ಉಗಾಂಡಾ : ಲಾಕ್‌ಡೌನ್‌ ನಿಯಮಗಳೇ ಮುಳುವಾಗುತ್ತಿವೆಯಂತೆ !

Team Udayavani, Apr 24, 2020, 3:32 PM IST

ಉಗಾಂಡಾ : ಲಾಕ್‌ಡೌನ್‌ ನಿಯಮಗಳೇ ಮುಳುವಾಗುತ್ತಿವೆಯಂತೆ !

ಮಣಿಪಾಲ: ಕೋವಿಡ್‌-19 ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರಕಾರ ಸಂಚಾರ ಮತ್ತು ಸಾರಿಗೆ ವ್ಯವಸ್ಥೆ ಮೇಲೆ ನಿರ್ಬಂಧಗಳನ್ನು ಹೇರಿದೆ. ಈ ಮೂಲಕ ಸೋಂಕು ಪ್ರಸರಣ ಮಟ್ಟ ನಿಯಂತ್ರಣವಾಗಿ ಮರಣ ಪ್ರಮಾಣವನ್ನು ಕಡಿತಗೊಳಿ ಸುವುದೇ ಎಲ್ಲ ದೇಶಗಳ ಗುರಿ. ಆದರೆ ಜನ ಹಿತಕ್ಕಾಗಿ ಮಾಡಿರುವ ಈ ನಿಯಮಗಳು ಉಗಾಂಡಾ ದೇಶದ ಮಕ್ಕಳ ಮತ್ತು ಗರ್ಭಿಣಿಯರ ಸಾವು-ನೋವುಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪ ಎದುರಿಸುತ್ತಿದೆ. ಇಲ್ಲಿನ ಗುಲು ಜಿಲ್ಲೆಯ ನ್ಯಾಪೇಯ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ತನ್ನ 12 ವರ್ಷದ ಮಗನನ್ನು ಕಳೆದುಕೊಂಡ ತಾಯಿ ತನ್ನ ಮಗನ ಸಾವನ್ನು ನೆನೆದು ಗೋಳಿಡುತ್ತಿದ್ದಾಳೆ. ಸೋಂಕು ಸೃಷ್ಟಿಸಿರುವ ಅವಾಂತರದಿಂದ ಹೆತ್ತ ಕರುಳನ್ನು ಕಳೆದುಕೊಂಡ ಜೀನೆಟ್‌ ಅರೋಮೊರಾಚ್‌ ತನ್ನ ಮಗ ಸ್ಟೀವರ್ಟ್‌ನ ಸಾವಿಗೆ ದೇಶದಲ್ಲಿ ಜಾರಿಯಲ್ಲಿ ಇರುವ ಸಾರಿಗೆ ವ್ಯವಸ್ಥೆ ನಿಬಂಧನೆಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಡೆದದ್ದೇನು ?
ಬಾಲ್ಯದಿಂದಲೂ ಸ್ಟೀವರ್ಟ್‌ ರುಬಮ್ಗ-ಕ್ವೂ ಗುಲ್ಮ ಕಾಯಿಲೆಯಿಂದ ಬಳಲುತ್ತಿದ್ದು, ಪ್ರತಿ ತಿಂಗಳು ರಕ್ತ ವರ್ಗಾವಣೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದ. ಆದರೆ ಮಾರ್ಚ್‌ 31ರ ಬೆಳಗ್ಗೆ, ಅವನ ಆರೋಗ್ಯ ದಲ್ಲಿ ಕೊಂಚ ಏರುಪೇರಾಯಿತು. ತತ್‌ಕ್ಷಣವೇ ಎಚ್ಚೆತ್ತ ಹೆತ್ತವರು ಗ್ರಾಮದಿಂದ 2ಕಿ.ಮೀ ದೂರ ದಲ್ಲಿರುವ ಚಿಕಿತ್ಸಾಲಯಕ್ಕೆ ಸ್ಟೀವರ್ಟ್‌ನನ್ನು ದಾಖಲಿ ಸಿದರು. ಆದರೆ ಅಲ್ಲಿನ ವೈದ್ಯಕೀಯ ಸಿಬ್ಬಂದಿ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಮುಖ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದರು. ಆದರೆ ಚಿಕಿತ್ಸಾಲಯಲ್ಲಿದ್ದ ಬೆರಳಣಿಕೆಯ ಎಲ್ಲ ಆಂಬ್ಯುಲೆನ್ಸ್‌ ಗಳು ಕಾರ್ಯ ನಿರತವಾಗಿದ್ದವು. ಕೂಡಲೇ ಜಾಗೃತಗೊಂಡ ಆಸ್ಪತ್ರೆಯ ದಾದಿ ಸ್ಥಳೀಯ ಇತರೆ ಖಾಸಗಿ ವಾಹನ ಮಾಲಕರ ಬಳಿ ಆಸ್ಪತ್ರೆಗೆ ತಲುಪಿಸುವಂತೆ ಮನವಿ ಮಾಡಿದರು. ಆದರೆ ದೇಶಾದ್ಯಂತ ಜಾರಿಯಲ್ಲಿದ್ದ ಲಾಕ್‌ಡೌನ್‌ ನಿಯಮಕ್ಕೆ ಹೆದರಿ ವಾಹನ ಚಾಲಕರು ಬಾಲಕನನ್ನು ಕರೆದೊಯ್ಯಲು ಹಿಂಜರಿದರು.

ದಿನ ಕಳೆದಂತೆ ಸ್ಟೀವರ್ಟ್‌ನ ಸ್ಥಿತಿ ಹದಗೆಟ್ಟಿತು. ಅಂತಿಮವಾಗಿ ಆಂಬ್ಯುಲೆನ್ಸ್ ವ್ಯವಸ್ಥೆಯಾಯಿತು. ಗ್ರಾಮದಿಂದ 20 ಕಿ.ಮೀ ದೂರವಿರುವ ಗುಲು ಪ್ರಾದೇಶಿಕ ಆಸ್ಪತ್ರೆಗೆ ವರ್ಗಾವಣೆ ಮಾಡಲಾಯಿತು. ಆದರೆ ದುರದೃಷ್ಟವಶಾತ್‌ ಆಸ್ಪತ್ರೆಗೆ ದಾಖಲಾಗಿ ಎಂಟು ಗಂಟೆಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಆತ ಅಸುನೀಗಿದ. ಆದರೆ ಆತನ ಸಾವಿಗೆ ನಿಖರವಾದ ಕಾರಣ ಏನು ಎಂಬುದನ್ನು ಸ್ಪಷ್ಟ ಪಡಿಸಿದ ವೈದ್ಯರು ಮರಣೋತ್ತರ ಪರೀಕ್ಷೆಯೂ ಮಾಡದೇ ಶವ‌ವನ್ನು ಹಸ್ತಾಂತರಿಸಿದರು. ಇತ್ತ ಸಾರಿಗೆ ವ್ಯವಸ್ಥೆ ಇದ್ದಿದ್ದರೆ ಅಥವಾ ನಿರ್ಬಂಧ ಇರದಿದ್ದರೆ ನನ್ನ ಮಗ ಬದುಕುಳಿ ಯುತ್ತಿದ್ದ ಎಂದು ದುಃಖ ವ್ಯಕ್ತಪಡಿಸುತ್ತಾರೆ ಅರೋಮೊರಾಚ್‌.

ಹಲವರ ಕಥೆಯೂ ಇದೆ
ಇದು ಸ್ಟೀವರ್ಟ್‌ ಒಬ್ಬನ ಕಥೆ ಇಲ್ಲ. ಸಾರಿಗೆ ನಿರ್ಬಂಧ ಜಾರಿಯಾದ ದಿನದಿಂದ ಕನಿಷ್ಠ 11 ಗರ್ಭಿಣಿಯರು ಸಾವನ್ನಪ್ಪಿದ್ದಾರೆ ಎಂದು ರಾಜಧಾನಿ ಕಂಪಾಲಾ ಮೂಲದ ಹಕ್ಕುಗಳ ಸಮೂಹವಾದ ಮಹಿಳಾ ಪ್ರೋಬೊನೊ ಇನಿಶಿಯೇಟಿವ್‌ ಸಂಸ್ಥೆ ದೂರಿದೆ. ಜತೆಗೆ ಅಲ್ಲಿನ ಸ್ಥಳೀಯ ಮಾಧ್ಯಮಗಳು ಈ ಕುರಿತು ವರದಿ ಮಾಡಿದ್ದು, ಈಗಾಗಲೇ ಸಂಚಾರ ವ್ಯವಸ್ಥೆ ನಿಬಂಧನೆಯಿಂದ ಹಲವು ಮಕ್ಕಳು ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ್ದು, ಸಂಪೂರ್ಣ ಸಾವಿನ ಅಂಕಿ-ಅಂಶ ಇನ್ನು ತಿಳಿಯಬೇಕಷ್ಟೇ ಎಂದು ಹೇಳಿದೆ. ಘಟನೆ ಕುರಿತು ಸಂಬಂಧಿತ ಅಧಿಕಾರಿಗಳನ್ನು ಅಲ್ಲಿನ ಮಾಧ್ಯಮಗಳು ಸಂಪರ್ಕಿಸಿದ್ದು, ಆರೋಗ್ಯ ಸಚಿವಾಲಯ ಮೊದಲು ನಿರ್ಬಂಧಗಳಿಂದ ಸಾವನ್ನಪ್ಪಿರುವವರ ಸಂಖ್ಯೆ ಮತ್ತು ಪುರಾವೆಗಳನ್ನು ಕೇಳಿದೆ. ಆದರೆ ಸಾಕ್ಷಾÂಧಾರ ಒದಗಿಸಿ ಅನಂತರ ಇಲಾಖೆಯನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ದು, ಅಧಿಕಾರಿಗಳು ಮಾಧ್ಯಮಗಳಿಂದ ಬಂದ ಕರೆಗಳಿಗೆ ಉತ್ತರಿಸಲು ನಿರಾಕರಿಸಿದ್ದಾರೆ.

ಅಗತ್ಯ ಸೇವೆ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆಗಳಿಗೆ ಆ್ಯಂಬು ಲೆನ್ಸ್‌ ಸೇರಿದಂತೆ ವಾಹನ ಚಲಾವಣೆಗೆ ಅನುಮತಿ ಇದೆ ಎನ್ನುತ್ತದೆ ಸ್ಥಳೀಯ ಆಡಳಿತ.

ಟಾಪ್ ನ್ಯೂಸ್

Tamil Nadu: ಡಿಎಂಕೆ ಸರಕಾರ ಇಳಿಸುವವರೆಗೂ ಚಪ್ಪಲಿ ಧರಿಸಲ್ಲ: ಕೆ.ಅಣ್ಣಾಮಲೈTamil Nadu: ಡಿಎಂಕೆ ಸರಕಾರ ಇಳಿಸುವವರೆಗೂ ಚಪ್ಪಲಿ ಧರಿಸಲ್ಲ: ಕೆ.ಅಣ್ಣಾಮಲೈ

Tamil Nadu: ಡಿಎಂಕೆ ಸರಕಾರ ಇಳಿಸುವವರೆಗೂ ಚಪ್ಪಲಿ ಧರಿಸಲ್ಲ: ಕೆ.ಅಣ್ಣಾಮಲೈ

Negotiation: ಹೆಬ್ಬಾಳ್ಕರ್‌-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ

ಲೋಕ ಚುನಾವಣೆಯಲ್ಲಿ ಪುರುಷರಗಿಂತ ಸ್ತ್ರೀಯರಿಗಿಂತ ಹೆಚ್ಚು ಮತದಾನ: ಚು.ಆಯೋಗ

ಲೋಕ ಚುನಾವಣೆಯಲ್ಲಿ ಪುರುಷರಗಿಂತ ಸ್ತ್ರೀಯರಿಗಿಂತ ಹೆಚ್ಚು ಮತದಾನ: ಚು.ಆಯೋಗ

1-horoscope

Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ

ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ

ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ

BYV

Poster Dispute: ಭಾರತ ಭೂಶಿರ ವಿರೂಪ: ಬಿಜೆಪಿಯ ಇಂದಿನ ಪ್ರತಿಭಟನೆ ರದ್ದು

RRN-Muni

Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Tamil Nadu: ಡಿಎಂಕೆ ಸರಕಾರ ಇಳಿಸುವವರೆಗೂ ಚಪ್ಪಲಿ ಧರಿಸಲ್ಲ: ಕೆ.ಅಣ್ಣಾಮಲೈTamil Nadu: ಡಿಎಂಕೆ ಸರಕಾರ ಇಳಿಸುವವರೆಗೂ ಚಪ್ಪಲಿ ಧರಿಸಲ್ಲ: ಕೆ.ಅಣ್ಣಾಮಲೈ

Tamil Nadu: ಡಿಎಂಕೆ ಸರಕಾರ ಇಳಿಸುವವರೆಗೂ ಚಪ್ಪಲಿ ಧರಿಸಲ್ಲ: ಕೆ.ಅಣ್ಣಾಮಲೈ

Negotiation: ಹೆಬ್ಬಾಳ್ಕರ್‌-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ

ಲೋಕ ಚುನಾವಣೆಯಲ್ಲಿ ಪುರುಷರಗಿಂತ ಸ್ತ್ರೀಯರಿಗಿಂತ ಹೆಚ್ಚು ಮತದಾನ: ಚು.ಆಯೋಗ

ಲೋಕ ಚುನಾವಣೆಯಲ್ಲಿ ಪುರುಷರಗಿಂತ ಸ್ತ್ರೀಯರಿಗಿಂತ ಹೆಚ್ಚು ಮತದಾನ: ಚು.ಆಯೋಗ

1-horoscope

Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ

ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ

ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.