ಉದಯವಾಣಿ ಫೋನ್ ಇನ್ – ಮೇ 3ರ ಬಳಿಕ ಸಾರ್ವಜನಿಕ ಸಾರಿಗೆ ಅನಿಶ್ಚಿತ: ಉಡುಪಿ ಡಿಸಿ ಜಗದೀಶ್
ಎಲ್ಲಿದ್ದೀರೋ ಅಲ್ಲೇ ಇರಿ, ಸುರಕ್ಷಿತವಾಗಿರಿ, ಕ್ಷೇಮವಾಗಿರಿ
Team Udayavani, Apr 22, 2020, 5:23 AM IST
ಉದಯವಾಣಿ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಭಾಗವಹಿಸಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿಯ ಜನತೆಯೂ ಲಾಕ್‌ಡೌನ್ ನಿಯಮ ಪಾಲಿಸುತ್ತಿದ್ದಾರೆ. ಇಂದು, ಎಪ್ರಿಲ್ 21ರಂದು ಕೊನೆಗೊಳ್ಳಬೇಕಿದ್ದ ನಿರ್ಬಂಧ ಮೇ 3ರ ವರೆಗೂ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಇರಬಹುದಾದ ಸಂಶಯ ಮತ್ತು ಸಮಸ್ಯೆಗಳ ಕುರಿತು ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಂದಲೇ ವಿವರಣೆ ಪಡೆಯಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಯಿತು. ಈ ಸಂಬಂಧ ಏರ್ಪಡಿಸಲಾಗಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಎರಡೂ ಜಿಲ್ಲೆಗಳಿಂದ ಬಂದ ಹಲವಾರು ಪ್ರಶ್ನೆಗಳಿಗೆ ಅನುಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸಿಂಧೂ ಬಿ. ರೂಪೇಶ್ ಮತ್ತು ಉಡುಪಿಯ ಜಿ. ಜಗದೀಶ್ ಉತ್ತರಿಸಿದರು.
ಉಡುಪಿ: ಕೋವಿಡ್ 19 ವೈರಸ್ ತೀವ್ರತೆ ಇನ್ನೂ ತಗ್ಗದ ಕಾರಣ ಮೇ 3ರ ಬಳಿಕವೂ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಆರಂಭ ಕಷ್ಟ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ‘ಉದಯವಾಣಿ’ ಮಣಿಪಾಲ ಕೇಂದ್ರ ಕಚೇರಿಯಲ್ಲಿ ಜಿಲ್ಲೆಯ ನಾಗರಿಕರ ಕರೆಗಳಿಗೆ ಉತ್ತರ ನೀಡುವಾಗ ವಿವರಿಸಿ, ಬಸ್, ರೈಲು, ವಿಮಾನಯಾನ ಕೂಡಲೇ ಆರಂಭವಾಗದು. ಬಸ್‌ಗಳಲ್ಲಿ ಪ್ರತಿ ಆಸನದಲ್ಲಿ ಒಬ್ಬೊಬ್ಬರನ್ನು ಕುಳ್ಳಿರಿಸಿದರೂ ಸಾಮಾಜಿಕ ಅಂತರ ಕಾಪಾಡಲಾಗದು ಎಂದರು.
ಆಯಾ ಜಿಲ್ಲೆಯೊಳಗೆ ಕಾರ್ಮಿಕರು ಕೆಲಸ ಮಾಡಲು ಸರಕಾರ ಅನುಮತಿಸಬಹುದು. ನಗರಗಳಿಗಿಂತ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚು ವಿನಾಯಿತಿ ಸಿಗಬಹುದು. ನಗರಗಳಲ್ಲಿ ಎಲ್ಲ ಒಮ್ಮೆಲೆ ಆರಂಭಿಸಲಾಗದು ಎಂದರು.
ಕೃಷಿ ಚಟುವಟಿಕೆಗೆ ನಿರ್ಬಂಧವಿಲ್ಲ
ಕೃಷಿ ಸಂಬಂಧಿತ ಕೆಲಸಗಳಿಗೆ ಯಾವುದೇ ನಿರ್ಬಂಧ ವಿಲ್ಲ ಮತ್ತು ಇದಕ್ಕೆ ಸಂಬಂಧಿಸಿ ಅಂತರ್ಜಿಲ್ಲಾ ಸಂಚಾರ ನಿರ್ಬಂಧವಿಲ್ಲ ಎಂದು ತಿಳಿಸಿದರು.
ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ಕುರಿತ ಪ್ರಶ್ನೆಗೆ ಉತ್ತರಿಸಿ, ಎಸೆಸೆಲ್ಸಿ, ಪಿಯುಸಿ ಪರೀಕ್ಷೆ ನಡೆಯಲೇಬೇಕಲ್ಲ? ಯಾವಾಗ, ಹೇಗೆ ಎಂದು ಹೇಳುವುದು ಕಷ್ಟ ಎಂದರು.
ಎಲೆಕ್ಟ್ರಾನಿಕ್ಸ್ ಮಳಿಗೆ – ಸೇವಾ ವಿಭಾಗ ಎಲೆಕ್ಟ್ರಾನಿಕ್ಸ್ ಮಳಿಗೆಗಳು ಮತ್ತು ಸೇವಾ ವಿಭಾಗಗಳ ಸೇವೆಯನ್ನು ಬೆಳಗಿನ ಸೀಮಿತ ಅವಧಿಯಲ್ಲೇ ಕಾರ್ಯಾಚರಿಸಲು ಅನುಮತಿಸಲು ಸಾಧ್ಯವೇ ಎಂಬ ಪ್ರಶ್ನೆಗೆ, ಇಲೆಕ್ಟ್ರಾನಿಕ್ ಉತ್ಪನ್ನಗಳ, ಮೊಬೈಲ್ ಶಾಪ್ ಗಳು ಮತ್ತು ಸೇವಾ ವಿಭಾಗದ ಅಗತ್ಯ ತಿಳಿದಿದೆ. ಆದರೆ ರಾಜ್ಯ ಸರಕಾರದ ಆದೇಶ ಒಂದೆರಡು ದಿನಗಳಲ್ಲಿ ಬರಲಿದ್ದು, ಬಳಿಕ ತೀರ್ಮಾನಿಸಲಾಗುವುದು ಎಂದರು.
ನೀವು ಅಲ್ಲೇ ಇರಿ, ಕ್ಷೇಮವಾಗಿರಿ
ಬೆಳಗಾವಿ, ವಿಜಯಪುರ ಜಿಲ್ಲೆಗಳ ಸ್ಥಿತಿ ನೋಡಿ. ಮಹಾರಾಷ್ಟ್ರಕ್ಕೂ ಇಲ್ಲಿನವರಿಗೂ ಬಹಳ ನಿಕಟ ಸಂಬಂಧವಿದೆ. ಹಾಗಾಗಿ ಒಂದು ಜಿಲ್ಲೆಯಿಂದ ಮತ್ತೂಂದು ಜಿಲ್ಲೆಗೆ ಹೋಗದಂತೆ ತಡೆಯುತ್ತಿದ್ದೇವೆ. ಅದೊಂದೇ ಸುರಕ್ಷಿತ ಮಾರ್ಗ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಮುಂಬಯಿ – ಪುಣೆಯಲ್ಲಿರುವ ಕರಾವಳಿಗರನ್ನು ಕರೆ ತರುವ ಕುರಿತು ಕೇಳಿದಾಗ, ಪ್ರಸ್ತುತ ಅಂತಾರಾಜ್ಯ ಸಂಚಾರ ನಿರ್ಬಂಧವಿದ್ದು, ಸದ್ಯದ ಸ್ಥಿತಿಯಲ್ಲಿ ಅಸಾಧ್ಯ. ಅವರು ಅಲ್ಲೇ ಇರುವುದು ಅವರ ದೃಷ್ಟಿಯಲ್ಲೂ ಕ್ಷೇಮ, ನಮ್ಮ ದೃಷ್ಟಿಯಲ್ಲೂ ಕ್ಷೇಮ ಎಂದರು.
ಅನೇಕ ಜಿಲ್ಲೆಗಳಲ್ಲಿ ಕೋವಿಡ್ 19 ವೈರಸ್ ಇಲ್ಲ. ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕಲ್ಲವೆ? ಒಂದೊಮ್ಮೆ ಸಾರ್ವಜನಿಕ ಸಾರಿಗೆ ಆರಂಭಿಸಿದರೆ ಇವರನ್ನೂ ಸಂಕಷ್ಟಕ್ಕೆ ದೂಡಿದಂತಾಗುತ್ತದೆ.
ಜನರು ಒಂದೆಡೆ ಯಿಂದ ಮತ್ತೂಂದೆಡೆಗೆ ಸಂಚರಿಸಿದಾಗ ಸಮಸ್ಯೆ ತಲೆದೋರುತ್ತದೆ. ನಾವು ಗಡಿಯನ್ನು ಸಂಪೂರ್ಣ ಸೀಲ್ ಮಾಡಿರುವುದು ಇದೇ ಕಾರಣಕ್ಕೆ. ಹೀಗಾಗಿ ನಾನು ಕೆಟ್ಟವನಾಗಿದ್ದೇನೆ ಎಂದರು ಜಿಲ್ಲಾಧಿಕಾರಿಯವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.