ಕೋವಿಡ್ ಸೋಂಕಿನ ವರದಿ ಕೈ ಸೇರಿದಾಗ ಹೊಸ ಪೋಸ್ಟಿಂಗ್ ಆರ್ಡರ್ ಎಂದುಕೊಂಡ CRPF ಯೋಧ!
ಎದೆಗುಂದದೆ ಸೋಂಕು ಗೆದ್ದ CRPF ಯೋಧ ಸತ್ಯಬೀರ್ ಸಿಂಗ್ ಯಶೋಗಾಥೆ
Team Udayavani, May 13, 2020, 5:39 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ‘ನನಗೆ ಕೋವಿಡ್ ಇರುವುದನ್ನು ದೃಢಪಡಿಸಿದ ವೈದ್ಯಕೀಯ ದಾಖಲೆಗಳನ್ನು ಓದಿದಾಗ ನಾನು ಧೃತಿಗೆಡಲಿಲ್ಲ. ಇದು ನನ್ನ ಹೊಸ ಪೋಸ್ಟಿಂಗ್‌ನ ಆದೇಶ ಎಂದು ತಿಳಿದುಕೊಂಡೆ.
ನನ್ನನ್ನು ಈ ಹಿಂದೆ, ನಕ್ಸಲ್ ಪೀಡಿತ ಪ್ರದೇಶಗಳಿಗೆ ವರ್ಗಾವಣೆ ಮಾಡಲಾಗಿತ್ತು. ಹಾಗೆಯೇ ಇದೂ ಒಂದು ಹೊಸ ವರ್ಗಾವಣೆ ಆದೇಶ ಎಂದು ತಿಳಿದುಕೊಂಡೆ’
– ಇದು ಕೋವಿಡ್ ವೈರಸ್ ಗೆದ್ದು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಸಿಆರ್‌ಪಿಎಫ್ ಯೋಧ ಸತ್ಯಬೀರ್ ಸಿಂಗ್ ಹೇಳಿಕೆ.
ನವದೆಹಲಿಯ ಸಿಆರ್‌ಪಿಎಫ್ ಕೇಂದ್ರದಲ್ಲಿ ಹಲವಾರು ಸೋಂಕಿಗೆ ತುತ್ತಾಗಿದ್ದವರ ಪೈಕಿ ಸತ್ಯಬೀರ್ ಸಿಂಗ್ ಒಬ್ಬರು. ಅವರು 31ನೇ ಬೆಟಾಲಿಯನ್‌ನಲ್ಲಿ ರೇಡಿಯೋ ಆಪರೇಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೀಘ್ರದಲ್ಲಿಯೇ ಅವರು ಚೇತರಿಕೆ ಕಂಡಿದ್ದು ಅಚ್ಚರಿಗೆ ಕೂಡ ಕಾರಣವಾಗಿದೆ.
ಇದಕ್ಕೆ ಸಿಂಗ್, “ನಾನು ಕೋವಿಡ್ ಬಂದಿರುವ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಹಾಗಾಗಿಯೇ ಬೇಗನೇ ಗುಣಮುಖನಾಗಲು ಕಾರಣವಾಯಿತು.
ಸೋಂಕಿಗೆ ಒಳಗಾದಾಗ ಕೊರಗಿದಷ್ಟೂ, ಎದೆಗುಂದಿದಷ್ಟೂ ಅದು ಹೆಚ್ಚು ಕಾಡುತ್ತದೆ. ವೈದ್ಯರು ಹೇಳಿದ್ದನ್ನು ಪಾಲಿಸಿದರೆ ಆ ರೋಗವನ್ನು ಎಂಥವರಾದರೂ ಗೆಲ್ಲಬಹುದು’ ಎಂದರು.
ಆತ್ಮಹತ್ಯೆ: ಕೋವಿಡ್ ಭೀತಿಯಿಂದ CRPFನ ಸಬ್ ಇನ್ಸ್‌ಪೆಕ್ಟರ್ ಫತ್ಹಾ ಸಿಂಗ್ (55) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮಟಾನ್ ನಗರದಲ್ಲಿ ಈ ದುರಂತ ನಡೆದಿದೆ. ಇದೇ ವೇಳೆ ಕೋಲ್ಕತಾದಲ್ಲಿ CISFನ ಅಧಿಕಾರಿ ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Siddakatte Kodange Kambala: ಈ ಸೀಸನ್ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Maharashtra polls; ದೇಶ ಒಡೆಯುವ ಮಾತನಾಡುವವರಿಗೆ ತಕ್ಕ ಪಾಠ: ಕಂಗನಾ
IPL 2025 Auction: ಮೊದಲ ಎರಡು ಸುತ್ತಿನಲ್ಲಿ ಮಾರಾಟವಾದ ಆಟಗಾರರ ಸಂಪೂರ್ಣ ಪಟ್ಟಿ..
IPL Auction: ಡೆಲ್ಲಿ ಕ್ಯಾಪಿಟಲ್ಸ್ ಪಾಲಾದ ಕೆಎಲ್ ರಾಹುಲ್; ಖರೀದಿ ಆರಂಭಿಸಿದ ಆರ್ ಸಿಬಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.