ ಒಂದನ್ನು ಮಾಡಿ ತನ್ನ ಆರೋಗ್ಯದ ಚೇತರಿಸುವಿಕೆಗೆ ಹಾರೈಸುವಂತೆ ಸಮೀರ್ ತನ್ನ ಗೆಳೆಯರಲ್ಲಿ ಮತ್ತು ಹಿತೈಷಿಗಳಲ್ಲಿ ವಿನಂತಿಸಿಕೊಂಡಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೊಂದು ಬೆದರಿಕೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.