ಕೋವಿಡ್ ಪರಿಹಾರ ಚೆಕ್‌ಗಳಲ್ಲಿ ಟ್ರಂಪ್ ನಾಮ
Team Udayavani, Apr 16, 2020, 3:11 PM IST
ವಾಷಿಂಗ್ಟನ್: ಶ್ವೇತ ಭವನದಲ್ಲಿ ಅಧ್ಯಕ್ಷ ಟ್ರಂಪ್ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಲಹೆ, ಸೂಚನೆಗಳನ್ನು ಆಲಿಸಿದರು.
ವಾಷಿಂಗ್ಟನ್: ಕೋವಿಡ್ ಸಂತ್ರಸ್ತರಿಗೆ ನೀಡುವ ಪರಿಹಾರದ ಚೆಕ್‌ನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು ಇರಲಿದೆ. ಈ ಕುರಿತು ಅಮೆರಿಕ ಸರಕಾರ ಆದೇಶ ಹೊರಡಿಸಿದೆ. ಕೋವಿಡ್‌ನಿಂದಾಗಿ ಸಂತ್ರಸ್ತರಾಗಿರುವ ಲಕ್ಷಗಟ್ಟಲೆ ಜನರಿಗೆ ಅಮೆರಿಕ ಸರಕಾರ ಉತ್ತೇಜನಾ ಪರಿಹಾರ ನೀಡಲಿದೆ. ಆದರೆ ಚೆಕ್‌ಗಳಲ್ಲಿ ಟ್ರಂಪ್ ಹೆಸರು ಮುದ್ರಿಸುವ ನಿರ್ಧಾರದಿಂದಾಗಿ ಪರಿಹಾರ ವಿತರಣೆ ವಿಳಂಬವಾಗಲಿದೆ ಎಂಬ ಟೀಕೆ ವ್ಯಕ್ತವಾಗಿದೆ.
ಅಮೆರಿಕದ ಕಂದಾಯ ಇಲಾಖೆಯ ಬಹುತೇಕ ಅಧಿಕಾರಿಗಳು ಮನೆಯಿಂದ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಟ್ರಂಪ್ ಹೆಸರು ಮುದ್ರಿಸುವ ನಿರ್ಧಾರದಿಂದ ಪರಿಹಾರ ವಿತರಣೆ ವಿಳಂಬವಾಗುವುದು ಖಚಿತ ಎಂದು ವಿರೋಧ ಪಕ್ಷದವರೂ ಹೇಳುತ್ತಿದ್ದಾರೆ. ಇದರ ಮಧ್ಯೆ ಇಂಥದೊಂದು ಪ್ರಚಾರ ಪಡೆಯುವ ತಂತ್ರ ಈ ಹೊತ್ತಿನಲ್ಲಿ ಅಗತ್ಯವಿತ್ತೇ? ಸೂಕ್ತವಾದುದೇ ಎಂಬ ಟೀಕೆಯೂ ಕೇಳಿಬರುತ್ತಿದೆ. ಹಾಗೆಂದು ಟ್ರಂಪ್ ಹೆಸರು ಮುದ್ರಿಸುವ ನಿರ್ಧಾರವನ್ನು ಸರಕಾರ ಬದಲಿಸಿಲ್ಲ.
1,200 ಡಾಲರ್ ಪರಿಹಾರ
ಕೋವಿಡ್ ಪರಿಹಾರಕ್ಕಾಗಿ ಅಮೆರಿಕ ಸರಕಾರ 2.3 ಲಕ್ಷ ಕೋಟಿ ಡಾಲರ್‌ನ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಇದರಂಗವಾಗಿ ಲಕ್ಷಗಟ್ಟಲೆ ಸಂತ್ರಸ್ತರಿಗೆ 1,200 ಡಾಲರ್‌ನ ಪರಿಹಾರ ಚೆಕ್ ಕಳುಹಿಸಲಾಗುವುದು. ಆದರೆ ಈ ಚೆಕ್‌ಗಳಲ್ಲಿ ತನ್ನ ಹೆಸರನ್ನು ಮುದ್ರಿಸಿಕೊಳ್ಳುವ ಮೂಲಕ ಟ್ರಂಪ್ ನವಂಬರ್‌ನಲ್ಲಿರುವ ಚುನಾವಣೆಗೆ ತಯಾರಿ ಮಾಡುತ್ತಿದ್ದಾರೆಂಬ ಟೀಕೆಗಳು ಕೇಳಿ ಬಂದಿವೆ ಎಂಬುದಾಗಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ನೆಲಕಚ್ಚಿರುವ ಆರ್ಥಿಕತೆಯನ್ನು ಉತ್ತೇಜಿಸುವ ಸಲುವಾಗಿ ಸರಕಾರ ಈ ಉತ್ತೇಜನಾ ಪರಿಹಾರವನ್ನು ನೀಡಿದೆ. ಚೆಕ್ ಮೆಮೊ ಲೈನ್‌ನಲ್ಲಿ ಟ್ರಂಪ್ ಹೆಸರು ಮುದ್ರಿಸಲಾಗುವುದು. ಇದನ್ನು ಎಕಾನಾಮಿಕ್ ಇಂಪ್ಯಾಕ್ಟ್ ಪೇಮೆಂಟ್ ಎಂದು ಹೆಸರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kim Jong Un: ಉತ್ತರ ಕೊರಿಯಾದಿಂದ ಆತ್ಮಹತ್ಯಾ ಡ್ರೋನ್ ಪರೀಕ್ಷೆ
Iran: ಹಿಜಾಬ್ ನಿರಾಕರಿಸಿದರೆ ವಿಶೇಷ ಕ್ಲಿನಿಕ್: ಇರಾನ್ ತೀರ್ಮಾನಕ್ಕೆ ಆಕ್ರೋಶ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
MUST WATCH
ಹೊಸ ಸೇರ್ಪಡೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Maharashtra Election: ಬೂತ್ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.